More

    ಇಸಿಜಿ ಯಂತ್ರ ಉಚಿತ ವಿತರಣೆ 300 ಗಡಿ ಸನಿಹ

    ಮಂಗಳೂರು: ಗ್ರಾಮೀಣ ಪ್ರದೇಶದ ಜನರ ಹೃದಯ ಸಂಬಂಧಿ ಸಮಸ್ಯೆಗಳನ್ನು ಸಕಾಲದಲ್ಲೇ ಪತ್ತೆಹಚ್ಚಿ ಅವರ ಜೀವ ಉಳಿಸಲು ಪ್ರಯತ್ನಿಸುವ ‘ಕಾರ್ಡಿಯೋಲಾಜಿ ಅಟ್ ಡೋರ್ ಸ್ಟೆಪ್ಸ್ ಫೌಂಡೇಶನ್’ ಅಭಿಯಾನ ಮುಂದಿನ ವಾರ ಮಹತ್ವದ ಘಟ್ಟ ತಲುಪಲಿದೆ.

    ನಗರದ ಕೆಎಂಸಿ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್ ನೇತೃತ್ವದಲ್ಲಿ ಮಂಗಳವಾರ ಸಾಯಂಕಾಲ ತನಕ ರಾಜ್ಯದ 23 ಜಿಲ್ಲೆಗಳಿಗೆ ಒಟ್ಟು 290 ಇಸಿಜಿ ಯಂತ್ರಗಳನ್ನು ವಿತರಿಸಲಾಗಿದ್ದು, ಮುಂದಿನ ವಾರ ಪ್ರತಿಷ್ಠಾನದ ಗುರಿ 300 ತಲುಪಲಿದೆ.

    ಇಸಿಜಿ ವಿತರಣೆ ಪ್ರದೇಶ ಆಯ್ಕೆಗೆ ದಿನದ 24 ಗಂಟೆ ವೈದ್ಯರು ಲಭ್ಯವಿರುವ ಜನದಟ್ಟಣೆಯ ಗ್ರಾಮೀಣ ಪ್ರದೇಶವನ್ನು ಮುಖ್ಯ ಮಾನದಂಡವಾಗಿ ಇಟ್ಟುಕೊಳ್ಳಲಾಗಿದೆ. ಇಂತಹ ಯಂತ್ರ ಹೆಚ್ಚಿನ ಅವಶ್ಯಕತೆ ಇರುವ ಉತ್ತರ ಕನ್ನಡದಂತಹ ಜಿಲ್ಲೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪೂರೈಸಲಾಗಿದೆ ಎನ್ನುತ್ತಾರೆ ಡಾ.ಪದ್ಮನಾಭ ಕಾಮತ್. 2018 ಏಪ್ರಿಲ್‌ನಲ್ಲಿ ಇಸಿಜಿ ಯಂತ್ರ ಉಚಿತ ವಿತರಣೆ ಅಭಿಯಾನ ಆರಂಭಿಸಲಾಗಿದ್ದು, ದಾನಿಗಳು ನೆರವಾಗಿದ್ದಾರೆ. ಸರ್ಕಾರ ನೈತಿಕ ಬೆಂಬಲ ನೀಡಿದೆ ಎಂದು ಸ್ಮರಿಸಿಕೊಳ್ಳುತ್ತಾರೆ.

    ಅಭಿಯಾನಕ್ಕೆ ಪ್ರೇರಣೆ: ವರ್ಷಗಳ ಹಿಂದೆ ಚಿಕ್ಕಮಗಳೂರಿನ ಬಣಕಲ್ ಸಮೀಪ ಕುಗ್ರಾಮವೊಂದರ ಆಟೋ ಚಾಲಕ ಹೃದಯಾಘಾತಕ್ಕೊಳಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆತರುವ ಸಂದರ್ಭ ದಾರಿ ಮಧ್ಯೆಯೇ ಮೃತಪಟ್ಟಿದ್ದರು. ಡಾ.ಕಾಮತ್ ನೇತೃತ್ವದ ಅಭಿಯಾನಕ್ಕೆ ಇದೇ ಮುಖ್ಯ ಪ್ರೇರಣೆಯಾಗಿತ್ತು.

    ಮೂರು ತಿಂಗಳಲ್ಲಿ ಕರೊನಾ ಸೋಂಕಿತರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಿದ್ದು, ಒಂದು ವಾರದಿಂದ ಕಡಿಮೆಯಾಗಿದೆ. ಈ ಬೆಳವಣಿಗೆಗೆ ಕಾರಣ ಇನ್ನೂ ತಿಳಿಯಬೇಕಿದೆ.
    – ಡಾ.ಪದ್ಮನಾಭ ಕಾಮತ್  ಹೃದ್ರೋಗ ತಜ್ಞ, ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts