More

    ಹಣ ಎಗರಿಸಲು ಇ-ಮೇಲ್‌ನಿಂದ ವೈರಸ್: ಎಚ್ಚರದಿಂದ ಇರುವಂತೆ ಕೇಂದ್ರ ಸರ್ಕಾರ ಸಲಹೆ

    ನವದೆಹಲಿ: ಗ್ರಾಹಕರ ಖಾತೆಗಳಿಂದ ಹಣವನ್ನು ಎಗರಿಸಲು ದುಷ್ಕರ್ಮಿಗಳು ಇ-ಮೇಲ್ ಮೂಲಕ ಹೊಸ ಡಯಾವೋಲ್ ವೈರಸ್ ಹರಡುತ್ತಿದ್ದು ಈ ಬಗ್ಗೆ ಸಾರ್ವಜನಿಕರು ಎಚ್ಚರದಿಂದ ಇರುವಂತೆ ಕೇಂದ್ರ ಸರ್ಕಾರ ಸಲಹೆ ಮಾಡಿದೆ.

    ಇ-ಮೇಲ್ ಮೂಲಕ ಹೊಸ ರೀತಿಯ ರ‌್ಯಾನ್‌ಸಂವೇರ್ ಹರಡುತ್ತಿದೆ ಎಂದು ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (ಸಿಇಆರ್‌ಟಿ-ಇನ್) ಮೂಲಕ ಸರ್ಕಾರ ವೈರಸ್ ಅಲರ್ಟ್ ರವಾನಿಸಿದೆ. ಅದು ವಿಂಡೋಸ್ ಕಂಪ್ಯೂಟರ್‌ಗಳನ್ನು ಟಾರ್ಗೆಟ್ ಮಾಡುತ್ತಿದೆ.

    ಒಂದು ಸಲ ಪೇಲೋಡ್ ಡೆಲಿವರಿ ಆಯಿತೆಂದರೆ ಕಂಪ್ಯೂಟರ್‌ಅನ್ನು (ಪಿಸಿ) ದೂರ ನಿಯಂತ್ರಣದಿಂದ (ರಿಮೋಟ್) ಲಾಕ್ ಮಾಡಲಾಗುತ್ತದೆ. ಹಾಗೂ ಬಳಕೆದಾರರಿಂದ ಹಣ ಕೇಳಲಾಗುತ್ತದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಡಯಾವೋಲ್ ಹೆಸರಿನ ಈ ವೈರಸ್ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸರ್ಕಾರ ಸೂಚಿಸಿದೆ.

    ಗೋವಿನ ವಿಷಯ ಮಾತಾಡುವುದೇ ಅಪರಾಧವಾಗಿದೆ, ಅದು ಅವರಿಗೆ ‘ಪಾಪ’ ಆದ್ರೆ ನಮಗದು ‘ತಾಯಿ’ ಎಂದ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts