More

  ಸಿದ್ದರಾಮಯ್ಯ, ಡಿಕೆಶಿ ತಮ್ಮ ಸಮಾಜಕ್ಕೆ ನೀಡುವ ಮಹತ್ವವನ್ನು ಈಡಿಗರು ನೀಡುತ್ತಿಲ್ಲವೇಕೆ..?-ಪ್ರಣವಾನಂದ ಸ್ವಾಮೀಜಿ ಪ್ರಶ್ನೆ

  ಕಾರವಾರ:ಸಿದ್ದರಾಮಯ್ಯ ಕುರುಬ ಸಮಾಜಕ್ಕಾಗಿ ಹಿಂದೆ ಸಿಎಂ ಆಗಿದ್ದಾಗ 10 ಸಾವಿರ ಕೋಟಿ ರೂ. ತಂದರು. ಡಿ.ಕೆ.ಶಿವಕುಮಾರ್‌ ಒಕ್ಕಲಿಗ ಸಮುದಾಯದ ತಾಲೂಕು ಸಮಾವೇಶಗಳಿಗೂ ಹಾಜರಾಗುತ್ತಾರೆ. ಆದರೆ, ನಾಮಧಾರಿ ಸಮುದಾಯದ ಮುಖಂಡರು ಸಮುದಾಯವನ್ನು ಬಿಟ್ಟು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ ಆರೋಪಿಸಿದರು.

  ನಗರದಲ್ಲಿ ಸುದ್ದಿಗೋಷ್ಠೀಯಲ್ಲಿ ಮಾತನಾಡಿದ ಅವರು, ಸಮಾಜವನ್ನು ಒಟ್ಟಿಗೆ ತೆಗೆದುಕೊಂಡು ಹೋದರೆ ಮಾತ್ರ ಮುಂದಿನ ಚುನಾವಣೆಯನ್ನು ಗೆಲ್ಲಲು ಸಾಧ್ಯ ಎಂದು ನಾಮಧಾರಿ ಮುಖಂಡರಿಗೆ ಕಿವಿಮಾತು ಹೇಳಿದರು.

  ಬಂಗಾರಪ್ಪ ಅವರ ನಂತರ ರಾಜ್ಯದಲ್ಲಿ ನಾಮಧಾರಿ ಸಮುದಾಯವನ್ನು ಮುಂದೆ ನಿಂತು ನಡೆಸಿಕೊಂಡು ಹೋಗುವ ನಾಯಕರಿಲ್ಲ. ಇದರಿಂದ ಸಮಾಜ ಸಂಘಟನೆಗೆ ಹಿನ್ನಡೆಯಾಗಿದೆ. ಸಮಾಜಕ್ಕೆ ರಾಜಕೀ ಪ್ರಾತಿನಿಧ್ಯ ಸಿಗುತ್ತಿಲ್ಲ. ಎಲ್ಲ ಹಂತಗಳಲ್ಲಿ ಅನ್ಯಾಯವಾಗುತ್ತಿದೆ ಎಂದರು.

  ಬಿ.ಕೆ.ಹರಿಪ್ರಸಾದ ಸಾಕಷ್ಟು ಹಿರಿಯರು, ಆದರೆ, ಕಾಂಗ್ರೆಸ್‌ ಪಕ್ಷವನ್ನು ನಂಬಿಕೊಂಡು ಪಕ್ಷದ ಪರವಾಗಿ ಮಾತನಾಡಿದರು. ನಾನು ಎಲ್ಲ ಹಿಂದುಳಿದ ವರ್ಗಗಳ ನಾಯಕ ಎನ್ನುತ್ತಿದ್ದರು. ಸಾಕಷ್ಟು ಹಿರಿಯ ನಾಯಕರಾದ ಅವರಿಗೆ ಈ ಬಾರಿ ಸರ್ಕಾರದಲ್ಲಿ ಅವರಿಗೆ ಯಾವುದೇ ಮಂತ್ರಿ ಪದವಿ ನೀಡಿಲ್ಲ. ಈಗ ಬೇರೆ ಯಾವುದೇ ಸಮುದಾಯ ಹರಿಪ್ರಸಾದ್‌ ಪರ ಮಾತನಾಡುತ್ತಿಲ್ಲ ಎಂದರು.

  ಉತ್ತರ ಕನ್ನಡ, ಉಡುಪಿ, ಮಂಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ನಾಮಧಾರಿ, ಈಡಿಗ, ಬಿಲ್ಲವ ಎಂದು ಪ್ರತ್ಯೇಕ ಹೆಸರಿನ ಒಂದೇ ಸಮುದಾಯ ದೊಡ್ಡ ಸಂಖ್ಯೆಯಲ್ಲಿದೆ. ಸಮುದಾಯಕ್ಕೆ ಈ ಬಾರಿ ಕಾಂಗ್ರೆಸ್‌ 7 ಸೀಟು ನೀಡಿತ್ತು. ಅದರಲ್ಲಿ ನಾಲ್ವರು ಜಯಗಳಿಸಿದ್ದಾರೆ.

  ಸಮಾಜದ ಜನ ಜಾಗೃತರಾಗಿ ಸಂಘಟಿತರಾಗದ ಕಾರಣ ಇನ್ನೂ ಮೂರು ಸೀಟು ಗೆಲ್ಲಲು ಸಾಧ್ಯವಾಗಿಲ್ಲ. ಈಗ ಜಿಪಂ, ತಾಪಂ ಚುನಾವಣೆಗಳಲ್ಲಿ ನಾಮಧಾರಿಗಳಿಗೆ ಕಾಂಗ್ರೆಸ್‌ ಹೆಚ್ಚಿನ ಸೀಟುಗಳನ್ನು ನೀಡಬೇಕು. ಇಲ್ಲದಿದ್ದಲ್ಲಿ ಪಕ್ಷೇತರವಾಗಿ ಸ್ಪರ್ಧಿಸುವಂತೆ ಆಕಾಂಕ್ಷಿಗಳಿಗೆ ಸೂಚಿಸಲಾಗುವುದು ಎಂದರು.

  ಇದನ್ನೂ ಓದಿ: ಸ್ವೀಡನ್‌ನಲ್ಲೀಗ ಸೆಕ್ಸ್‌ಗೆ ಕ್ರೀಡೆಯ ಮಾನ್ಯತೆ; ಜೂ. 8ಕ್ಕೆ ಪ್ರಥಮ ಯೂರೋಪಿಯನ್ ಸೆಕ್ಸ್ ಚಾಂಪಿಯನ್‌ಶಿಪ್!

  ಈ ಬಾರಿ ನಾಮಧಾರಿ ಸಮುದಾಯದ ಒಬ್ಬರಿಗೆ ಮಾತ್ರ ಮಂತ್ರಿ ಪದವಿ ನೀಡಿದ್ದನ್ನು ಗಂಭೀರವಾಗಿ ತೆಗೆದುಕೊಳ್ಳಲಾಗುವುದು. ಸಮಾಜದ ರಾಜಕೀಯ ಶಕ್ತಿಯ ಬಗ್ಗೆ ಚರ್ಚಿಸಲು ಮೇ 3 ಹಾಗೂ 4 ರಂದು ಕುಮಟಾ ನಾಮಧಾರಿ ಸಭಾಭವನದಲ್ಲಿ ಶಿಬಿರ ಆಯೋಜಿಸಲಾಗಿದೆ.

  ನಾಲ್ಕು ಜಿಲ್ಲೆಗಳ 200 ರಷ್ಟು ಆಯ್ದ ಪ್ರತಿನಿಧಿಗಳು ಆಗಮಿಸುವರು. ಸಿಗಂದೂರು ಕ್ಷೇತ್ರದ ಧರ್ಮದರ್ಶಿ ರಾಮಪ್ಪ ಅವರು ಉದ್ಘಾಟಿಸುವರು. ವಿಧಾನಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಇತರರು ಭಾಗವಹಿಸುವರು ಎಂದರು.

  ಬ್ರಹ್ಮರ್ಷಿ ನಾರಾಯಣ ಗುರು ಶಕ್ತಿ ಪೀಠಕ್ಕೆ 500 ಕೋಟಿ ರೂ. ಬಿಡುಗಡೆ ಮಾಡಬೇಕು. ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಐಎಎಸ್, ಐಪಿಎಸ್ ,ಕೆಎಎಸ್, ಪೊಲೀಸ್ ತರಬೇತಿ ಶಾಲೆ ತೆರೆಯಬೇಕು ಎಂದು ಒತ್ತಾಯಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts