More

    ಮಕ್ಕಳಲ್ಲಿ ಶಿಸ್ತು ಕಲಿಸುವುದೇ ಎಸ್ಪಿಸಿ ಉದ್ದೇಶ

    ಯಾದಗಿರಿ: ಮಕ್ಕಳಲ್ಲಿ ಶಿಸ್ತು, ತ್ಯಾಗ, ನಿಷ್ಠೆ ಮೂಡಿಸುವುದೇ ಸ್ಟುಡೆಂಟ್ ಪೊಲೀಸ್ ಕೆಡೆಟ್ (ಎಸ್ಪಿಸಿ) ಉದ್ದೇಶವಾಗಿದೆ ಎಂದು ಡಿವೈಎಸ್ಪಿ ಯು.ಶರಣಪ್ಪ ಹೇಳಿದರು.

    ನಗರದ ಹೊರ ವಲಯದಲ್ಲಿರುವ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ರಾಜ್ಯ ಪೊಲೀಸ್ ಇಲಾಖೆಯ ಕೆಎಸ್ಆರ್ಪಿ ಕಮಾಂಡೆಟ್ 6ನೇ ಪಡೆ ಕಲಬುರಗಿ ವತಿಯಿಂದ ಮಕ್ಕಳಿಗೆ ಹಮ್ಮಿಕೊಂಡಿದ್ದ ಸ್ಟುಡೆಂಟ್ ಪೊಲೀಸ್ ಕೆಡೆಟ್ನ ಹನ್ನೊಂದು ವಾರಗಳ ಸಾಪ್ತಾಹಿಕ ತರಗತಿಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಮಕ್ಕಳಲ್ಲಿ ಕೇವಲ ಶಾರಿರೀಕ ಶಿಸ್ತು ಅಲ್ಲದೇ ಮಾನಸಿಕ ದೃಢತೆ, ಕಾನೂನುಗಳ ಬಗ್ಗೆ ಜ್ಞಾನ, ದೇಶದ ಬಗ್ಗೆ ಹೆಮ್ಮೆ ಮೂಡುವಂತೆ ಮಾಡುವುದು ಕೂಡ ಈ ಸ್ಟುಡೆಂಟ್ ಪೊಲೀಸ್ ಕೆಡೆಟ್ ಉದ್ದೇಶವಾಗಿದೆ. ಇದರಿಂದ ಮಕ್ಕಳಲ್ಲಿ ಸಮಾಜಿಕ ಜಾಗೃತಿ ಮೂಡುತ್ತದೆ ಎಂದು ಹೇಳಿದರು.

    ತರಬೇತಿ ನೋಡಲ್ ಅಧಿಕಾರಿ ಸತ್ಯನಾರಾಯಣರಾವ್, ತಮ್ಮ ಅನುಭವ ಹಂಚಿಕೊಂಡರು. ಮಕ್ಕಳಲ್ಲಿ ಇಂತಹ ವರ್ಗಗಳು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದು ಹೇಳಿದರು.

    ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ಮತ್ತು ಶೀಲ್ಟ್ ಎಸ್ಪಿಸಿ ಕಡೆಯಿಂದ ವಿತರಿಸಲಾಯಿತು. ತರಬೇತಿ ಪಡೆದ ಮಕ್ಕಳಿಗೆ ಪದಕ ವಿತರಿಸಲಾಯಿತು. ಮುಖ್ಯಗುರು ಭಗವಂತ, ಶಾಲೆಯ ಎಲ್ಲ ಸಹಶಿಕ್ಷಕರು,ಮಕ್ಕಳು ಇದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts