More

    ವಿದ್ಯೆ ಕಸಿದುಕೊಳ್ಳಲಾಗದ ಸಂಪತ್ತು: ಗೋಪಾಲಕೃಷ್ಣ ಬೇಳೂರು ಸಲಹೆ

    ಸಾಗರ: ಯಾರೂ ಕಸಿದುಕೊಳ್ಳಲಾಗದ ಸಂಪತ್ತು ಎಂದರೆ ವಿದ್ಯೆ. ವಿದ್ಯಾರ್ಥಿಗಳಿಗೆ ಪದವಿ ಶಿಕ್ಷಣ ಅತ್ಯಂತ ಪ್ರಮುಖ ಘಟ್ಟ. ಅದನ್ನು ವ್ಯವಸ್ಥಿತವಾಗಿ ಮುನ್ನಡೆಸುವ ಜವಾಬ್ದಾರಿಯನ್ನು ವಿದ್ಯಾರ್ಥಿಗಳೇ ಹೊರಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
    ಸಾಗರದ ಶ್ರೀಮತಿ ಇಂದಿರಾಗಾAಽ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಕ್ರೀಡಾ ಸಾಂಸ್ಕೃತಿಕ ವಿವಿಧ ಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟಿಸಿ, ಗ್ರಂಥಾಲಯ ಮತ್ತು ಪ್ರಯೋಗಾಲಯ ಲೋಕಾರ್ಪಣೆ ಮಾಡಿ ಮಾತನಾಡಿದರು.
    ಪಾಲಕರು ಮಕ್ಕಳ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಸರ್ಕಾರ ಏನೇ ಸೌಲಭ್ಯ ನೀಡಿದರೂ ಅಂತಿಮವಾಗಿ ಪರೀಕ್ಷೆ ಎದುರಿಸಿ ಉತ್ತಮ -Àಲಿತಾಂಶ ತರುವವರು ನೀವೇ ಆಗಿರುತ್ತೀರಿ. ಹಾಗಾಗಿ ವಿದ್ಯಾಭ್ಯಾಸದ ಸಂದರ್ಭದಲ್ಲಿ ಮನಸ್ಸನ್ನು ಇತರವಿಷಯಗಳತ್ತ ಹರಿಬಿಡದೆ ಏಕಾಗ್ರತೆ ಕಾಯ್ದುಕೊಳ್ಳಿ. ಪದವಿ, ಸ್ನಾತಕೋತ್ತರ ವಿದ್ಯಾಭ್ಯಾಸಕ್ಕೆ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದ್ದು, ಅದರಲ್ಲಿಯೂ ಮಹಿಳಾ ಶಿಕ್ಷಣಕ್ಕೆ ಅಗತ್ಯ ಸಹಕಾರ ನೀಡುತ್ತಿದೆ ಎಂದರು.
    ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಜಿ.ಜಗದೀಶ್ ಮಾತನಾಡಿ, ಬದುಕಿನಲ್ಲಿ ಕನಸುಗಳನ್ನು ಕಟ್ಟಿಕೊಳ್ಳಬೇಕು. ಕನಸು ನನಸು ಮಾಡಲು ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಬೇಕು. ಕಾಲೇಜು ಶಿಕ್ಷಣ ಇಲಾಖೆ ಸಮಗ್ರ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಖಾಸಗಿ ಕಾಲೇಜುಗಳಿಗೆ ಕಡಿಮೆ ಇಲ್ಲದಂತೆ ಮೂಲ ಸೌಲಭ್ಯ ಕಲ್ಪಿಸಲು ಬಜೆಟ್‌ನಲ್ಲಿ ಹೆಚ್ಚಿನ ಹಣ ಇಡಲು ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ. ೧೮೪೨ ಉಪನ್ಯಾಸಕರು ಮುಂದಿನ ಒಂದು ತಿಂಗಳೊಳಗೆ ನೇಮಕವಾಗಲಿದ್ದಾರೆ. ಹೆಚ್ಚುವರಿಯಾಗಿ ೬ ಸಾವಿರ ಉಪನ್ಯಾಸಕರ ಹುದ್ದೆ ಸೃಷ್ಟಿಸಲು ಮನವಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
    ಪ್ರಾಚಾರ್ಯೆ ಡಾ. ರಾಜೇಶ್ವರಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಶಿಕ್ಷಣ ಇಲಾಖೆ ನಿವೃತ್ತ ಆಯುಕ್ತ ಡಾ. ಅಶೋಕ್ ಡಿ. ರೇವಣಕರ್, ನಗರಸಭೆ ಸದಸ್ಯರಾದ ಬಿ.ಎಚ್.ಲಿಂಗರಾಜ್, ಮಧುಮಾಲತಿ, ಪ್ರಮುಖರಾದ ಎಚ್.ಎಸ್.ಚಂದ್ರಶೇಖರಪ್ಪ, ಡಾ. ಶಿವಾನಂದ ಭಟ್, ಡಾ. ಕೆ.ಎನ್.ಮಹಾಬಲೇಶ್ವರ, ಗಣಪತಿ ಮಂಡಗಳಲೆ, ಉಷಾ, ಚೇತನರಾಜ್ ಕಣ್ಣೂರು, ಕೆ.ಎನ್.ಮಹಾಬಲೇಶ್ವರ, ಅರ್ಪಿತಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts