More

    ಪಶ್ಚಿಮ ಬಂಗಾಳ; ಸಚಿವ, ಟಿಎಂಸಿ ನಾಯಕರ ಮೇಲೆ ಇ.ಡಿ ದಾಳಿ

    ಪಶ್ಚಿಮ ಬಂಗಾಳ: ನಾಗರಿಕ ಸಂಸ್ಥೆಗಳಲ್ಲಿ ನೇಮಕಾತಿಯಲ್ಲಿ ಅಕ್ರಮ ಆರೋಪ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಚಿವ ಜುಜಿತ್​ ಬೋಸ್​, ಟಿಎಂಸಿ ಶಾಸಕ ತಪಸ್​ ರಾಯ್​ ಮತ್ತು ಉತ್ತರ ದಮ್​ದಮ್​ ಪುರಸಭೆಯ ಮಾಜಿ ಅಧ್ಯಕ್ಷ ಸುಬೋಧ ಚಕ್ರವರ್ತಿ ಅವರ ನಿವಾಸಗಳ ಮೇಲೆ ಶುಕ್ರವಾರ ಬೆಳಗ್ಗೆ ಜಾರಿ ನಿರ್ದೆಶನಾಲಯದ ತಂಡ ದಾಳಿ ನಡೆಸಿದೆ.

    ಇದನ್ನೂ ಓದಿ:VIDEO | ಇವರು ಮೊಹಮ್ಮದ್ ಶಮಿನಾ…?, ಲುಕ್ ನೋಡಿ ಗೊಂದಲಕ್ಕೀಡಾದ ಅಭಿಮಾನಿಗಳು!

    ಏಪ್ರಿಲ್​ 2023ರಲ್ಲಿ ಪುರಸಭೆಗಳ ನೇಮಕಾತಿಯಲ್ಲಿನ ಅಕ್ರಮಗಳ ಬಗ್ಗೆ ತನಿಖೆ ನಡೆಸುವಂತೆ ಕಲ್ಕತ್ತಾ ಹೈಕೋರ್ಟ್​ ಸಿಬಿಐಗೆ ಆದೇಶ ಮಾಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಜೂ.7ರಂದು ಸಿಬಿಐ 16 ಸ್ಥಳಗಳ ಮೇಲೆ ದಾಳಿ ನಡೆಸಿತು. ಮತ್ತು ನಾಡಿಯಾ, ಹೂಗ್ಲಿ, ಮತ್ತು ಉತ್ತರ 24 ಹಗರಣ ಜಿಲ್ಲೆಗಳಲ್ಲಿ ಮತ್ತು ಸಾಲ್ಟ್​ ಲೇಕ್​ ಪುರಸಭೆಯ ಬಹು ನಾಗರಿಕ ಸಂಸ್ಥೆಗಳಿಂದ ದಾಖಲೆಗಳನ್ನು ವಶಪಡಸಿಕೊಂಡಿದೆ.

    ಆ ಬಳಿಕ ಆಗಸ್ಟ್​​ 2023ರಲ್ಲಿ ಪ್ರಕರಣದ ಸಿಬಿಐ ತನಿಖೆಯನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳದ ಸರ್ಕಾರದ ಅರ್ಜಿಯನ್ನು ಸುಪ್ರೀಂ ಕೋರ್ಟ್​ ವಜಾಗೊಳಿಸಿತ್ತು. ಅ.5 ರಂದು ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಆಹಾರ ಮತ್ತು ಸರಬರಾಜು ಸಚಿವ ರಥಿನ್​ ಘೋಷ್​ ಅವರ ನಿವಾಸ ಸೇರಿದಂತೆ ಹಲವು ಸ್ಥಳಗಳ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಿತ್ತು.

    ಇತ್ತೀಚೆಗೆ ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್​ ಮುಖಂಡನ ಮನೆಗೆ ಹಗರಣವೊಂದಕ್ಕೆ ಸಸಂಬಂಧಿಸಿದಂತೆ ಶೋಧ ನಡೆಸಲು ಬಂದ ಇಡಿ ಅಧಿಕಾರಿಗಳ ಮೇಲೆ ಹಲ್ಲೆ ನಡೆದಿದ್ದು ಮೂವರು ಅಧಿಕಾರಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಆರೋಪ ಮಾಡಿದ್ದರು.

    ಸತತ ಐದು ದಿನಗಳ ಕಾಲ ಬ್ಯಾಂಕ್​ಗಳಿಗೆ ಸಾಲು ಸಾಲು ರಜೆ; ಮಕರ ಸಂಕ್ರಾಂತಿಯಂದು ಯಾವ ರಾಜ್ಯಗಳಲ್ಲಿ ರಜೆ ಇರುತ್ತದೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts