More

    ಸಂಗೀತ ಶಿಕ್ಷಕರನ್ನು ನೇಮಿಸಿ

    ಭೀಮಸಮುದ್ರ: ಶೈಕ್ಷಣಿಕ ಪ್ರಗತಿಯ ಭಾಗವಾಗಿರುವ ಸಂಗೀತ ಕಲಿಕೆ ಶಾಲಾ ಮಕ್ಕಳಿಗೆ ದೊರೆಯುವಂತೆ ಸರ್ಕಾರ ಮುಂದಾಗಬೇಕು.

    ಈ ನಿಟ್ಟಿನಲ್ಲಿ ಸಂಗೀತ ಶಿಕ್ಷಕರ ನೇಮಕಕ್ಕೆ ಕ್ರಮಕೈಗೊಳ್ಳಬೇಕು ಎಂದು ನವ ಕರ್ನಾಟಕ ಸಂಗೀತ ಸಂಘ ಒತ್ತಾಯಿಸಿದೆ.

    ಬೆಂಗಳೂರಿನಲ್ಲಿ ಭಾನುವಾರ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪ್ರತ್ಯೇಕವಾಗಿ

    ಮನವಿ ಸಲ್ಲಿಸಿದ ಸಂಘದ ಪದಾಧಿಕಾರಿಗಳು, ಇಲ್ಲಿಯವರೆಗೂ ಯಾವುದೇ ಸರ್ಕಾರ ನಮ್ಮ ಬೇಡಿಕೆ ಈಡೇರಿಸುವ ಪ್ರಯತ್ನ ಮಾಡಿಲ್ಲ ಎಂದು ಬೇಸರಿಸಿದರು.

    ಸರ್ಕಾರದ ಈ ನಿರ್ಧಾರದಿಂದ ಈ ಕ್ಷೇತ್ರದಲ್ಲಿ ವಿದ್ಯಾಭ್ಯಾಸ ಮಾಡಿದ ಸಾವಿರಾರು ಮಂದಿ ಉದ್ಯೋಗಕ್ಕಾಗಿ ಕಾಯುತ್ತಿದ್ದಾರೆ. ಹಲವರು ವಯಸ್ಸಿನ ಮೀತಿ ಮೀರುತ್ತಿದ್ದಾರೆ.

    ಆದ್ದರಿಂದ ನಮ್ಮಗಳ ಬದುಕಿನ ಭದ್ರತೆ ಹಾಗೂ ಮಕ್ಕಳ ಹಿತದೃಷ್ಟಿಯಿಂದ ಸರ್ಕಾರ ಒಳ್ಳೆಯ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ಸಂಘದ ಜಿಲ್ಲಾಧ್ಯಕ್ಷ ಜಗದೀಶ್ ಮಾತನಾಡಿ, 2009ರಲ್ಲಿ ಸಂಗೀತ ಶಿಕ್ಷಕರ ನೇಮಕಾತಿ ಆಗಿತ್ತು. ಬಳಿಕ ಇಲ್ಲಿಯವರೆಗೂ ನೇಮಕ ಪ್ರಯತ್ನವೇ ಆಗಿಲ್ಲ.

    ಇದರಿಂದ ಉದ್ಯೋಗದ ನಿರೀಕ್ಷೆಯಲ್ಲಿರುವ ಸಾವಿರಾರು ಮಂದಿ ನಿರಾಸೆಯಾಗಿದ್ದಾರೆ. ಅವರ ಬದುಕು ಬೀದಿಗೆ ಬಿದ್ದಿದೆ ಎಂದು ಅಳಲು ತೋಡಿಕೊಂಡರು.

    ಸತತ 10 ವರ್ಷದಿಂದ ಶಾಂತಿಯುತ ಹೋರಾಟ ಮಾಡುತ್ತಾ ಬಂದಿದ್ದೇವೆ. ಆದರೂ ಸರ್ಕಾರದ ಸ್ಪಂದನೆ ಶೂನ್ಯ.

    ಈಗ ಹೊಸ ಸರ್ಕಾರ ಬಂದಿದ್ದು, ಸಿದ್ದರಾಮಯ್ಯ ಹಾಗೂ ತಮ್ಮಗಳ ಮೇಲೆ ಅದಮ್ಯ ನಂಬಿಕೆ ಇದೆ. ನಮ್ಮ ಶಾಂತಿಯುತ ಮನವಿಗೆ ಸ್ಪಂದಿಸದಿದ್ದರೆ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಹೇಳಿದರು.

    ರಾಜ್ಯದ ವಿವಿಧ ಇಲಾಖೆಯ ಶಾಲೆಗಳಲ್ಲಿ 246ಕ್ಕೂ ಅಧಿಕ ಸಂಗೀತ ಶಿಕ್ಷಕರ ಹುದ್ದೆ ಖಾಲಿಯಿದ್ದು, ಸಂಪೂರ್ಣ ಭರ್ತಿ ಮಾಡಲು ಕ್ರಮಕೈಗೊಳ್ಳಬೇಕು. ಈ ಮೂಲಕ ನಮಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

    ಸಂಘದ ಪದಾಧಿಕಾರಿಗಳಾದ ಜಿ.ಸಿ.ಜಗದೀಶ್, ಓ.ಮೂರ್ತಿ, ಉಮೇಶ್ ಪತ್ತಾರ್, ಭುವನೇಶ್ವರಿ. ತ್ರಿವೇಣಿ. ನಿರ್ಮಲಾ, ಜ್ಯೋತಿ ಗಿರೀಶ್, ತಿಪ್ಪೇಸ್ವಾಮಿ, ಮಂಜುನಾಥ, ಶ್ರೀಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts