More

    ಸೂಕ್ತ ಚಿಕಿತ್ಸೆ ಅಗತ್ಯ; ತಜ್ಞವೈದ್ಯರ ನಿಯೋಜನೆ ಆಗಬೇಕು..

    ಕರೊನಾ ಸೋಂಕಿನ ಎರಡನೇ ಅಲೆ ತೀವ್ರ ಸಂಕಷ್ಟ ಸೃಷ್ಟಿಸಿದ್ದು, ಇದರ ವಿರುದ್ಧ ಹೋರಾಟ ನಡೆಯುತ್ತಿದೆ. ಈ ಸಮಸ್ಯೆ ಆರೋಗ್ಯ ಕ್ಷೇತ್ರದ ಮೇಲಿನ ಒತ್ತಡವನ್ನು ಹೆಚ್ಚಿಸಿರುವ ಬೆನ್ನಲ್ಲೇ ಕಪು್ಪ ಶಿಲೀಂಧ್ರ (ಬ್ಲ್ಯಾಕ್ ಫಂಗಸ್) ಮತ್ತು ಬಿಳಿ ಶಿಲೀಂಧ್ರ (ವೈಟ್ ಫಂಗಸ್) ಪ್ರಕರಣಗಳು ಹೆಚ್ಚುತ್ತಿರುವುದು ಹೊಸ ಸವಾಲನ್ನು ಸೃಷ್ಟಿಸಿದೆ. ಈ ಕಾಯಿಲೆಗೆ ಚಿಕಿತ್ಸೆ ಪಡೆಯಲು ಲಕ್ಷಾಂತರ ರೂಪಾಯಿ ವೆಚ್ಚವಾಗುವ ಸಂಗತಿ ಕಳವಳವನ್ನು ಹೆಚ್ಚಿಸಿದೆ. ಬಹುತೇಕ ಆಸ್ಪತ್ರೆಗಳಲ್ಲಿ ಇದಕ್ಕೆ ಬೇಕಾದ ಔಷಧಗಳಾಗಲಿ, ನುರಿತ ವೈದ್ಯರಾಗಲಿ ಇರದಿರುವುದು ಸಮಸ್ಯೆಯ ತೀವ್ರತೆಗೆ ಸಾಕ್ಷಿ. ಮುಂಚೆ ಕಪು್ಪ ಶಿಲೀಂಧ್ರ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಿರಲಿಲ್ಲ. ಆದರೆ, ಕರೊನಾ ಸೋಂಕಿನಿಂದ ಗುಣಮುಖರಾದ ರೋಗಿಗಳಲ್ಲಿ ಹೆಚ್ಚಾಗಿ ಈ ಕಾಯಿಲೆ ಕಂಡುಬರುತ್ತಿದೆ. ಕರೊನಾ ಸೋಂಕಿತರ ಚಿಕಿತ್ಸೆಯಲ್ಲಿ ಸ್ಟಿರಾಯ್್ಡ ಹೆಚ್ಚೆಚ್ಚು ಬಳಸುತ್ತಿರುವುದರಿಂದ ಕಪ್ಪು ಶಿಲೀಂಧ್ರ ಬೆಳವಣಿಗೆಯಾಗಿ ರೋಗಿ ಚಿಕಿತ್ಸೆ ಪಡೆಯಲಾರದ ಸ್ಥಿತಿಗೆ ತಲುಪುತ್ತಿರುವ ಅದೆಷ್ಟೋ ನಿದರ್ಶನಗಳಿವೆ. ಕರೊನಾ ರೋಗಿಗಳ ಚಿಕಿತ್ಸೆಯಲ್ಲಿ ಸ್ಟಿರಾಯ್್ಡ್ನು ಬೇಕಾಬಿಟ್ಟಿ ಬಳಸಬಾರದು, ಇದು ಹಲವು ಅಡ್ಡಪರಿಣಾಮಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ತಜ್ಞರು ಹಲವು ದಿನಗಳ ಹಿಂದೆಯೇ ಎಚ್ಚರಿಸಿದ್ದರು. ಆದರೆ, ಕೋವಿಡ್ ರೋಗಿಗಳು ಶೀಘ್ರ ಚೇತರಿಸಿಕೊಳ್ಳುವಂತಾಗಲು ಸ್ಟಿರಾಯ್್ಡ ಬಳಕೆ ಅನಿವಾರ್ಯ ಎಂಬ ಅಭಿಪ್ರಾಯ ಕೆಲ ವೈದ್ಯರದ್ದು. ಆದರೆ, ಯಾವುದೇ ಔಷಧವಾಗಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ನೀಡಿದರೆ, ಅದರಲ್ಲೂ ಮಧುಮೇಹ, ಇತರೆ ಕಾಯಿಲೆಗಳಿದ್ದವರ ಮೇಲೆ ಪ್ರಯೋಗಿಸಿದ್ದಲ್ಲಿ ಅದರಿಂದ ವ್ಯತಿರಿಕ್ತ ಪರಿಣಾಮವೇ ಜಾಸ್ತಿ.

    ದೇಶದ ಹಲವು ರಾಜ್ಯಗಳಲ್ಲಿ ಬ್ಲಾ್ಯಕ್ ಫಂಗಸ್​ನ ಪ್ರಕರಣಗಳು ಹೆಚ್ಚುತ್ತಿದ್ದು, ಕರ್ನಾಟಕದಲ್ಲೂ ದಿನದಿಂದ ದಿನಕ್ಕೆ ಈ ರೋಗಿಗಳ ಸಂಖ್ಯೆ ಏರಿಕೆ ಕಾಣುತ್ತಿದೆ. ಕರೊನಾ ವಿರುದ್ಧ ಹೋರಾಡುತ್ತಲೇ ಈ ಕಾಯಿಲೆ ವಿರುದ್ಧ ಸೆಣೆಸಲು ವ್ಯವಸ್ಥೆಯನ್ನು ಸನ್ನದ್ಧಗೊಳಿಸಬೇಕಿದೆ. ಕಣ್ಣು, ಮೂಗು, ಗಂಟಲು (ಇಎನ್​ಟಿ) ತಜ್ಞವೈದ್ಯರ ಅವಶ್ಯಕತೆ ಹೆಚ್ಚಿದ್ದು, ಈ ವೈದ್ಯರನ್ನು ಸಜ್ಜುಗೊಳಿಸಬೇಕಿದೆ. ಕೇಂದ್ರ ಸರ್ಕಾರ ಈ ಸಂಬಂಧ ಎಲ್ಲ ರಾಜ್ಯಗಳಿಗೂ ಪತ್ರ ಬರೆದು, ಎಚ್ಚರಿಸಿದೆ. ಅಲ್ಲದೆ, ಎಲ್ಲ ರಾಜ್ಯ ಸರ್ಕಾರಗಳು ಕಪು್ಪ ಶಿಲೀಂಧ್ರ ಪ್ರಕರಣಗಳು, ಚಿಕಿತ್ಸೆ, ಔಷಧದ ಲಭ್ಯತೆ, ಮೃತರ ವಿವರವನ್ನು ಕೋವಿಡ್ ಮಾದರಿಯಲ್ಲೇ ಕೇಂದ್ರಕ್ಕೆ ಸಲ್ಲಿಸಬೇಕಿದೆ. ರಾಜಸ್ಥಾನ, ಗುಜರಾತ್, ಹರಿಯಾಣ, ತೆಲಂಗಾಣ ಮತ್ತು ಮಹಾರಾಷ್ಟ್ರ ಸರ್ಕಾರಗಳು ಬ್ಲಾ್ಯಕ್ ಫಂಗಸ್​ನ್ನು ಮಹಾಮಾರಿ ಎಂದು ಘೋಷಿಸಿ, ಚಿಕಿತ್ಸೆಗೆ ಕ್ರಮ ಕೈಗೊಂಡಿವೆ. ದೆಹಲಿ ಸರ್ಕಾರ ಇದಕ್ಕಾಗಿ ಪ್ರತ್ಯೇಕ ಆಸ್ಪತ್ರೆಗಳನ್ನೇ ನಿಗದಿಮಾಡಿದೆ. ಮಹಾರಾಷ್ಟ್ರದಲ್ಲಿ ಹಲವು ಕ್ರಮಗಳ ಹೊರತಾಗಿ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಕರ್ನಾಟಕದಲ್ಲಿ ಕಪ್ಪು ಶಿಲೀಂಧ್ರ ಸೋಂಕಿನ ಚಿಕಿತ್ಸೆಗೆ ಅಗತ್ಯವಿರುವ ತಜ್ಞ ವೈದ್ಯರುಗಳ ತಂಡ ಎಲ್ಲ ಸರ್ಕಾರಿ ಜಿಲ್ಲಾಸ್ಪತ್ರೆ, ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಲಭ್ಯವಿರುವುದರಿಂದ ಸೋಂಕಿತರು ಈ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ. ಒಟ್ಟಾರೆ, ಈ ಕಾಯಿಲೆಯನ್ನು ಆರಂಭಿಕ ಹಂತದಲ್ಲೇ ನಿಯಂತ್ರಣಕ್ಕೆ ತರಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts