More

    ಆನ್​ಲೈನ್​ ಪಾಠದ ಹೆಸರಲ್ಲಿ ಶುಲ್ಕ ವಸೂಲಿಗೆ ನಡೆಯುತ್ತಿದೆ ತಂತ್ರ, ಶಿಕ್ಷಣ ಸಂಸ್ಥೆಗಳಿಗೆ ಇಲಾಖೆ ನೀಡಿರುವ ಎಚ್ಚರಿಕೆ ಏನು?

    ಬೆಂಗಳೂರು: ದೇಶಾದ್ಯಂತ ಕರೊನಾ ಸಂಕಷ್ಟದಿಂದ ಪಾರಾಗಲು ಎರಡನೇ ಹಂತದ ಲಾಕ್​ಡೌನ್​ ಜಾರಿಯಲ್ಲಿದೆ. ನಾಳೆಯಿಂದ (ಏ.20) ಕೆಲ ನಿರ್ಬಂಧಗಳನ್ನು ಸಡಿಲಿಸಲಾಗುತ್ತಿದೆಯಾದರೂ, ಶಿಕ್ಷಣ ಸಂಸ್ಥೆಗಳ ಆರಂಭಕ್ಕೆ ಸದ್ಯಕ್ಕಂತೂ ಅವಕಾಶವಿಲ್ಲ. ಸಾರ್ವಜನಿಕ ಶಿಕ್ಷಣ ಸಂಸ್ಥೆ ಈ ಮೊದಲೇ ತಿಳಿಸಿದಂತೆ ಆನ್​ಲೈನ್​ ತರಗತಿಗಳನ್ನು ನಡೆಸುವುದೇ ಸದ್ಯಕ್ಕಿರುವ ಪರಿಹಾರ. ಆ ಮೂಲಕ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹಿನ್ನಡೆಯಾಗದಂತೆ ನೋಡಿಕೊಳ್ಳಬೇಕಿದೆ.

    ಆದರೆ, ಕೆಲ ಸಂಸ್ಥೆಗಳು ಇದನ್ನೇ ನೆಪವಾಗಿಟ್ಟುಕೊಂಡು ಶಾಲಾ ಪ್ರವೇಶ ಶುಲ್ಕ ಹಾಗೂ ಇತರೆ ಶುಲ್ಕಗಳನ್ನು ಪಾವತಿಸುವಂತೆ ಪಾಲಕರನ್ನು ಒತ್ತಾಯಿಸುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ.

    ಶಾಲೆಗಳು ಸರ್ಕಾರದ ಮುಂದಿನ ಆದೇಶದವರೆಗೆ ಪ್ರವೇಶ ಪ್ರಕ್ರಿಯೆಗಳನ್ನು ನಡೆಸುವಂತಿಲ್ಲ, ಮುಂದಿನ ತರಗತಿಗಳಿಗೆ ಹಾಜರಾಗಲು ಪ್ರವೇಶ ಶುಲ್ಕವನ್ನು ಪಾವತಿಸುವಂತೆ ಒತ್ತಾಯಿಸುವಂತಿಲ್ಲ ಎಂದು ಮೊದಲ ಹಂತದ ಲಾಕ್​ಡೌನ್​ ಸಂದರ್ಭದಲ್ಲಿಯೇ ಸ್ಪಷ್ಟಪಡಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಆದರೆ, ಆನ್​ಲೈನ್ ತರಗತಿ ನೆಪದಲ್ಲಿ ಈಗ ಶಿಕ್ಷಣ ಸಂಸ್ಥೆಗಳು ಪ್ರವೇಶ ಶುಲ್ಕ ಪಾವತಿಸುವಂತೆ ಒತ್ತಾಯಿಸುತ್ತಿವೆ. ಇಲ್ಲದಿದ್ದರೆ ಆನ್​ಲೈನ್​ ಪಾಠಕ್ಕೆ ಹಾಜರಾಗಲು ಅವಕಾಶವಿಲ್ಲವೆಂದು ಹೇಳುತ್ತಿವೆ. ಈ ಬಗ್ಗೆ ಪಾಲಕರು, ಶಿಕ್ಷಣ ಸಚಿವರು ಹಾಗೂ ಇಲಾಖೆಗೆ ದೂರು ಸಲ್ಲಿಸಿದ್ದಾರೆ.

    ಹೀಗಾಗಿ ಸರ್ಕಾರದ ನಿರ್ದೇಶನಗಳನ್ನು ಪಾಲಿಸದ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮಕೈಗೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗಿದೆ. ಸಾಂಕ್ರಾಮಿಕ ರೋಗಗಳ ಅಧಿನಿಯಮ 1897 ಅನ್ವಯ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಇಲಾಖೆ ಆಯುಕ್ತರು ತಿಳಿಸಿದ್ದಾರೆ.

    ‘ನಾವು ಪರೀಕ್ಷೆ ಬರೆಯಲ್ಲ’ ಅಭಿಯಾನ ವಿದ್ಯಾರ್ಥಿಗಳು ಆರಂಭಿಸಿದ್ದೇಕೆ? ಅಷ್ಟಕ್ಕೂ ಪರೀಕ್ಷೆ ನಡೆಯುತ್ತಿರುವುದಾರೂ ಎಲ್ಲಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts