More

    ಕರ್ತವ್ಯ ಲೋಪವಾದರೆ ಕ್ರಮ

    ಅಥಣಿ: ಪಟ್ಟಣದ ತಾಲೂಕು ಆಸ್ಪತ್ರೆಗೆ ಶನಿವಾರ ಡಿಸಿಎಂ ಲಕ್ಷ್ಮಣ ಸವದಿ ಭೇಟಿ ನೀಡಿ ಆಸ್ಪತ್ರೆಯ ವೈದ್ಯರೊಂದಿಗೆ ಒಂದು ಗಂಟೆಗೂ ಅಧಿಕ ಕಾಲ ಚರ್ಚಿಸಿದರು. ತಾಲೂಕಿನಲ್ಲಿ ಕಂಡು ಬಂದಿರುವ ಸೋಂಕಿತರ ಸಂಖ್ಯೆ ಮತ್ತು ತೆಗೆದುಕೊಳ್ಳುತ್ತಿರುವ ಮುನ್ನೆಚ್ಚರಿಕೆ ಹಾಗೂ ಚಿಕಿತ್ಸಾ ಕ್ರಮಗಳ ಕುರಿತು ನಂತರ ಸಚಿವರು ಪರಿಶೀಲಿಸಿದರು.

    ಮಾಹಿತಿ ನೀಡದ ಅಧಿಕಾರಿಗಳು: ಅಥಣಿ ತಾಲೂಕಿನಲ್ಲಿ ದೆಹಲಿ ಜಮಾತ್‌ನಿಂದ ಬಂದಿರುವ ಜನರ ಮಾಹಿತಿ ಕೇಳಿದಾಗ ಸರಿಯಾದ ಮಾಹಿತಿ ಇಲ್ಲದ ಕಾರಣ ಅಧಿಕಾರಿಗಳು ತಡವರಿಸಿದರು. ಇದರಿಂದ ಸಚಿವರು ವೈದ್ಯಾಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ನಿಮ್ಮ ಬಳಿ ಮಾಹಿತಿ ಇಲ್ಲವೆಂದರೆ ಹೇಗೆ? ಸರಿಯಾಗಿ ಕಾರ್ಯನಿರ್ವಹಿಸಿ, ಇಲ್ಲವಾದರೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಹೊಂದಾಣಿಕೆ ಇರಲಿ: ಬೆಳಗಾವಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಮಾಹಿತಿಗೂ ತಾಲೂಕು ಆಸ್ಪತ್ರೆ ಮಾಹಿತಿಗೂ ವ್ಯತ್ಯಾಸವಿದೆ. ಹಾಗಾಗಿ ಸಮಸ್ಯೆ ಬಗೆಹರಿಸಿಕೊಳ್ಳಿ. ಮಾಹಿತಿಯಲ್ಲಿ ಹೊಂದಾಣಿಕೆ ಇರಲಿ ಎಂದು ಸಚಿವರು ತಾಲೂಕು ವೈದ್ಯಾಧಿಕಾರಿಗೆ ಸೂಚಿಸಿದರು.

    ಕ್ವಾರಂಟೈನ್‌ಗಾಗಿ ತಾಲೂಕಿನಲ್ಲಿ ಒಟ್ಟು 10 ಲಾಡ್ಜ್ ಮತ್ತು ಚಮಕೇರಿ, ಮದಬಾವಿ, ಮೋಳೆ ಸೇರಿ ಹಲವೆಡೆ ಹಾಸ್ಟೆಲ್ ಕಾಯ್ದಿರಿಸಲಾಗಿದೆ ಎಂದು ವೈದ್ಯಾಧಿಕಾರಿಗಳು ಹೇಳುತ್ತಿದ್ದಂತೆ ಅಸಮಾಧಾನಗೊಂಡ ಡಿಸಿಎಂ ಲಕ್ಷ್ಮಣ ಸವದಿ ಕ್ವಾರಂಟೈನ್ ಪದದ ಅರ್ಥವೇನು ಎಂದು ವೈದ್ಯರನ್ನು ಕೇಳಿದರು.

    ಹಾಸ್ಟೆಲ್‌ನಲ್ಲಿರುವ ಜನರನ್ನು ತಕ್ಷಣವೇ ಶೌಚಗೃಹ ಸೌಲಭ್ಯ ಇರುವ ಹೋಟೆಲ್‌ಗಳಿಗೆ ಸ್ಥಳಾಂತರಿಸಿ ಎಂದು ಸೂಚಿಸಿದರು. ಅಥಣಿ ಸರ್ಕಾರಿ ಆಸ್ಪತ್ರೆ ಸಿಎಂಒ ಸಿ.ಎಸ್.ಪಾಟೀಲ, ಟಿಎಚ್‌ಒ ಎಂ.ಎಸ್.ಕೊಪ್ಪದ, ಡಾ.ಎಂ.ಪಿ.ಕಾಳೆಕರ, ಡಾ.ಚಿದಾನಂದ ಮೇತ್ರಿ, ಡಾ.ಬಾಳಾಸಾಹೇಬ ಇರಳಿ, ಸಿಬ್ಬಂದಿ ಟಿ.ಎಂ.ನರಟ್ಟಿ, ನವೀನ ಕಾತ್ರಾಳ, ಬಿ.ಎ.ನೇಮಗೌಡ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts