More

    ಬಾಲ್ಯದ ಶಿಕ್ಷಣಕ್ಕಿದೆ ವ್ಯಕ್ತಿತ್ವ ಬದಲಾಯಿಸುವ ಶಕ್ತಿ

    ಸವಣೂರ: ಪ್ರತಿ ವ್ಯಕ್ತಿಯ ಬಾಲ್ಯಾವಸ್ಥೆಯ ಶಿಕ್ಷಣ ವ್ಯಕ್ತಿತ್ವ ಬದಲಾಯಿಸುವ ಶಕ್ತಿ ಹೊಂದಿರುತ್ತದೆ. ಅಂತಹ ಶಿಕ್ಷಣವನ್ನು ನೀಡುವ ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರ ಸ್ವಾಮೀಜಿ ಹೇಳಿದರು.

    ತಾಲೂಕಿನ ಯಲವಿಗಿ ಗ್ರಾಮದ ಪರಮವಾಡಿ ತಾಂಡಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ತಾಲೂಕು ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

    ಪ್ರಶಸ್ತಿ ಪುರಸ್ಕೃತ ಶಿಕ್ಷಕಿಯರಾದ ರೇಖಾ ಕೆರೂರ ಹಾಗೂ ರೇಖಾ ಪಿ.ಜಿ. ಅವರನ್ನು ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ ಹಾಗೂ ಗ್ರಾಮಸ್ಥರ ಪರವಾಗಿ ಸನ್ಮಾನಿಸಲಾಯಿತು. ಎಸ್​ಡಿಎಂಸಿ ಉಪಾಧ್ಯಕ್ಷೆ ಸುನೀತಾ ಬಡ್ನಿ ಅಧ್ಯಕ್ಷತೆ ವಹಿಸಿದ್ದರು.

    ಯಲವಿಗಿ ಗ್ರಾಪಂ ಅಧ್ಯಕ್ಷ ನೀಲಪ್ಪ (ಮುದ್ದಣ್ಣ) ಮುಗದೂರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕ ಅಧ್ಯಕ್ಷ ಮುತ್ತಣ್ಣ ಚುರ್ಚಿ ಹಾಗೂ ಕಾರ್ಯದರ್ಶಿ ಶಿವಯೋಗಿ ಆಲದಕಟ್ಟಿ, ಗ್ರಾಪಂ ಸದಸ್ಯ ನಿಂಗನಗೌಡ್ರ ಹೊಸಮನಿ, ಶಿಕ್ಷಕ ಎಫ್.ಆರ್. ಹಿರೇಮಠ ಮಾತನಾಡಿದರು.

    ಗ್ರಾಪಂ ಸದಸ್ಯ ಪ್ರಕಾಶ ಲಮಾಣಿ, ಶಿಕ್ಷಕರ ಸೊಸೈಟಿ ಅಧ್ಯಕ್ಷ ಎನ್.ವಿ. ಕಲಕೋಟಿ, ರಾಮಣ್ಣ ಲಮಾಣಿ, ಮುರಾರ್ಜಿ ವಸತಿ ಶಾಲೆಯ ಶಿಕ್ಷಕ ನಾರಾಯಣ ಹೊಸೂರ, ಶಾಲಾ ಎಸ್​ಡಿಎಂಸಿ ಪದಾಧಿಕಾರಿಗಳಾದ ಸೋಮವ್ವ, ಸರೋಜಾ, ಆರ್.ಎಚ್. ನಾಯಕ, ಅನಿಲಕುಮಾರ ನಾಗಪ್ಪನವರ, ಹುಸೇನಸಾಬ್ ಹುಲ್ಲೂರ, ಶಿಕ್ಷಕಿ ರೇಣುಕಾಜಿ., ಇತರರು ಪಾಲ್ಗೊಂಡಿದ್ದರು.

    ಶಿಕ್ಷಕರಾದ ಎ.ಪಿ. ಅಂಗಡಿ ಹಾಗೂ ಎಂ.ಬಿ. ಭಾವಿಕಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts