More

    ರಿಯಾ ವಿರುದ್ಧ 15 ಕೋಟಿ ರೂ. ಕದ್ದ ಆರೋಪ, ಎಫ್​ಐಆರ್​ ವಿವರ ಕೇಳಿದ ಜಾರಿ ನಿರ್ದೇಶನಾಲಯ

    ನವದೆಹಲಿ: ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಅವರ ಕುಟುಂಬಸ್ಥರು ಮತ್ತು ನಟಿ ರಿಯಾ ಚಕ್ರವರ್ತಿ ನಡುವಿನ ಕಿತ್ತಾಟ ತಾರಕಕ್ಕೇರುವ ಎಲ್ಲ ಲಕ್ಷಣಗಳು ಗೋಚರಿಸಲಾರಂಭಿಸಿವೆ. ಸುಶಾಂತ್​ ಬ್ಯಾಂಕ್​ ಖಾತೆಯಿಂದ ರಿಯಾ ಕದ್ದಿದ್ದಾರೆ ಎನ್ನಲಾದ 15 ಕೋಟಿ ರೂ.ನ ಮೂಲದ ಬಗ್ಗೆ ಜಾರಿ ನಿರ್ದೇಶನಾಲಯಕ್ಕೆ ಆಸಕ್ತಿ ಮೂಡಿದೆ. ಈ ಹಿನ್ನೆಲೆಯಲ್ಲಿ ಸುಶಾಂತ್​ ಸಿಂಗ್​ ರಜಪೂತ್​ ಅವರ ತಂದೆ ಕೆ.ಕೆ. ಸಿಂಗ್​ ದೂರು ಆಧರಿಸಿ ದಾಖಲಿಸಿರುವ ಎಫ್​ಐಆರ್​ನ ವಿವರವನ್ನು ಸಲ್ಲಿಸುವಂತೆ ಬಿಹಾರ ಪೊಲೀಸರಿಗೆ ನೋಟಿಸ್​ ಜಾರಿ ಮಾಡಿದೆ.

    ಬಿಹಾರ ಪೊಲೀಸರಿಗೆ ಪತ್ರ ಬರೆದಿರುವ ಜಾರಿ ನಿರ್ದೇಶನಾಲಯ ಸುಶಾಂತ್​ ಸಿಂಗ್​ ರಜಪೂತ್​ ಅವರ ಎಲ್ಲ ಬ್ಯಾಂಕ್​ ಖಾತೆಗಳ ವಿವರಗಳನ್ನು ಸಲ್ಲಿಸುವಂತೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಮುಂಬೈನ ಬಾಂದ್ರಾದಲ್ಲಿರುವ ಕೋಟಕ್​ ಮಹಿಂದ್ರಾ ಬ್ಯಾಂಕ್​ಗೆ ತೆರಳಿದ ಬಿಹಾರ ಪೊಲೀಸರು ಸುಶಾಂತ್​ ಬ್ಯಾಂಕ್​ ಖಾತೆಯ ವಿವರ ಪಡೆಯಲು ಪ್ರಯತ್ನಿಸಿದರು.

    ಬಿಹಾರ ಪೊಲೀಸರು ದಾಖಲಿಸಿರುವ ಎಫ್​ಐಆರ್​ ಪ್ರಕಾರ ಸುಶಾಂತ್​ ಅವರ ತಂದೆ ಕೆ.ಕೆ. ಸಿಂಗ್​ ರಿಯಾ ಅಲ್ಲದೆ ಇನ್ನೂ ಮೂವರ ಬ್ಯಾಂಕ್​ ಖಾತೆಗಳಿಗೆ ಸುಶಾಂತ್​ ಖಾತೆಯಿಂದ ಒಟ್ಟು 15 ಕೋಟಿ ರೂ. ವರ್ಗಾವಣೆಗೊಂಡಿದೆ. ಈ ಮೂರು ಖಾತೆಗಳಲ್ಲಿ ಒಂದು ಸ್ವತಃ ರಿಯಾ ಅವರದ್ದಾಗಿದ್ದರೆ, ಇನ್ನೊಂದು ಆಕೆಯ ಸಹೋದರ ಹಾಗೂ ಮತ್ತೊಂದು ಆಕೆಯ ತಾಯಿಯ ಬ್ಯಾಂಕ್​ ಖಾತೆಗಳಾಗಿರುವುದಾಗಿ ಹೇಳಲಾಗಿದೆ. ಸುಶಾಂತ್​ ಮತ್ತು ರಿಯಾ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ಅವರಿಬ್ಬರೂ ಒಟ್ಟಾಗಿ ಮೂರು ನವೋದ್ಯಮಗಳಲ್ಲಿ ಹೂಡಿಕೆ ಮಾಡಿದ್ದರು ಎನ್ನಲಾಗಿದೆ.

    29 ವರ್ಷಗಳ ಹಿಂದಿನ ‘ಪ್ರತಿಜ್ಞೆ’ ಪೂರೈಸಿದ ಪ್ರಧಾನಿ ಮೋದಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts