More

    ಶಿಕ್ಷಣ ಇಲಾಖೆಯಿಂದಲೂ ಯೂಟ್ಯೂಬ್ ಚಾನೆಲ್ ಶುರುಮಾಡುವ ಇಂಗಿತ: ಕೈ ಜೋಡಿಸುವಂತೆ ಸಾರ್ವಜನಿಕರಿಗೆ ಕರೆ ನೀಡಿದ ಶಿಕ್ಷಣ ಸಚಿವ

    ಬೆಂಗಳೂರು: ಕರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ನೀಡಿರುವ ಶಿಕ್ಷಣ ಇಲಾಖೆ ಈ ರಜೆಯಲ್ಲಿ ಮಕ್ಕಳಲ್ಲಿರುವ ಪ್ರತಿಭೆ ಪ್ರೋತ್ಸಾಹಕ್ಕಾಗಿ ‘ಯೂಟ್ಯೂಬ್ ಚಾನೆಲ್’ ಆರಂಭಿಸುತ್ತಿದೆ. ಚಾನೆಲ್ ಮೂಲಕ ಪ್ರತಿದಿನ ಬೆಳಗ್ಗೆ ಒಂದು ಗಂಟೆ ಶೈಕ್ಷಣಿಕ ಕಾರ್ಯಕ್ರಮಗಳನ್ನು ಮಕ್ಕಳಿಗಾಗಿ ಬಿತ್ತರಿಸುವ ಉದ್ದೇಶ ಹೊಂದಲಾಗಿದೆ. ಈ ಕಾರ್ಯಕ್ರಮಗಳು ಅತ್ಯಂತ ವೈಶಿಷ್ಟ್ಯ ಪೂರ್ಣವಾಗಿರಬೇಕು ಮಕ್ಕಳ ಜತೆ ಪಾಲಕರು ನೋಡುವಂತಿರಬೇಕು. ಅಂದಾಜು 10ರಿಂದ 15 ನಿಮಿಷ 4ರಿಂದ 5 ಕಾರ್ಯಕ್ರಮ ಪ್ರಸಾರ ಮಾಡುವ ಚಿಂತನೆ ಮಾಡಲಾಗಿದೆ. ಶಿಕ್ಷಕರು, ಸಾಫ್ಟ್​ವೇರ್ ತಂತ್ರಜ್ಞರು, ನವೋದ್ಯಮಿಗಳು ಸೇರಿ ಸಾರ್ವಜನಿಕರು ಶಿಕ್ಷಣ ಇಲಾಖೆಯ ಈ ಹೊಸ ರೀತಿಯ ಪರಿಕಲ್ಪನೆಗೆ ಕೈಜೋಡಿಸುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್​ಕುಮಾರ್ ಮನವಿ ಮಾಡಿದ್ದಾರೆ.

    ಏನು ಮಾಡಬೇಕು?: ಮಕ್ಕಳಿಗೆ ಸೂಕ್ತ ಹಾಗೂ ಸಮಂಜಸವೆನಿಸುವ ಯಾವುದೇ ಸಾಮಗ್ರಿಯನ್ನು ಸಿದ್ಧಪಡಿಸಬಹುದು. ವಿಡಿಯೋ ಸಾಮಗ್ರಿ 10ರಿಂದ 15 ನಿಮಿಷಗಳ ಗರಿಷ್ಠ ಅವಧಿಯುಳ್ಳದ್ದಾಗಿರಬೇಕು. ವಿವರಿಸಲಾಗುವ ವಿಷಯಗಳು ಹೊಸದಾಗಿದ್ದು, ಮಕ್ಕಳಲ್ಲಿ ಆಸಕ್ತಿ, ಕುತೂಹಲ ಹುಟ್ಟಿಸುವಂತಿರಬೇಕು ಹಾಗೂ ಅವರನ್ನು ತೊಡಗಿಸುವಂತಹ ಕೆಲವು ಚಟುವಟಿಕೆಗಳನ್ನೂ ಸಹ ಒಳಗೊಂಡಿರಬೇಕು.

    ಸಿದ್ಧಪಡಿಸುವ ಸಾಮಗ್ರಿಗಳು ತರಗತಿಗಳ ಪಾಠಗಳು ಅಥವಾ ಪಠ್ಯಕ್ರಮಕ್ಕೆ ಸಂಬಂಧಿಸಿರುವ ಅಗತ್ಯವಿಲ್ಲ. ಕಾರ್ಯಕ್ರಮಗಳು ಏಕಮುಖವಾಗಿರಬಾರದು. ಕಥಾವಾಚನ, ಪುಸ್ತಕ ಪರಿಚಯ ಓದು, ಪ್ರಯೋಗಗಳು, ಚಟುವಟಿಕೆಗಳು, ಮ್ಯಾಜಿಕ್ ಇತ್ಯಾದಿಗಳ ವಿವರಣೆಯುಕ್ತ ಪ್ರದರ್ಶನ, ಗಾದೆಗಳು, ಒಗಟುಗಳನ್ನು ಬಿಡಿಸುವ ವೀಡಿಯೋ ಮಾಡಬಹುದು. ಕಾರ್ಯಕ್ರಮ ಸಿದ್ಧಪಡಿಸುವವರು ವೀಡಿಯೋ ದಾಖಲೀಕರಣವನ್ನು ಮಾಡಲು ಡಿಎಸ್​ಇಆರ್​ಟಿ ಸ್ಟುಡಿಯೋವನ್ನು ಉಪಯೋಗಿಸಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು. ಕಾರ್ಯಕ್ರಮಗಳ ನಿರೂಪಣೆಗೆ ನಟ, ನಟಿ, ಟಿವಿ ನಿರೂಪಕರು, ರೇಡಿಯೋ ಜಾಕಿಗಳು ಸಹ ತೊಡಗಿಸಿಕೊಳ್ಳಬಹುದು.

    ಕಾರ್ಯಕ್ರಮವನ್ನು ಮುಂದಿನ 50 ದಿನಗಳವರೆಗೆ ಪ್ರಸಾರ ಮಾಡಲಾಗುತ್ತದೆ. ವಿಡಿಯೋ ಸಾಮಗ್ರಿಯನ್ನು ಇ-ಮೇಲ್ [email protected] ಅಥವಾ ಗೂಗಲ್ ಡ್ರೈವ್, ವಾಟ್ಸ್​ಆಪ್, ಟೆಲಿಗ್ರಾಮ್ ಮೂಲಕ ಕಳುಹಿಸಬಹುದು. ಫ್ಯಾಕ್ಸ್ 080-22126718, 080-22483580 ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ ದೂ- 080-22483040 ಸಮಗ್ರ ಶಿಕ್ಷಣ ಕರ್ನಾಟಕದ ಯೋಜನಾ ನಿರ್ದೇಶಕ ಡಾ. ಎಂ.ಟಿ. ರೇಜು ಅವರನ್ನು ಸಂರ್ಪಸಬಹುದಾಗಿದೆ.

    ಡೊನೇಷನ್, ಶುಲ್ಕ ಹಾವಳಿಗೆ ಕಡಿವಾಣ, ಫೀ ಕೇಳುವ ಶಾಲೆ ಪರವಾನಗಿ ರದ್ದು: ಸಚಿವ ಸುರೇಶ್​ಕುಮಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts