More

    ಶರೀಫಾ, ಮಧುರಾಣಿ ಅವರ ಕೃತಿಗಳಿಗೆ ‘ಈ ಹೊತ್ತಿಗೆ’ ಪ್ರಶಸ್ತಿ

    ಬೆಂಗಳೂರು: ಕಲಬುರಗಿ ಮೂಲದ ಡಾ. ಕೆ.ಶರೀಫಾ ಅವರ ಅಪ್ರಕಟಿತ ಕಥಾಸಂಕಲನ ‘ನೀರೊಳಗಣ ಕಿಚ್ಚು’ ಈ ಹೊತ್ತಿಗೆ ಕಥಾ ಪ್ರಶಸ್ತಿಗೆ ಹಾಗೂ ಬೆಂಗಳೂರಿನ ಎಚ್.ಎಸ್. ಮಧುರಾಣಿ ಅವರ ‘ನೀಲಿ ಚುಕ್ಕಿಯ ನೆರಳು’ ಅಪ್ರಕಟಿತ ಕವನ ಸಂಕಲನ ಈ ಹೊತ್ತಿಗೆ ಕಾವ್ಯ ಪ್ರಶಸ್ತಿಗೆ ಪಾತ್ರವಾಗಿವೆ.

    ಖ್ಯಾತ ಕತೆಗಾರ್ತಿ ವೀಣಾ ಶಾಂತೇಶ್ವರ ಅವರು ಈ ಬಾರಿಯ ಈ ಹೊತ್ತಿಗೆ ಕಥಾ ಪ್ರಶಸ್ತಿ ವಿಭಾಗದ ತೀರ್ಪುಗಾರರಾಗಿದ್ದರು. ಕವಿ ಡಾ. ಎಚ್.ಎಸ್. ಶಿವಪ್ರಕಾಶ್ ಈ ಹೊತ್ತಿಗೆ ಕಾವ್ಯ ಪ್ರಶಸ್ತಿ ತೀರ್ಪುಗಾರರಾಗಿದ್ದರು. ಇದು ಈ ಹೊತ್ತಿಗೆಯ ಮೊದಲ ಕಾವ್ಯ ಪ್ರಶಸ್ತಿಯಾಗಿದೆ.

    ಎರಡೂ ಪ್ರಶಸ್ತಿಗಳು ತಲಾ 10 ಸಾವಿರ ರೂ. ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿವೆ. ಮಾ.27ರಂದು ಬೆಂಗಳೂರಿನ ಜೆ.ಪಿ. ನಗರದಲ್ಲಿರುವ ಕಪ್ಪಣ್ಣ ಅಂಗಳ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಈ ಹೊತ್ತಿಗೆ ಸಂಚಾಲಕಿ ಜಯಲಕ್ಷ್ಮೀ ಪಾಟೀಲ್ ತಿಳಿಸಿದ್ದಾರೆ.

    ಮದ್ವೆಯಾದ ಹತ್ತೇ ತಿಂಗಳಲ್ಲಿ ದುರಂತ; ಪತ್ನಿಯ ಶವ ನೋಡಿ ಪತಿಯೂ ಆತ್ಮಹತ್ಯೆ…

    ಮಸೀದಿ-ಮಂದಿರಗಳ ಧ್ವನಿವರ್ಧಕದ ಶಬ್ದ ತಗ್ಗಿಸದಿದ್ದರೆ ಕಾನೂನುಕ್ರಮ: ಪೊಲೀಸ್ ಕಮಿಷನರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts