More

    ಮನೆ-ಸೈಟು ಮಾರಾಟದ ಮೋಸಕ್ಕೆ ಬ್ರೇಕ್! 100 ವಾರ್ಡ್‌ಗಳಲ್ಲಿ ಇ-ಆಸ್ತಿ ಸಾಫ್ಟ್​​ವೇರ್​​ ಜಾರಿ

    ಬೆಂಗಳೂರು : ಇನ್ನು ಮುಂದೆ ಬೆಂಗಳೂರಿನಲ್ಲಿ ಮನೆ, ನಿವೇಶನಗಳನ್ನು ಕೊಳ್ಳುವವರು ಸ್ವಲ್ಪ ನಿಶ್ಚಿಂತೆಯಿಂದ ವ್ಯವಹಾರ ನಡೆಸಬಹುದು. ಏಕೆಂದರೆ ಬಿಬಿಎಂಪಿ ವ್ಯಾಪ್ತಿಯ 100 ವಾರ್ಡ್‌ಗಳಲ್ಲಿ ಇ-ಆಸ್ತಿ ತಂತ್ರಾಂಶವನ್ನು ಜಾರಿಗೊಳಿಸಲಾಗಿದೆ. ಈ ಮೂಲಕ ಸ್ವತ್ತುಗಳನ್ನು ಹಲವರಿಗೆ ಮಾರಾಟ ಮಾಡುವುದು, ನಕಲಿ ದಾಖಲೆ ಸೃಷ್ಟಿಸುವುದಕ್ಕೆ ಶಾಶ್ವತ ತಡೆ ಬಿದ್ದಂತಾಗಿದೆ. ಜೊತೆಗೆ ಖಾತೆ ಮುಂತಾದ ದಾಖಲಾತಿಗಳನ್ನು ಪಡೆಯಲು ಕಚೇರಿಗಳಲ್ಲಿ ಲಂಚ ನೀಡಬೇಕಾಗುವ ಪರಿಸ್ಥಿತಿಗೂ ಪರಿಹಾರ ದೊರಕಲಿದೆ.

    ಇ-ಆಸ್ತಿ ತಂತ್ರಾಂಶ ಎಂಬುದು ಆನ್‌ಲೈನ್ ಸಾಫ್ಟ್​ವೇರ್ ಆಗಿದ್ದು, ಪಾಲಿಕೆಯ 100 ವಾರ್ಡ್‌ಗಳಲ್ಲಿನ ಎಲ್ಲ ಆಸ್ತಿಗಳ ದತ್ತಾಂಶಗಳನ್ನು ಇದಕ್ಕೆ ವರ್ಗಾಯಿಸಲಾಗುತ್ತಿದೆ. ಯಾವುದೇ ಆಸ್ತಿಗಳನ್ನು ತೆರಯಬೇಕಿದ್ದರೂ ಅವುಗಳಿಗೆ ವಲಯ, ವಾರ್ಡ್ ಹಾಗೂ ಆಸ್ತಿ ಮಾಲೀಕರ ಹೆಸರು ಅಥವಾ ಆಸ್ತಿ ಸಂಖ್ಯೆಯನ್ನು ನಮೂದಿಸಿ ತೆರಯಬಹುದು. ಆಸ್ತಿಗಳಿಗೆ ಜಿಐಎಸ್ ಮ್ಯಾಪಿಂಗ್ ಮಾಡಲಾಗಿದ್ದು, ಆಸ್ತಿ ದಾಖಲಾತಿಗಳ ಬಗ್ಗೆ 48 ಬಗೆಯ ದತ್ತಾಂಶ ಸಂಗ್ರಹಿಸಲಾಗಿದೆ. ಈ ಸಾಫ್ಟ್​ವೇರ್​ನಲ್ಲಿ ಆಸ್ತಿ ಖಾತೆಯನ್ನು ಡೌನ್​ಲೋಡ್​ ಮಾಡಿಕೊಳ್ಳುವ ಸೌಲಭ್ಯವಿದ್ದು, ಆಸ್ತಿ ಮಾಲೀಕರು ತಮ್ಮ ಆಸ್ತಿ ದಾಖಲೆ ಬೇಕೆಂದಾಗ ಪಾಲಿಕೆಗೆ 125 ರೂ. ಪಾವತಿಸಿ ಮುದ್ರಣ ಪಡೆಯಬಹುದಾಗಿದೆ.

    ಇದನ್ನೂ ಓದಿ: ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಮೇಲೆ ನಿರ್ಬಂಧ… ಸಿಎಂ ಯಡಿಯೂರಪ್ಪ ಹೇಳಿದ್ದೇನು?

    ಬಿಬಿಎಂಪಿ ವ್ಯಾಪ್ತಿಯ ಕೇಂದ್ರ ಭಾಗದ 100 ವಾರ್ಡ್​ಗಳು ಅಂದರೆ 2007ಕ್ಕಿಂತ ಮುಂಚಿನ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿದ್ದ ಹಳೆಯ ವಾರ್ಡ್​ಗಳ ಆಸ್ತಿಗಳ ವಿವರವನ್ನು ಇ-ಆಸ್ತಿಗೆ ಸೇರಿಸಲಾಗುತ್ತಿದೆ. ಕಳೆದ ವರ್ಷ ಡಿಸೆಂಬರ್​​ನಲ್ಲಿ ಬಿಬಿಎಂಪಿಯ ಶಾಂತಿನಗರ ಕಂದಾಯ ಉಪವಿಭಾಗದ 3 ವಾರ್ಡ್‌ಗಳಲ್ಲಿ ಇ-ಆಸ್ತಿ ತಂತ್ರಾಂಶವನ್ನು ಜಾರಿಗೊಳಿಸಲಾಗಿತ್ತು. ಈ ವಾರ್ಡ್‌ಗಳಲ್ಲಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಇದೀಗ 2ನೇ ಹಂತವಾಗಿ ಉಳಿದ 97 ವಾರ್ಡ್‌ಗಳಿಗೆ ವಿಸ್ತರಣೆ ಮಾಡಲಾಗಿದೆ. ಇನ್ನು 3ನೇ ಹಂತದಲ್ಲಿ 2007ರಲ್ಲಿ ಹೊಸದಾಗಿ ಪಾಲಿಕೆಗೆ ಸೇರ್ಪಡೆಗೊಂಡ ವಾರ್ಡ್​ಗಳ ವ್ಯಾಪ್ತಿಗೂ ಅನುಷ್ಠಾನ ಮಾಡಲಾಗುವುದು ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

    ರಶೀದಿ ವಿತರಣೆ ವಿಳಂಬ: ತಂತ್ರಾಂಶ ಜಾರಿಗೊಂಡಿರುವ 100 ವಾರ್ಡ್‌ಗಳ ವ್ಯಾಪ್ತಿಯಲ್ಲಿರುವ ಸ್ವತ್ತುಗಳ ದತ್ತಾಂಶವನ್ನು ಇ-ಆಸ್ತಿ ತಂತ್ರಾಂಶಕ್ಕೆ ವರ್ಗಾಯಿಸಲಾಗುತ್ತಿದೆ. ಹೀಗಾಗಿ, ಈ ಆಸ್ತಿಗಳ ಗಣಕೀಕೃತ ಖಾತಾ ಪ್ರಮಾಣ ಪತ್ರ, ಖಾತಾ ಉದೃತ ಭಾಗ ಮುದ್ರಣ ಮತ್ತು 2007-08 ನೇ ಸಾಲಿನವರೆಗೆ ಬೇ-ಬಾಕಿ ಆಸ್ತಿತೆರಿಗೆ ಪಾವತಿಸುವ ಪ್ರಕರಣಗಳಿಗೆ ರಶೀದಿ ವಿತರಣೆಯಲ್ಲಿ ವಿಳಂಬವಾಗುತ್ತದೆ. ಹೀಗಾಗಿ, ಸಾರ್ವಜನಿಕರು ಸಹಕರಿಸುವಂತೆ ಪಾಲಿಕೆ ಮನವಿ ಮಾಡಿದೆ.

    ಇದನ್ನೂ ಓದಿ: ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ – ಟಿಎಚ್‌ಒ ರಾಮಾಂಜನೇಯ ಸಲಹೆ

    ಆಸ್ತಿ ವಿವರಗಳಿಗೆ ಡಿಜಿ ಲಾಕರ್ ವ್ಯವಸ್ಥೆ : ಈ ಸಾಫ್ಟ್​ವೇರ್​ನ ಸಹಾಯದಿಂದ ನಗರದಲ್ಲಿ ಆಸ್ತಿ ಹೊಂದಿದ ಪ್ರತಿಯೊಬ್ಬ ಮಾಲೀಕರ ಆಧಾರ್ ಕಾರ್ಡ್ ಸಂಖ್ಯೆಯ ಜೋಡಣೆಯೊಂದಿಗೆ ‘ಡಿಜಿ ಲಾಕರ್’ ಸೃಷ್ಟಿಸಬಹುದಾಗಿದೆ. ಆಸ್ತಿ ಸಂಬಂಧಿತ ಎಲ್ಲ ದಾಖಲೆಗಳ ಕಾಪಿಗಳನ್ನು ಇದರಲ್ಲಿ ಭದ್ರವಾಗಿಡಬಹುದು. ಡಿಜಿಟಲ್ ಆಸ್ತಿ ನಿರ್ಮಾಣವಾದ ನಂತರ ಆಸ್ತಿ ಮಾರಾಟ, ಮಾಲೀಕತ್ವ ವರ್ಗಾವಣೆ ಯಾವುದೇ ಕಾರ್ಯಕ್ಕೂ ಡಿಜಿಟಲ್ ಸಹಿ ದಾಖಲೆ ಪಡೆಯಬೇಕಾಗುತ್ತದೆ. ಹೀಗಾಗಿ ಅನಧಿಕೃತ ಮಾರಾಟ, ಸುಳ್ಳು ದಾಖಲೆ ನಿರ್ಮಾಣ ಸೇರಿ ಯಾವುದೇ ರೀತಿಯ ಭ್ರಷ್ಟಾಚಾರ ನಡೆಯುವುದನ್ನು ಮೂಲದಲ್ಲೇ ತಡೆಯಬಹುದಾಗಿದೆ.

    ಇಂದು ವರ್ಲ್ಡ್ ಓರಲ್ ಹೆಲ್ತ್ ಡೇ… ನಿಮ್ಮ ಬಾಯಿಯ ಬಗ್ಗೆ ಹುಷಾರು!

    ರೇಪ್ ಮಾಡಲು ಯತ್ನಿಸಿದವನ ಮರ್ಮಾಂಗವನ್ನೇ ತುಂಡರಿಸಿದ ಮಹಿಳೆ; ಬುಕ್ಕಾದವು ಎರಡು ಕೇಸು !

    8ನೇ ತರಗತಿ ಮುಗಿಸದವ ಸಿಸೇರಿಯನ್ ಮಾಡಿದ… ಮುಂದಾದದ್ದು ದೊಡ್ಡ ದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts