More

    ದೇಶದ ಅಭಿವೃದ್ಧಿ ಸಾಕ್ಷರತೆ, ಕೌಶಲ ಅವಶ್ಯ

    ಔರಾದ್: ದೇಶದ ಜನರ ಜೀವನ ಮಟ್ಟ ಮತ್ತು ಕೌಶಲ ವೃದ್ಧಿಸಲು ಸಾಕ್ಷರತೆ ಅವಶ್ಯ ಎಂದು ಪ್ರಾಂಶುಪಾಲ ಓಂ ಪ್ರಕಾಶ ದಡ್ಡೆ ಹೇಳಿದರು.
    ಪಟ್ಟಣದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಜನತಾ ಪ್ರವೀಣ ಪದವಿ ಪೂರ್ವ ಕಾಲೇಜು ಮತ್ತು ಸಾಕ್ಷರತಾ ಕಲಾತಂಡಗಳ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ಸಾಕ್ಷರತಾ ಜಾಥಾದಲ್ಲಿ ಮಾತನಾಡಿ, ಆಧುನಿಕ ಸಮಾಜದಲ್ಲಿ ಸಾಕ್ಷರತೆ ನಿತ್ಯ ಬದುಕಿನ ಒಂದು ಸಾಧನ. ಬಡತನದ ವಿರುದ್ಧ ಒಂದು ರಕ್ಷಣಾ ವ್ಯವಸ್ಥೆ ಎನ್ನಬಹುದು. ಪ್ರಜಾಪ್ರಭುತ್ವ ಸ್ಥಾಪನೆಗೆ ಒಂದು ವೇದಿಕೆ. ರಾಷ್ಟçದ ಅಭಿವೃದ್ಧಿಗೆ ಸಾಕ್ಷರತೆ ಬೆನ್ನೆಲುಬಾಗಿದೆ. ಆದ್ದರಿಂದ ಎಲ್ಲರೂ ಸಾಕ್ಷರರಾಗುವುದು ಮಹತ್ವದ ಪಾತ್ರ ಎಂದರು.
    ಸಾಕ್ಷರತಾ ಅಧಿಕಾರಿ ಶಿವರಾಜ್ ಪಾಟೀಲ್ ಮಾತನಾಡಿ, ಪ್ರಾಚೀನ ಕಾಲದಲ್ಲಿ ನಮ್ಮ ದೇಶವು ಜ್ಞಾನ ಮತ್ತು ವಿಜ್ಱನದ ಅಧ್ಯಯನದಲ್ಲಿ ಪ್ರವರ್ತಕನಾಗಿದ್ದರಿಂದ ವಿಶ್ವಗುರು ಸ್ಥಾನ ಹೊಂದಿತ್ತು. ಅದರ ಪುನಃರುತ್ಥಾನಕ್ಕೆ ಶಿಕ್ಷಣಕ್ಕೆ ಆದ್ಯತೆ ನೀಡುವ ಅಗತ್ಯವಿದೆ. ಸಂಪೂರ್ಣ ಸಾಕ್ಷರತೆ ಯಶಸ್ವಿಗೆ ಪ್ರತಿ ನಾಗರಿಕರು ಕೈಜೋಡಿಸುವುದು ಅಗತ್ಯ ಎಂದರು.
    ಸಂಪೂರ್ಣ ಸಾಕ್ಷರತೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿವೆ. ಈ ಯೋಜನೆಗಳು ಯಶಸ್ವಿಯಾಗಲು ಸರ್ಕಾರ, ಸಂಘ ಸಂಸ್ಥೆಗಳ ಜತೆ ಸಾರ್ವಜನಿಕರು ಕೈಜೋಡಿಸಬೇಕು. ನವ ಭಾರತಕ್ಕಾಗಿ ಏಕ ಭಾರತ, ಶ್ರೇಷ್ಠ ಭಾರತ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಹೇಳಿದರು.
    ಪತ್ರಕರ್ತ ಪರಮೇಶ ವಿಳಾಸಪುರೆ ಮಾತನಾಡಿ, ಕಲಿಕೆಗೆ ವಯಸ್ಸು ಮುಖ್ಯವಲ್ಲ. ಮೂಲ ಅಕ್ಷರ ಕಲಿಕೆಗೆ ಒತ್ತು ನೀಡಬೇಕು. ಎಲ್ಲರೂ ಎಲ್ಲರಿಗಾಗಿ ಕಲಿಸಬೇಕು. ಇದರಿಂದ ಸಾಕ್ಷರತೆ ಪ್ರಮಾಣ ಹೆಚ್ಚಿಸಬಹುದು. ಜಗತ್ತಿನಲ್ಲಿರುವ ಪ್ರತಿ ವ್ಯಕ್ತಿಯ ಸಾಮಾಜಿಕ ಮತ್ತು ವೈಯಕ್ತಿಕ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು ಆಚರಣೆ ಉದ್ದೇಶ ಎಂದರು.
    ಜನತಾ ಕಾಲೇಜಿನ ಪ್ರಾಂಶುಪಾಲ ಡಾ.ಶಿವರಾಜ ಜುಕಾಲೆ ಮಾತನಾಡಿದರು. ಕಲಾವಿದರಾದ ದೇವಿದಾಸ ಚಿಮ್ಕೋಡ್, ಬಕ್ಕಪ್ಪ ದಂಡಿನ್ ಅವರು, ವೀರಶೆಟ್ಟಿ ಕಾಲೇಜಿನ ವಿದ್ಯಾರ್ಥಿಗಳಿಗೆ ಕಿರು ನಾಟಕ ಮತ್ತು ಗಾಯನದ ಮೂಲಕ ಸಾಕ್ಷರತಾ ಬಗ್ಗೆ ಅರಿವು ಮೂಡಿಸಿದರು. ತಾಲೂಕು ಸಾಕ್ಷರತಾ ಅಧಿಕಾರಿ ವೆಂಕಟ್ ಕೋಳೆಕರ್, ಶಿವರಾಜ ಮಲ್ಕಾಪುರೆ, ರಮೇಶ ಇತರರಿದ್ದರು. ಉಪನ್ಯಾಸಕ ರಮೇಶ ಪವಾರ ನಿರೂಪಣೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts