More

    ಭಾರತದ ನೆರವಿನೊಂದಿಗೆ ನಿರ್ಮಿಸಿದ ಮಾರಿಷಸ್ ಸುಪ್ರೀಂಕೋರ್ಟ್ ಕಟ್ಟಡ ಉದ್ಘಾಟಿಸಿದ ಮೋದಿ

    ನವದೆಹಲಿ: ಭಾರತದ ನೆರವಿನೊಂದಿಗೆ ಮಾರಿಷಸ್​ನಲ್ಲಿ ನಿರ್ಮಿಸಲಾದ ಅಲ್ಲಿನ ಸುಪ್ರೀಂ ಕೋರ್ಟ್​ ಕಟ್ಟಡವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಆ ರಾಷ್ಟ್ರದ ಪ್ರಧಾನಿ ಪ್ರವಿಂದ ಕುಮಾರ ಜಗನ್ನಾಥ ಗುರುವಾರ ವಿಡಿಯೋ ಕಾನ್ಪರೆನ್ಸ್ ಮೂಲಕ ಜಂಟಿಯಾಗಿ ಉದ್ಘಾಟಿಸಿದರು. ತನ್ನ ವಿದೇಶ ನೀತಿಯ ಹಿಂದು ಮಹಾಸಾಗರ ವಲಯದ ದೇಶಗಳ ಸಹಕಾರ, ಸಹಭಾಗಿತ್ವದ ಅಂಗವಾಗಿ ಭಾರತ ಮಾರಿಷಸ್​ಗೆ ನೆರವು ನೀಡಿದೆ.

    ಈ ಸಂದರ್ಭದಲ್ಲಿ ಪ್ರಧಾನಿ ಮೋದಿ, ಸುಪ್ರೀಂ ಕೋರ್ಟ್​ನ ಹೊಸ ಕಟ್ಟಡ ಉಭಯ ದೇಶಗಳ ಸಹಕಾರದ ಸಂಕೇತವಾಗಿದೆ.ಮಾರಿಷಸ್​ನ ಮುಂದಿನ ತಲೆಮಾರಿನವರಿಗೂ ನೆರವಾಗುವುದು ಭಾರತದ ಉದ್ದೇಶವಾಗಿದೆ. ಆಧುನೀಕರಣ ಹಾಗೂ ಪರಿಶ್ರಮ ಕುರಿತ ಭಾರತದ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು. ಕೋವಿಡ್-19 ಮಹಾಮಾರಿಯನ್ನು ಪುಟ್ಟ ದೇಶ ಮಾರಿಷಸ್ ಎದುರಿಸಿದ ಬಗೆಯನ್ನು ಶ್ಲಾಘಿಸಿದರು. ಅದಕ್ಕೆ ಭಾರತ ವೈದ್ಯಕೀಯ ಮತ್ತಿತರ ನೆರವು ನೀಡಿದ್ದನ್ನು ಕೂಡ ಸ್ಮರಿಸಿದರು.

    ಇದನ್ನೂ ಓದಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು

    ‘ಸತ್ಯಮೇವ ಜಯತೆ’ ಸಿದ್ಧಾಂತದಲ್ಲಿ ತಮ್ಮ ದೇಶಕ್ಕೆ ನಂಬಿಕೆಯಿದೆ ಎಂದ ಮಾರಿಷಸ್ ಪ್ರಧಾನಿ ಜಗನ್ನಾಥ,‘ಶ್ರೀ ಮೋದೀಜಿ, ಹಮಾರಾ ದೇಶ್, ಹಮಾರಿ ಜನತಾ ಆಪ್​ಕೆ ಸಮರ್ಥನ್ ಕೆ ಲಿಯೆ ಆಭಾರಿ ಹೈ’ (ನಮ್ಮ ದೇಶ, ನಮ್ಮ ಜನರು ತಮ್ಮ ಬೆಂಬಲಕ್ಕಾಗಿ ಆಭಾರಿಯಾಗಿದ್ದೇವೆ) ಎಂದರು.

    ಇದನ್ನೂ ಓದಿ: ಬಹು ನಿರೀಕ್ಷಿತ ಯುಪಿಎಸ್​ಸಿ -ಸಿಎಂಎಸ್ ಪರೀಕ್ಷಾ ಅಧಿಸೂಚನೆ ಪ್ರಕಟ

    ಸುಪ್ರೀಂ ಕೋರ್ಟ್ ಕಟ್ಟಡದ ಬಗ್ಗೆ ಒಂದಿಷ್ಟು: ಸುಪ್ರೀಂಕೋರ್ಟ್ ನೂತನ ಕಟ್ಟಡ ರಾಜಧಾನಿ ಪೋರ್ಟ್ ಲೂಯಿಸ್​ನಲ್ಲಿದೆ. 2016ರಲ್ಲಿ ಭಾರತ ಆಶ್ವಾಸನೆ ನೀಡಿದ್ದ 2,643 ಕೋಟಿ ರೂಪಾಯಿ ಮೊತ್ತದ ಐದು ಯೋಜನೆಗಳ ವಿಶೇಷ ಆರ್ಥಿಕ ಪ್ಯಾಕೇಜ್​ನ ಭಾಗವಾಗಿದೆ ಈ ಕಟ್ಟಡ. ನಿಗದಿತ ಸಮಯದೊಳಗೆ ಮತ್ತು ನಿಗದಿಗಿಂತ ಕಡಿಮೆ ಮೊತ್ತದಲ್ಲಿ ಕಟ್ಟಡ ಕಾಮಗಾರಿ ಪೂರ್ಣವಾಗಿದೆ. 10 ಅಂತಸ್ತುಗಳಿವೆ. 4,700 ಚದರ ಮಿಟರ್​ಗಿಂತ ಹೆಚ್ಚು ವಿಸ್ತೀರ್ಣದಲ್ಲಿ ಕಟ್ಟಡ ನಿರ್ಮಾಣವಾಗಿದೆ. (ಏಜೆನ್ಸೀಸ್)

    ಹಣ ಹೂಡಿಕೆ ವಿಚಾರದಲ್ಲಿ ಮನಸ್ತಾಪ: ಜಡ್ಜ್​ ಕುಟುಂಬಕ್ಕೆ ವಿಷಪ್ರಾಶನ ಮಾಡಿದಳಾ ಮಹಿಳೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts