More

    ಖರೀದಿಯಲ್ಲಿ ತಂತ್ರಗಾರಿಕೆ; ರಸಗೊಬ್ಬರ ಆಮದು ರಷ್ಯಾದಿಂದ ಅಧಿಕ

    ಭಾರತವು ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಫೆಬ್ರವರಿ ಅವಧಿಯಲ್ಲಿ ರಷ್ಯಾದಿಂದ ಯೂರಿಯಾ ಮತ್ತು ಡಿಎಪಿ ಸೇರಿದಂತೆ 34.19 ಲಕ್ಷ ಟನ್ ರಸಗೊಬ್ಬರಗಳನ್ನು ಆಮದು ಮಾಡಿಕೊಂಡಿದೆ. ಕಳೆದ ಮೂರು ವರ್ಷಗಳಲ್ಲಿಯೇ ಇದು ಆ ದೇಶದಿಂದ ಮಾಡಿಕೊಳ್ಳಲಾದ ಅತ್ಯಧಿಕ ಪ್ರಮಾಣದ ಆಮದಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ, ಯೂಕ್ರೇನ್-ರಷ್ಯಾ ಯುದ್ಧಾರಂಭದ ನಂತರದ ಒಂದು ವರ್ಷದಲ್ಲಿ ಈ ಆಮದು ಪ್ರಮಾಣ ದುಪ್ಪಟ್ಟಾಗಿದೆ. ರಷ್ಯಾದಿಂದ ಕಚ್ಚಾ ತೈಲವನ್ನು ರಿಯಾಯಿತಿ ದರದಲ್ಲಿ ಖರೀದಿ ಮಾಡಿರುವ ರೀತಿಯಲ್ಲಿಯೇ ರಸಗೊಬ್ಬರವನ್ನು ಕೂಡ ಅಗ್ಗದ ಬೆಲೆಗೆ ಖರೀದಿಸುವ ಸಾಂರ್ದಭಿಕ ಜಾಣ್ಮೆಯನ್ನು ಭಾರತ ಪ್ರದರ್ಶಿಸಿದೆ. ಇದೇ ವೇಳೆ ಭಾರತದೊಂದಿಗೆ ಗಡಿ ತಗಾದೆಯನ್ನು ಮಾಡಿಕೊಂಡಿರುವ ಕುಟೀಲ ಚೀನಾದ ಮೇಲಿನ ರಸಗೊಬ್ಬರ ಅವಲಂಬನೆಯನ್ನು ವ್ಯಾಪಕವಾಗಿ ತಗ್ಗಿಸಿರುವುದು ಉತ್ತಮ ಬೆಳವಣಿಗೆಯೇ ಆಗಿದೆ.

    ಭಾರತವು ಪ್ರಗತಿಶೀಲ ರಾಷ್ಟ್ರವಾಗಿ ಬೆಳೆದು ಪ್ರಗತಿ ಹೊಂದಿದ ರಾಷ್ಟ್ರವಾಗುವತ್ತ ದಾಪುಗಾಲು ಹಾಕುತ್ತಿದ್ದರೂ, ಕಳೆದ ಎಂಟು ವರ್ಷಗಳಲ್ಲಿ ಭಾರತೀಯರ ತಲಾದಾಯ ದುಪ್ಪಟ್ಟಾಗಿದ್ದರೂ ಈಗಲೂ ಶೇ. 40ರಷ್ಟು ಭಾರತೀಯರು ಜೀವನೋಪಾಯಕ್ಕಾಗಿ ಕೃಷಿಯನ್ನೇ ಅವಲಂಬಿಸಿದ್ದಾರೆ. 141 ಕೋಟಿಗೂ ಅಧಿಕ ಜನಸಂಖ್ಯೆಯೊಂದಿಗೆ ಚೀನಾವನ್ನು ಹಿಂದಿಕ್ಕಿ ಜಗತ್ತಿನಲ್ಲಿಯೇ ಅತ್ಯಧಿಕ ಜನರುಳ್ಳ ರಾಷ್ಟ್ರವಾಗುವತ್ತ ಹೆಜ್ಜೆ ಹಾಕಿರುವ ಭಾರತಕ್ಕೆ ಆಹಾರ ಭದ್ರತೆ ಮಹತ್ವದ ಸಂಗತಿಯಾಗಿದೆ. ಅಪಾರ ಜನಸಂಖ್ಯೆಗೆ ಅಗತ್ಯವಿರುವ ಆಹಾರವನ್ನು ಉತ್ಪಾದಿಸಲು ಪ್ರಸ್ತುತ ಪರಿಸ್ಥಿತಿಯಲ್ಲಿ ರಸಗೊಬ್ಬರದ ಅವಲಂಬನೆ ಅನಿವಾರ್ಯವಾಗಿದೆ. ದೇಶದ ರಸಗೊಬ್ಬರ ಬೇಡಿಕೆಯ ಮೂರನೇ ಒಂದರಷ್ಟನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಹೀಗಾಗಿ, ರಸಗೊಬ್ಬರವನ್ನು ಆಮದು ಮಾಡಿಕೊಳ್ಳುವಲ್ಲಿ ಜಾಗತಿಕವಾಗಿ ಭಾರತವು 3ನೇ ಸ್ಥಾನದಲ್ಲಿವೆ.

    ಇದನ್ನೂ ಓದಿ: ಕುಕ್ಕರ್​ ಸ್ಫೋಟ ಪ್ರಕರಣ; ಇನ್ನಿಬ್ಬರು ಶಂಕಿತ ಉಗ್ರರ ವಿರುದ್ಧ ಚಾರ್ಜ್​​ಶೀಟ್​​

    2021-22ರ ಹಣಕಾಸು ವರ್ಷದಲ್ಲಿ 19.15 ಲಕ್ಷ ಟನ್, 2020-21 ಹಣಕಾಸು ವರ್ಷದಲ್ಲಿ 19.15 ಲಕ್ಷ ಟನ್ ಮತ್ತು 2019-20 ಹಣಕಾಸು ವರ್ಷದಲ್ಲಿ 11.91 ಲಕ್ಷ ಟನ್​ಗಳಷ್ಟು ರಸಗೊಬ್ಬರವನ್ನು ರಷ್ಯಾದಿಂದ ಆಮದು ಮಾಡಿಕೊಳ್ಳಲಾಗಿತ್ತು. 2022-23ನೇ ಹಣಕಾಸು ವರ್ಷದ ಫೆಬ್ರವರಿವರೆಗೆ ರಷ್ಯಾದಿಂದ ಮಾಡಿಕೊಳ್ಳಲಾದ ಒಟ್ಟು 34.19 ಲಕ್ಷ ಟನ್ ರಸಗೊಬ್ಬರ ಆಮದು ಪೈಕಿ, 6.26 ಲಕ್ಷ ಟನ್ ಯೂರಿಯಾ ಸೇರಿದೆ. ಹಿಂದಿನ ಹಣಕಾಸು ವರ್ಷದಲ್ಲಿ 2.80 ಲಕ್ಷ ಟನ್ ಯೂರಿಯಾವನ್ನು ಆಮದು ಮಾಡಿಕೊಳ್ಳಲಾಗಿತ್ತು. 7.65 ಲಕ್ಷ ಟನ್ ಡಿಎಪಿ, 0.43 ಲಕ್ಷ ಟನ್ ಎಂಒಪಿ ಮತ್ತು 19.85 ಲಕ್ಷ ಟನ್ ಎನ್​ಪಿಕೆ ರಸಗೊಬ್ಬರಗಳನ್ನು ರಷ್ಯಾದಿಂದ ಆಮದು ಮಾಡಿಕೊಳ್ಳಲಾಗಿದೆ.

    ಇದನ್ನೂ ಓದಿ: ಈ ಯಂತ್ರವೊಂದಿದ್ದರೆ ಸಾಕು, ಕಳ್ಳರಿಗೆ ‘ಹೊಗೆ’ನೇ; ಕಳವಿಗೆ ಬಂದವರು ಧೂಮಕ್ಕೆ ಹೆದರಿ ಪರಾರಿ!?

    2021-22ನೇ ಹಣಕಾಸು ವರ್ಷದಲ್ಲಿ ಆಮದು ಮಾಡಿಕೊಳ್ಳಲಾದ ರಸಗೊಬ್ಬರದಲ್ಲಿ ಚೀನಾದ ಪಾಲು ಶೇ. 24ರಷ್ಟು ಹಾಗೂ ರಷ್ಯಾದ ಪಾಲು ಶೇ. 6ರಷ್ಟಿತ್ತು. ಆದರೀಗ, ರಷ್ಯಾದ ಪಾಲು ಶೇ. 21ಕ್ಕೆ ಏರಿಕೆಯಾಗಿದೆ. ಇದಲ್ಲದೆ, ಪ್ರಸ್ತುತ ಜಾಗತಿಕ ಮಾರುಕಟ್ಟೆ ದರಗಳಿಗೆ ಹೋಲಿಸಿದರೆ ಭಾರತವು ರಷ್ಯಾದಿಂದ ಪ್ರತಿ ಟನ್​ಗೆ 70 ಡಾಲರ್​ನಷ್ಟು (5782 ರೂಪಾಯಿ) ರಿಯಾಯಿತಿಯನ್ನು ಪಡೆದುಕೊಂಡಿದೆ. ಈ ಮೂಲಕ ಹತ್ತಾರು ಸಾವಿರ ಕೋಟಿ ರೂಪಾಯಿಗಳನ್ನು ರಸಗೊಬ್ಬರ ಆಮದಿನಲ್ಲಿ ಭಾರತ ಉಳಿತಾಯ ಮಾಡಿದೆ. ಯೂಕ್ರೇನ್ ಮೇಲೆ ರಷ್ಯಾ ಆಕ್ರಮಣದ ಮಾಡಿದ ಹಿನ್ನೆಲೆಯಲ್ಲಿ ರಷ್ಯಾದ ಕಚ್ಚಾ ತೈಲ ಖರೀದಿ ಮೇಲೆ ಅಮೆರಿಕ ಹಾಗೂ ಐರೋಪ್ಯ ದೇಶಗಳು ನಿರ್ಬಂಧ ವಿಧಿಸಿದ ಹಿನ್ನೆಲೆಯಲ್ಲಿ ಭಾರತವು ರಷ್ಯಾದಿಂದ ಕಚ್ಚಾ ತೈಲವನ್ನು ಅಗ್ಗದ ದರದಲ್ಲಿ ಖರೀದಿಸುತ್ತಿದೆ. ರಸಗೊಬ್ಬರ ಖರೀದಿಯಲ್ಲಿ ಇಂತಹುದೇ ತಂತ್ರವನ್ನು ಭಾರತ ಅನುಸರಿಸಿದೆ.

    ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

    ಲಾಟರಿಯಲ್ಲಿ 75 ಲಕ್ಷ ರೂ. ಗೆದ್ದ ಬಳಿಕ ಹೆದರಿ ಪೊಲೀಸ್ ಠಾಣೆಗೆ ಹೋದ ಕಾರ್ಮಿಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts