More

    ಸಂಪಾದನಾ ಮಠದಲ್ಲಿ ಹಗೇವು ಪತ್ತೆ

    ಚಿಕ್ಕೋಡಿ: ಪಟ್ಟಣದಲ್ಲಿರುವ ಪುರಾತನ ಸಂಪಾದನಾ ಚರಮೂರ್ತಿ ಮಠದಲ್ಲಿ ನೂರಾರು ವರ್ಷಗಳ ಹಿಂದೆ ಕಟ್ಟಿದ ಹಗೇವು ಪತ್ತೆಯಾಗಿದ್ದು, ಅದಿನ್ನೂ ವ್ಯವಸ್ಥಿತವಾಗಿಯೇ ಇದೆ. ಮಠದಲ್ಲಿ ನೆಲಹಾಸು (ಟೈಲ್ಸ್) ಅಳವಡಿಸುವ ಸಂದರ್ಭದಲ್ಲಿ ಗುರುವಾರ ಈ ಹಗೇವು ಪತ್ತೆಯಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ರೈತರು ತಮ್ಮ ಹೊಲದಲ್ಲಿ ಬೆಳೆದ ರಾಗಿ, ಜೋಳ, ಹೆಸರು, ಗೋಧಿ ಸೇರಿ ಇನ್ನಿತರ ದವಸ-ಧಾನ್ಯಗಳನ್ನು ಕ್ರಿಮಿಕೀಟ ಹಾಗೂ ಇಲಿಗಳಿಂದ ರಕ್ಷಿಸಿಕೊಳ್ಳಲು ನೆಲದೊಳಗೆ ಮಣ್ಣು ಹಾಗೂ ಕಲ್ಲು ಬಳಸಿ ಹಗೇವು ನಿರ್ಮಿಸಿ ಸಂಗ್ರಹಿಸಿಡುತ್ತಿದ್ದರು.

    ‘ಈ ಹಿಂದೆ ಬರಗಾಲ ಸಂದರ್ಭಗಳಲ್ಲಿ ಹಗೇವುಗಳಲ್ಲಿ ಇಟ್ಟ ಕಾಳುಗಳನ್ನು ಮಾರಾಟ ಮಾಡಿ ರೈತರು ತಮ್ಮ ಜೀವನ ಸಾಗಿಸುತ್ತಿದ್ದರು. ಆದರೆ, ಇಂದಿನ ದಿನಗಳಲ್ಲಿ ಬೆಳೆ ಬೆಳೆದ ಕೆಲವೇ ದಿನಗಳಲ್ಲಿ ಅವುಗಳನ್ನು ಮಾರಾಟ ಮಾಡಿ ರೈತರು ಹಣ ಪಡೆದುಕೊಳ್ಳುತ್ತಾರೆ. ಹಗೇವುಗಳಲ್ಲಿ ಸಂಗ್ರಹಿಸಿಟ್ಟ ಕಾಳು-ಕಡಿ, ದವಸ-ಧಾನ್ಯಗಳು ಬರಗಾಲದಂತಹ ಸಂದರ್ಭದಲ್ಲಿ ಉಪಯೋಗಕ್ಕೆ ಬರುತ್ತವೆ. ಆದರೆ, ಇತ್ತೀಚೆಗಿನ ವರ್ಷಗಳಲ್ಲಿ ಹಗೇವುಗಳು ಮಾಯವಾಗುತ್ತಿವೆ. ಈ ಸಂಪ್ರದಾಯ ಚಾಲ್ತಿಯಲ್ಲಿದ್ದಿದ್ದರೆ ಇಂದಿನ ಲೌಕ್‌ಡೌನ್ ಪರಿಸ್ಥಿತಿಯಲ್ಲಿ ಸಂಗ್ರಹಿಸಿಡುವ ಧಾನ್ಯ ಉಪಯೋಗಕ್ಕೆ ಬರುತ್ತಿತ್ತು. ಹೀಗಾಗಿ ಜನ ಇಂತಹ ಹಗೇವು ನಿರ್ಮಿಸಿ ದವಸ-ಧಾನ್ಯ ಸಂಗ್ರಹಿಸಿ ಇಟ್ಟರೆ ಆಪತ್ಕಾಲದಲ್ಲಿ ಪ್ರಯೋಜನವಾಗುತ್ತದೆ’ ಎಂದು ಶ್ರೀಮಠದ ಸಂಪಾದನಾ ಸ್ವಾಮೀಜಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts