More

    ಉತ್ರಮ ಪ್ರಜೆಗಳ ನಿರ್ಮಾಣ ನಮ್ಮ ಸಾಮಾಜಿಕ ಜವಾಬ್ದಾರಿ

    ಚಿತ್ರದುರ್ಗ: ಸುಸ್ಥಿರ ಭಾರತಕ್ಕೆ ಉತ್ತಮ ಪ್ರಜೆಗಳ ನಿರ್ಮಾಣ ಮಾಡುವುದು ನಮ್ಮ ಸಾಮಾಜಿಕ ಜವಾಬ್ದಾರಿಯಾಗಿದೆ ಎಂದು ಡಯಟ್ ಪ್ರಾಚಾರ‌್ಯ ಎಸ್‌ಕೆಬಿ ಪ್ರಸಾದ್ ಹೇಳಿದರು.
    ಸಮಗ್ರ ಶಿಕ್ಷಣ ಕರ್ನಾಟಕ,ಮೈಂಡ್ ಟ್ರೀ ಫೌಂಡೇಶನ್ ಹಾಗೂ ಶಿಕ್ಷಣ ಫೌಂಡೇಶನ್ ಸಹಭಾಗಿತ್ವದಲ್ಲಿ ನಗರದ ಡಯಟ್‌ನಲ್ಲಿ ಬುಧವಾರ ಆಯೋಜಿಸಿದ್ದ ಬುನಾದಿ ಹಂತದ ಭಾಷೆ ಮತ್ತು ಗಣಿತ ಅಭ್ಯಾಸ ಪುಸ್ತಕಗಳ ಬಿಡುಗಡೆ ಹಾಗೂ ಜಿಲ್ಲೆಯ ಆಯ್ದ ಶಾಲೆಗಳಿಗೆ ಕಂಪ್ಯೂಟರ್ ವಿತ ರಣೆ ಕಾರ‌್ಯಕ್ರಮದಲ್ಲಿ ಮಾತನಾಡಿ,ಸಮಗ್ರ ಶಿಕ್ಷಣ ಇಲಾಖೆ ಜತೆಗೆ ಶಿಕ್ಷಣ ಫೌಂಡೇಶನ್‌ಒಡಂಬಡಿಕೆ ಮಾಡಿಕೊಂಡಿದ್ದು ಮಕ್ಕಳ ಶೈಕ್ಷಣಿಕ ಅಭಿವೃ ದ್ಧಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಕಾರ‌್ಯವಾಗಿದೆ ಎಂದರು.
    ಬೆಂಗಳೂರು ಶಿಕ್ಷಣ ಫೌಂಡೇಶನ್ ಚೀಫ್ ಆಪರೇಟಿಂಗ್ ಆಫೀಸರ್ ಲೆಪ್ಟಿನೆಂಟ್ ಕಮಾಂಡರ್ ಸುನೀಲ್ ಮಾತನಾಡಿ,ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪ್ರತಿ ಮಗುವಿಗೂ ತಲುಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪ್ರೇರಣಾ ಕಾರ್ಯಕ್ರಮದ ಮೂಲಕ ಶೈಕ್ಷಣಿಕ ಅಭಿವೃದ್ದಿಗೆ ಶ್ರಮಿಸಲಾಗುತ್ತಿದೆ.
    ಈ ಕಾರ‌್ಯಕ್ರಮವನ್ನು ರಾಜ್ಯದೆಲ್ಲ ಜಿಲ್ಲೆಗಳಿಗೂ ವಿಸ್ತರಿಸಲಾಗಿದ್ದು,2015-16ರಲ್ಲಿ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಚಿತ್ರದುರ್ಗ ಜಿಲ್ಲೆಯ ಲ್ಲಿ ಪ್ರೇರಣಾ ಕಾರ‌್ಯಕ್ರಮ ಅನುಷ್ಠಾನವಾಗಿದೆ. ಬುನಾದಿ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನ ಬೆಳೆಸಲು ಕನ್ನಡ ಇಂಗ್ಲೀಷ್ ಮತ್ತು ಗಣಿತ ವಿಷಯ ಗ ಳಲ್ಲಿ ಹೆಚ್ಚಿನ ಅಭ್ಯಾಸಕ್ಕಾಗಿ ಚಿತ್ರದುರ್ಗ ಜಿಲ್ಲೆಯ 1594 ಸರ್ಕಾರಿ ಶಾಲೆಗಳ 4 ರಿಂದ 7ನೇತರಗತಿ 61442 ವಿದ್ಯಾರ್ಥಿಗಳಿಗೆ ಅಭ್ಯಾಸ ಪುಸ್ತಕ ವಿತರಿಸಲಾಗಿದೆ.
    ನಮ್ಮ ಈ ಕಾರ‌್ಯಕ್ರಮಕ್ಕೆ ಮೈಂಡ್ ಟ್ರೀ ಫೌಂಡೇಶನ್ ಸಹಕಾರ ನೀಡುತ್ತಿದೆ. 2022-23ನೇ ಸಾಲಿನಲ್ಲಿ ಈ ಸಂಸ್ಥೆಯ ಸಹಭಾಗಿತ್ವದಲ್ಲಿ ಜಿಲ್ಲೆಯ ಆಯ್ದ 20 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ,ಪ್ರತಿ ಶಾಲೆಗೆ 5 ಕಂಪ್ಯೂಟರ್‌ಗಳಂತೆ 100 ಕಂಪ್ಯೂಟರ್‌ಗಳನ್ನು ವಿತರಿಸಲಾಗಿದೆ. ನಮ್ಮ ಪ್ರೇರಣಾ ಕಾರ‌್ಯಕ್ರಮಕ್ಕೆ ಚಿತ್ರದುರ್ಗ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ದೊರಕಿರುವುದು ಸಂತಸ ತಂದಿದೆ ಎಂದರು.
    ಟ್ರೀ ಫೌಂಡೇಶನ್ ಮುಖ್ಯಸ್ಥ ದೀಪಕ್ ಪ್ರಭು ಮಟ್ಟಿ ಮಾತನಾಡಿದರು. ಉಪ ಪ್ರಾಚಾರ‌್ಯ ಡಿ.ಆರ್.ಕೃಷ್ಣಮೂರ್ತಿ,ಮೈಂಡ್ ಟ್ರೀ ಸಂಸ್ಥೆಯ ಲಲಿತಾಹೊಳ್ಳ,ನೋಡಲ್ ಅಧಿಕಾರಿ ಸಿ.ಎಸ್.ಲೀಲಾವತಿ,ಶಿಕ್ಷಣ ಫೌಂಡೇಶನ್‌ನ ಅಶ್ವಥ್ ನಾರಾಯಣ್,ಡಯಟ್‌ನ ಹಿರಿಯ ಉಪನ್ಯಾಸಕರು, ಉಪನ್ಯಾಸಕರು,ಕ್ಷೇತ್ರ ಸಮನ್ವಯಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು. ಉಪನ್ಯಾಸಕ ಕೆ.ಜಿ.ಪ್ರಶಾಂತ್ ಸ್ವಾಗತಿಸಿ,ಎಸ್.ಬಸವರಾಜು ನಿರೂಪಿಸಿದರು. ಬಿ.ಆರ್.ಪಿ ವಿದ್ಯಾ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts