More

    ಕೊಬ್ಬರಿ ಸಾಗಣೆಗೆ ಕಿಸಾನ್ ರೈಲು ಬಳಸಿ ; ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸಲಹೆ ; ರೈಲ್ವೆ ಅಧಿಕಾರಿಗಳು, ರವಾನೆದಾರರ ಸಭೆ

    ತಿಪಟೂರು : ಸರಕು ಸಾಗಣೆಗೆ ಕಿಸಾನ್ ರೈಲುಗಳನ್ನು ಬಳಸುವುದರಿಂದ ನಿಗದಿತ ಸಮಯದಲ್ಲಿ ಸರಕು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತಲುಪುವ ಜತೆಗೆ ಹಣ, ಸಮಯ ಉಳಿತಾಯವಾಗುತ್ತದೆ. ಇದರಿಂದ ಸಂಚಾರ ದಟ್ಟಣೆ ಕಡಿಮೆಯಾಗಿ ವಾಯು ಮಾಲಿನ್ಯವೂ ಕಡಿಮೆಯಾಲಿದೆ ಎಂದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ. ಬಿ.ಸಿ. ನಾಗೇಶ್ ಹೇಳಿದರು.

    ನಗರದ ಎಪಿಎಂಸಿ ರೈತ ಭವನದಲ್ಲಿ ಕೇಂದ್ರ ಸರ್ಕಾರದ ಕಿಸಾನ್ ರೈಲು ಯೋಜನೆ ಸಂಬಂಧ ನೆರೆ ರಾಜ್ಯಗಳಿಗೆ ಕೊಬ್ಬರಿ ರವಾನೆ, ನಿಬಂಧನೆಗಳ ಬಗ್ಗೆ ಚರ್ಚಿಸಲು ಶನಿವಾರ ಏರ್ಪಡಿಸಿದ್ದ ರೈಲ್ವೆ ಅಧಿಕಾರಿಗಳು ಮತ್ತು ರವಾನೆದಾರರ ಸಭೆಯಲ್ಲಿ ಮಾತನಾಡಿದರು.

    ಈ ಹಿಂದೆ ತಿಪಟೂರಿನಿಂದ ಗೂಡ್ಸ್ ರೈಲಿನ ಮೂಲಕ ಲಖನೌ, ದೆಹಲಿ, ಜೈಪುರ ನಗರಗಳಿಗೆ ಕೊಬ್ಬರಿ ರವಾನೆ ಆಗುತ್ತಿತ್ತು. ನಂತರ ರೈಲ್ವೆ ಇಲಾಖೆ ಇಡೀ ರೈಲನ್ನು ಬುಕ್ ವಾಡಿದರೆ ವಾತ್ರ, ಇಲ್ಲದಿದ್ದರೆ ಇಲ್ಲ ಎಂಬ ನಿರ್ಣಯ ಪ್ರಕಟಿಸಿದ್ದರಿಂದ ಕೊಬ್ಬರಿ ಬೆಳೆಗಾರರು ಟ್ರಾನ್ಸ್‌ಪೋರ್ಟ್ ಕಂಪನಿಗಳನ್ನು ಅವಲಂಬಿಸಬೇಕಾಯಿತು. ಕಡೆಗೆ ಇವು ಕೂಡಾ ಮುಚ್ಚಿದ ಪರಿಣಾಮ ಕೊಬ್ಬರಿಸಾಗಣೆಗೆ ರೈತರು ಕಷ್ಟ ನಷ್ಟ ಅನುಭವಿಸಬೇಕಾಯಿತು ಎಂದರು.

    ಕೇಂದ್ರ ಸರ್ಕಾರ ದೇಶದ ಎಲ್ಲ ಮೂಲೆಗಳಿಗೂ ತ್ವರಿತವಾಗಿ ಹಣ್ಣು, ತರಕಾರಿ ಹಾಗೂ ಇನ್ನಿತರ ಕೃಷಿ ಉತ್ಪನ್ನಗಳನ್ನು ಸಾಗಿಸಲು ಕಿಸಾನ್ ರೈಲು ಯೋಜನೆ ಪ್ರಾರಂಭಿಸಿದ್ದು, ಈ ಯೋಜನೆಯಲ್ಲಿ ಕೊಬ್ಬರಿಯನ್ನೂ ಸೇರಿಸಿದರೆ, ಅತ್ಯಂತ ಕಡಿಮೆ ಅವಧಿಯಲ್ಲಿ ದೂರದ ರಾಜ್ಯಗಳಿಗೆ ಕೊಬ್ಬರಿ ರವಾನೆ ಆಗುತ್ತದೆ. ಲಾರಿಯಲ್ಲಿ ಸಾಗಿಸುವ ವೆಚ್ಚಕ್ಕೆ ಹೋಲಿಸಿದರೆ ವೆಚ್ಚ ನಾಲ್ಕು ಪಟ್ಟು ಕಡಿಮೆ ಆಗುತ್ತದೆ ಎಂದರು.

    ಎಪಿಎಂಸಿ ಮಾರುಕಟ್ಟೆ ಸಮೀಪವೇ ಕೆಳ ಸೇತುವೆ ನಿರ್ವಾಣವಾಗಲಿದ್ದು, ಇಲ್ಲಿಂದ ಕೊಬ್ಬರಿ ಲೋಡ್ ಮಾಡಲು ಅನುಕೂಲ. ಜತೆಗೆ ಸ್ಥಳೀಯ ಉದ್ಯೋಗ ಸೃಷ್ಟಿಗೂ ಅವಕಾಶ ನೀಡಿದಂತಾಗುತ್ತದೆ. ಇದರ ಸಾಧಕ, ಬಾಧಕಗಳ ಬಗ್ಗೆ ರೈಲ್ವೆ ಇಲಾಖೆಯ ಅಧಿಕಾರಿಗಲು ರವಾನೆದಾರರು, ಕೊಬ್ಬರಿ ಬೆಳೆಗಾರರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.

    ಎಪಿಎಂಸಿ ಅಧ್ಯಕ್ಷ ಎಚ್.ಬಿ. ದಿವಾಕರ್, ಉಪಾಧ್ಯಕ್ಷ ನಾಗರಾಜು, ನಿರ್ದೇಶಕ ಟಿ.ಎಸ್. ಬಸವರಾಜು, ರಾಜ್ಯ ಹಣ್ಣು ಮತ್ತು ಹೂ, ಮಾರುಕಟ್ಟೆಯ ಸಹಾಯಕ ನಿರ್ದೇಶಕ ರಾಜಣ್ಣ, ಮೈಸೂರು ಡಿವಿಷನ್ ರೈಲ್ವೆ ವಾಣಿಜ್ಯ ವಿಭಾಗದ ವ್ಯವಸ್ಥಾಪಕ ಮಂಜುನಾಥ್ ಕಲ್ಮುಡಿ ಮತ್ತು ತಂಡ, ರವಾನೆದಾರರ ಸಂದ ಮುಖ್ಯಸ್ಥ ಜಯೇಶ್ ಮೆಹ್ತಾ, ಮುಖಂಡ ಎಸ್.ಆರ್.ವಿ. ಸಂತೋಷ್ ಇತರರು ಇದ್ದರು.

    ಕೊಬ್ಬರಿ ರವಾನೆಗೆ ಗೊತ್ತು, ಗುರಿ ಇಲ್ಲದ ಲಾರಿಗಳನ್ನು ನಂಬಿ ಕೈ ಸುಟ್ಟುಕೊಳ್ಳುವುದಕ್ಕಿಂತ ರೈಲ್ವೆ ಮೂಲಕ ರವಾನೆ ವಾಡಿದರೆ, ರಸ್ತೆ ಮೇಲೆ ಸಂಚರಿಸುವ 30 ಲಾರಿಗಳಷ್ಟು ಸರಕು, ಕೇವಲ ಒಂದು, ಅಥವಾ ಎರಡು ಬೋಗಿಗಳಲ್ಲಿ ಸಾಗಿಸಬಹುದು ಇದರಿಂದ ಸಮಯ, ಹಣ ಕಡಿಮೆಯಾಗುತ್ತದೆ.
    ಬಿ.ಸಿ. ನಾಗೇಶ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

    ರೈಲ್ವೆ ಇಲಾಖೆ ಸರಕನ್ನು ವ್ಯವಸ್ಥಿತವಾಗಿ ಸಾಗಿಸಲಿದೆ. ರವಾನೆ ಆಗುವ ಸರಕಿಗೆ ಸರ್ಕಾರ ಪ್ರೋತ್ಸಾಹಧನ ಪ್ರಕಟಿಸಿದರೆ ಕಿಸಾನ್ ರೈಲು ಯೋಜನೆಗೆ ಉತ್ತೇಜನ ನೀಡಿದಂತಾಗುತ್ತದೆ.
    ಜಯೇಶ್ ಮೆಹ್ತಾ, ಕೊಬ್ಬರಿ ರವಾನೆದಾರರ ಸಂದ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts