More

    ವಿಷಾನಿಲದ ದುಷ್ಪರಿಣಾಮ ತಡೆಯಲು ಬಾಳೆಹಣ್ಣು ತಿಂದು, ಹಾಲು ಕುಡಿಯಿರಿ…

    ವಿಶಾಖಪಟ್ಟಣ: ಇಲ್ಲಿನ ಎಲ್​ಜಿ ಪಾಲಿಮರ್ಸ್​ ರಾಸಾಯನಿಕ ಘಟಕದಿಂದ ಸೋರಿಕೆಯಾಗಿರುವ ಸ್ಟಿರೀನ್​ ವಿಷಾನಿಲವನ್ನು ಸೇವಿಸಿದ್ದರೆ, ಅದರ ಪರಿಣಾಮದಿಂದ ತಕ್ಷಣವೇ ಪಾರಾಗಲು ಬಾಳೆಹಣ್ಣು, ಬೆಲ್ಲ ತಿಂದು ಹಾಲು ಕುಡಿಯಿರಿ ಎಂದು ಆಂಧ್ರಪ್ರದೇಶ ಪೊಲೀಸರು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

    ಮೈಕೈಯಲ್ಲಿ ಕೆರೆತ (ನವೆ) ಕಾಣಿಸಿಕೊಂಡರೆ, ಸೋಪಿನಿಂದ ಸ್ವಚ್ಛಗೊಳಿಸಿಕೊಳ್ಳಿ. ಕಣ್ಣುಗಳು ಉರಿಯುತ್ತಿದ್ದರೆ, ಸ್ವಚ್ಛವಾದ ನೀರಲ್ಲಿ ಅವನ್ನು ತೊಳೆದು, ಕಣ್ಣಿನ ಡ್ರಾಪ್ಸ್​ಗಳನ್ನು ಹಾಕಿಕೊಳ್ಳುವಂತೆಯೂ ಸಲಹೆ ನೀಡುತ್ತಿದ್ದಾರೆ.

    ಇದನ್ನೂ ಓದಿ: ವಿಷಾನಿಲ ಅವಘಡದ ಬಗ್ಗೆ ಈಗ ಹೇಳಿಕೆ ಬಿಡುಗಡೆ ಮಾಡಿದ ಎಲ್​​ಜಿ ಪಾಲಿಮರ್ಸ್​ ಕೆಮಿಕಲ್​ ಫ್ಯಾಕ್ಟರಿ..

    ಇದಕ್ಕೂ ಮುನ್ನ ಸುದ್ದಿಗಾರರ ಜತೆ ಮಾತನಾಡಿದ್ದ ಆಂಧ್ರಪ್ರದೇಶದ ಡಿಜಿಪಿ ದಾಮೋದರ್​ ಗೌತಮ್​ ಸವಾಂಗ್​, ವಿಷಾನಿಲ ಸೇವಿಸಿದ್ದರೆ ಯಥೇಚ್ಚವಾಗಿ ನೀರು ಕುಡಿದು, ಅದರ ಪರಿಣಾಮದಿಂದ ತಪ್ಪಿಸಿಕೊಳ್ಳಿ ಎಂದು ಜನರಿಗೆ ಸಲಹೆ ನೀಡಿದ್ದರು.

    ವಿಷಾನಿಲ ಸೇವನೆಯಿಂದ ಸ್ವಲ್ಪ ಅಸ್ವಸ್ಥತೆ ಉಂಟಾದರೂ 108 ಆಂಬುಲೆನ್ಸ್​ ಕರೆಯಿಸಿಕೊಂಡು ತಕ್ಷಣವೇ ಆಸ್ಪತ್ರೆಗೆ ತೆರಳುವಂತೆ ಪೊಲೀಸರು ಜನರಿಗೆ ಸೂಚಿಸುತ್ತಿದ್ದಾರೆ.

    ಅರೆಮಿಲಿಟರಿ ಪಡೆ ನಿಗಾವಣೆಯಲ್ಲಿ ಅಹಮದಾಬಾದ್​ ಲಾಕ್​ಡೌನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts