More

    ರಸ್ತೆಯ ಮೇಲೆ ನಮಾಜ್​ ಮಾಡುವಂತಿಲ್ಲ: ಸಿಎಂ ಯೋಗಿ ಖಡಕ್​​ ಎಚ್ಚರಿಕೆ

    ಲಖನೌ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್​ ಅಧಿಕಾರಕ್ಕೆ ಬಂದ ಮೇಲೆ ಸಾಕಷ್ಟು ಬದಲಾವಣೆಗಳು ಆಗಿದ್ದು, ಶಾಂತಿಯುತವಾಗಿ ಸರ್ಕಾರವನ್ನು ಮುನ್ನಡೆಸುತ್ತಿದ್ದಾರೆ.

    ಅವರ ಅಧಿಕಾರವನ್ನು ಮೆಚ್ಚಿದ ಜನ ಎರಡನೇ ಬಾರಿಗೆ ಆಯ್ಕೆ ಮಾಡಿದ್ದು, ಅವರ ಕಾರ್ಯವೈಖರಿಗೆ ಸಾಕ್ಷಿ ಎನ್ನಬಹುದು. ಉತ್ತರ ಪ್ರದೇಶದಲ್ಲಿ ಸಾಕಷ್ಟು ಸುಧಾರಣೆಯನ್ನು ತಂದಿರುವ ಅವರು, ಅಪರಾಧ ಪ್ರಕರಣಗಳು ಕೂಡ ಸಾಕಷ್ಟು ತಗ್ಗಿವೆ.

    ಆಜಾನ್​ ನಂತರ ಈಗ ರಸ್ತೆಯಲ್ಲಿ ನಮಾಜ್​ ಮಾಡುವಂತಿಲ್ಲ ಎಂಬ ಕಟ್ಟಪ್ಪಣೆಯನ್ನು ಹೊರಡಿಸಿದ್ದಾರೆ. ಇತ್ತೀಚೆಗಷ್ಟೇ ಲೌಡ್​​ಸ್ಪೀಕರ್​​ ಬಗ್ಗೆ ಕ್ರಮ ಕೈಗೊಂಡಿದ್ದ ಅವರು ಇದೀಗ ನಮಾಜ್​ನ್ನು ಕಂಡ ಕಂಡಲ್ಲಿ ಮಾಡುವಂತಿಲ್ಲ ಎಂದು ಹೇಳಿದ್ದಾರೆ.

    ಯೋಗಿ ಅಧಿಕಾರಕ್ಕೆ ಬರುವ ಮುನ್ನ 2012ರಿಂದ 2017ರ ಅವಧಿಯಲ್ಲಿ ಉತ್ತರ ಪ್ರದೇಶದಲ್ಲಿ ಬರೋಬ್ಬರಿ 700 ಗಲಭೆಗಳು ದಾಖಲಾಗಿದ್ದವು. 2017ರಿಂದ ಅಧಿಕಾರಕ್ಕೆ ಬಂದ ಬಳಿಕ ಸುಭಧ್ರ ಆಡಳಿತ ನೀಡುವ ಮೂಲಕ ಅಪರಾಧ ಕೃತ್ಯಗಳಿಗೂ ಕಡಿವಾಣ ಹಾಕಿದ್ದಾರೆ. (ಏಜೆನ್ಸೀಸ್​)

    ಜೈಲಿನಿಂದ ಆಸ್ಪತ್ರೆಗೆ ನವಜೋತ್​ ಸಿಂಗ್​ ಸಿಧು ಶಿಫ್ಟ್​​: ವಿಶೇಷ ಆಹಾರದ ಬೇಡಿಕೆ

    ವೈದ್ಯ ಲೋಕದಲ್ಲೇ ಕ್ರಾಂತಿ: ಇದೇ ಮೊದಲ ಬಾರಿಗೆ ಎರಡು ತೋಳುಗಳ ಜೋಡಿಸಿ, ಯಶಸ್ವಿ ಶಸ್ತ್ರಚಿಕಿತ್ಸೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts