More

    ಬದುಕು ಹಸನಾಗಲು ಶಿಕ್ಷಣ ಅನಿವಾರ್ಯ: ವೈದ್ಯ ಡಾ. ಟಿ.ವಿ. ಶಂಕರ್ ಅಭಿಪ್ರಾಯ, ಕಟ್ಟಡ ಕಾರ್ಮಿಕರ ಮಕ್ಕಳಿಗೆ ಲೇಖನ ಸಾವಾಗ್ರಿ ವಿತರಣೆ

    ಚನ್ನಪಟ್ಟಣ: ಮಕ್ಕಳ ಬದುಕು ಹಸನಾಗಲು ಶಿಕ್ಷಣ ಅನಿವಾರ್ಯ. ಹಾಗೆಯೇ ಶಿಕ್ಷಣದ ತೆಗೆೆ ದೈಹಿಕ ಚಟುವಟಿಕೆಯೂ ಮುಖ್ಯ ಎಂದು ವರದಪ್ಪ ಆಸ್ಪತ್ರೆ ವೈದ್ಯ ಡಾ. ಟಿ.ವಿ. ಶಂಕರ್ ಹೇಳಿದರು.

    ತಾಲೂಕಿನ ಹರಿಸಂದ್ರ ಗ್ರಾಮದಲ್ಲಿ ಕಟ್ಟಡ ಕಾರ್ಮಿಕರ ಮಕ್ಕಳಿಗೆ ನೇಗಿಲಯೋಗಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಲೇಖನ ಸಾಮಾಗ್ರಿ ವಿತರಣಾ ಕಾರ್ಯಕ್ರಮದಲ್ಲಿ ವಾತನಾಡಿ, ಮಕ್ಕಳನ್ನು ಕೂಲಿ ಕೆಲಸಗಳಲ್ಲಿ ತೊಡಗಿಸುವುದು ಅಪರಾಧ. ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀತಿ ಅನ್ವಯ ಹತ್ತಿರದ ಸರ್ಕಾರಿ ಶಾಲೆಗಳಿಗೆ ಸೇರಿಸುವುದು ಪಾಲಕರ ಮೊದಲ ಆದ್ಯತೆಯಾಗಲಿ ಎಂದು ಕರೆ ನೀಡಿದರು.

    ಆಟ-ಪಾಠಗಳು ದೈಹಿಕ ಮತ್ತು ವಾನಸಿಕ ಆರೋಗ್ಯದಲ್ಲಿ ಸಮತೋಲನ ಸಾಧಿಸಲು ಸಾಧ್ಯ. ಹಾಗಾಗಿ ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತರನ್ನಾಗಿಸಬಾರದು. ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ವಾಡಬೇಕು ಎಂದರು.
    ಸ್ವಚ್ಛ ಪರಿಸರ, ಆರೋಗ್ಯವಂತ ಬದುಕಿಗೆ ನಾಂದಿ. ಮಕ್ಕಳಿಗೆ ಪೌಷ್ಟಿಕ ಆಹಾರ ಮತ್ತು ಸ್ವಚ್ಛ ಪರಿಸರ ದಕ್ಕುವಂತೆ ನೋಡಿಕೊಳ್ಳಬೇಕಾದುದು ಹಿರಿಯರ ಜವಾಬ್ದಾರಿ ಎಂದು ವಾತೃಶ್ರೀ ಆರ್ಥೊಪೆಡಿಕ್ ಆಸ್ಪತ್ರೆಯ ವೈದ್ಯ ಡಾ.ಆರ್.ಎನ್. ಮಲವೇಗೌಡ ಅಭಿಪ್ರಾಯಪಟ್ಟರು.

    ಟ್ರಸ್ಟ್ ಕಾರ್ಯದರ್ಶಿ ವಿಜಯ್ ರಾಂಪುರ, ಸ್ವರಾಜ್ ಸಂಟನೆಯ ಜಿ.ಎಸ್.ಸುಕನ್ಯಾ ಹಾಗೂ ಹರಿಸಂದ್ರ ಗ್ರಾಮದ ಮುಖಂಡರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts