More

    ‘ವಿಚಾರಣೆಯಿಲ್ಲದೆ ಆರೋಪಿಗಳನ್ನು ಅನಿರ್ಧಿಷ್ಟಾವಧಿ ಜೈಲಿನಲ್ಲಿರಿಸುವುದು ಅಸಾಧ್ಯ’: ಸುಪ್ರೀಂಕೋರ್ಟ್​

    ನವದೆಹಲಿ: ಇಡಿ ತನಿಖೆಯನ್ನು ಅನಿರ್ದಿಷ್ಟಾವಧಿಗೆ ಮುಂದುವರಿಸುವ ಮತ್ತು ವಿಚಾರಣೆಯಿಲ್ಲದೆ ಆರೋಪಿಗಳನ್ನು ಜೈಲಿನಲ್ಲಿಡುವ ಅಭ್ಯಾಸವು ನ್ಯಾಯಾಲಯಕ್ಕೆ ತೊಂದರೆಯಾಗುತ್ತಿದೆ ಮತ್ತು ಅದು ಸಮಸ್ಯೆಯನ್ನು ತೆರೆದುಕೊಳ್ಳುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

    ಇದನ್ನೂ ಓದಿ: ‘ಘಾಟಿ’ಯಲ್ಲಿ ಅನುಷ್ಕಾ ಶೆಟ್ಟಿ ಕ್ರಿಮಿನಲ್​ ಆಗಿದ್ದೇಗೆ? ವಿವರ ಇಲ್ಲಿದೆ ನೋಡಿ..

    ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿದ್ದ ನ್ಯಾಯಪೀಠವು ಇಡಿಯನ್ನು ಪ್ರತಿನಿಧಿಸುವ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ ರಾಜು ಅವರಿಗೆ, “ನೀವು ಪೂರಕ ಆರೋಪಪಟ್ಟಿ ಸಲ್ಲಿಸುವುದನ್ನು ಮುಂದೂಡುವುದು ಸರಿಯಲ್ಲ. ವ್ಯಕ್ತಿಯು ವಿಚಾರಣೆಯಿಲ್ಲದೆ 18 ತಿಂಗಳು ಜೈಲಿನಲ್ಲಿರುತ್ತಾನೆ ಎಂದರೆ ಏನರ್ಥ? ಇದರಿಂದ ನಮಗೆ ತೊಂದರೆಯಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿತು.

    ಜಾಮೀನು ನೀಡುವ ಹಕ್ಕು ಸಂವಿಧಾನದ 21 ನೇ ವಿಧಿಯಲ್ಲಿ ಕಲ್ಪಿಸಲಾಗಿದೆ. ಜಾಮೀನಿಗೆ ಕಠಿಣ ಅವಳಿ ಷರತ್ತುಗಳನ್ನು ವಿಧಿಸುವ ಸೆಕ್ಷನ್ 45 ಪಿಎಂಎಲ್​ಎ, ಜಾಮೀನು ನೀಡುವ ಹಕ್ಕನ್ನು ಚಲಾಯಿಸಲು ನ್ಯಾಯಾಲಯಕ್ಕೆ ಕೈಕಟ್ಟಿಹಾಕಿದಂತಾಗುತ್ತಿದೆ ಎಂದು ಪೀಠವು ಹೇಳಿತು.

    ಡೀಫಾಲ್ಟ್ ಜಾಮೀನಿನ ಸಂಪೂರ್ಣ ಉದ್ದೇಶವೆಂದರೆ ತನಿಖೆ ಪೂರ್ಣಗೊಳ್ಳದ ಹೊರತು ವಿಚಾರಣೆಯನ್ನು ಪ್ರಾರಂಭಿಸುವುದಿಲ್ಲ ಎಂದು ನೀವು ಹೇಳಲು ಸಾಧ್ಯವಿಲ್ಲ. ಇಡಿ ಅಳವಡಿಸಿಕೊಂಡ ಈ ಪದ್ಧತಿಯನ್ನು ಸುಪ್ರೀಂ ಕೋರ್ಟ್ ಟೀಕಿಸಿದೆ.

    ನೀವು ಆರೋಪಿಯನ್ನು ಬಂಧಿಸಿದಾಗಲೇ ವಿಚಾರಣೆಯನ್ನು ಪ್ರಾರಂಭಿಸಬೇಕು ಎಂದು ನ್ಯಾಯಮೂರ್ತಿ ಖನ್ನಾ ರಾಜು ಅವರಿಗೆ ತಿಳಿಸಿದರು.

    ಅರ್ಜಿದಾರ ಪ್ರೇಮ್‌ ಪ್ರಕಾಶ್‌ 18 ತಿಂಗಳಿಂದ ಜೈಲಿನಲ್ಲಿದ್ದು, ಪೀಠ ಗಮನಿಸಿ, ಇದನ್ನು ಇಡಿ ವಕೀಲರನ್ನು ಪ್ರಶ್ನಿಸಿತು, ಇದು ಜಾಮೀನಿನ ಸ್ಪಷ್ಟ ಉಲ್ಲಂಘನೆ ಪ್ರಕರಣವಾಗಿದೆ ಅಲ್ಲವೇ? ಇದನ್ನು ಹೇಗೆ ಸಮರ್ಥಿಸಿಕೊಳ್ಳಲಾಗುತ್ತದೆ ಎಂದು ಪ್ರಶ್ನಿಸಿತು,

    ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಪ್ರೇಮ್ ಪ್ರಕಾಶ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಪ್ರಕಾಶ್ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಸಹಾಯಕರಾಗಿದ್ದು, ಜಾರ್ಖಂಡ್ ಹೈಕೋರ್ಟ್ ಈ ಪ್ರಕರಣದಲ್ಲಿ ಜಾಮೀನು ನಿರಾಕರಿಸಿದ ನಂತರ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.

    ಕ್ರಿಮಿನಲ್ ಪ್ರೊಸೀಜರ್​ ಚೋಡ್​(ಸಿಆರ್​ಪಿಸಿ) ನಲ್ಲಿ ನಿಗದಿಪಡಿಸಿದ ಸಮಯದೊಳಗೆ ತನಿಖೆಯನ್ನು ಪೂರ್ಣಗೊಳಿಸಲು ಅಥವಾ ಆರೋಪಪಟ್ಟಿ ಸಲ್ಲಿಸಲು ತನಿಖಾ ಅಧಿಕಾರಿಗಳಿಗೆ ಸಾಧ್ಯವಾಗದಿದ್ದಾಗ ಆರೋಪಿಯು ಡೀಫಾಲ್ಟ್ ಜಾಮೀನಿಗೆ ಅರ್ಹನಾಗಿರುತ್ತಾನೆ. ಇದು ಸಾಮಾನ್ಯವಾಗಿ 60 ದಿನಗಳು ಅಥವಾ 90 ದಿನಗಳು ಇರುತ್ತದೆ. ಮತ್ತು ಆ ಅವಧಿಯೊಳಗೆ ತನಿಖೆಯನ್ನು ಪೂರ್ಣಗೊಳಿಸದಿದ್ದರೆ, ಆರೋಪಿಯು ಡೀಫಾಲ್ಟ್ ಜಾಮೀನು ಪಡೆಯಲು ಅರ್ಹನಾಗಿರುತ್ತಾನೆ.

    ಸ್ವೀಡಿಷ್ ಸಂಸತ್​ ಉಡಾಯಿಸಲು ಯೋಜಿಸಿದ್ದ ಐಸಿಸ್ ಉಗ್ರರು ಜರ್ಮನಿಯಲ್ಲಿ ಅರಸ್ಟ್​..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts