ಅರೆಮಿಲಿಟರಿ ಪಡೆ ನಿಗಾವಣೆಯಲ್ಲಿ ಅಹಮದಾಬಾದ್​ ಲಾಕ್​ಡೌನ್​

ಅಹಮದಾಬಾದ್​: ದಿನೇದಿನೆ ಹೆಚ್ಚಾಗುತ್ತಿರುವ ಕರೊನಾ ಸೋಂಕು ತಡೆಗಟ್ಟಲು ಅಹಮದಾಬಾದ್​ ನಗರವನ್ನು ಒಂದು ವಾರ ಸಂಪೂರ್ಣ ಲಾಕ್​ಡೌನ್​ ಮಾಡಲು ಗುಜರಾತ್​ ಸರ್ಕಾರ ನಿರ್ಧರಿಸಿದೆ. ಲಾಕ್​ಡೌನ್​ ಅನ್ನು ಪರಿಪೂರ್ಣವಾಗಿ ಅನುಷ್ಠಾನಗೊಳಿಸಲು ಅರೆಮಿಲಿಟರಿ ಪಡೆ ನೆರವು ಪಡೆಯಲಾಗುತ್ತಿದೆ. ಗುರುವಾರ ಮಧ್ಯರಾತ್ರಿಯಿಂದಲೇ ಸಂಪೂರ್ಣ ಲಾಕ್​ಡೌನ್​ ಜಾರಿಗೆ ಬರುತ್ತಿದೆ. ಇದನ್ನು ಪರಿಪೂರ್ಣವಾಗಿ ಅನುಷ್ಠಾನಗೊಳಿಸಲು ಅರೆಮಿಲಿಟರಿ ಪಡೆಯ 5 ಹೆಚ್ಚುವರಿ ಕಂಪನಿಗಳ ಸಹಾಯ ಪಡೆದುಕೊಳ್ಳಲಾಗುತ್ತಿದೆ. ಈ ಸಿಬ್ಬಂದಿ ಬುಧವಾರ ನಗರವನ್ನು ತಲುಪಿದ್ದು, ಗುರುವಾರ ಬೆಳಗ್ಗೆ ನಗರದಾದ್ಯಂತ ಪಥಸಂಚಲನ ನಡೆಸಿ, ಲಾಕ್​ಡೌನ್​ ಬಗ್ಗೆ ಅರಿವು ಮೂಡಿಸಿದರು. ಇದನ್ನೂ … Continue reading ಅರೆಮಿಲಿಟರಿ ಪಡೆ ನಿಗಾವಣೆಯಲ್ಲಿ ಅಹಮದಾಬಾದ್​ ಲಾಕ್​ಡೌನ್​