More

    ಕರ್ತವ್ಯ ನಿರ್ವಹಣೆಗೆ ಹೆಸರು ನೋಂದಾಯಿಸಿ

    ಕುಕನೂರು: ಮತದಾನದ ಮೂಲಕ ಜನನಾಯಕರ ಆಯ್ಕೆ ಮಾಡುವುದು ಎಲ್ಲರ ಕರ್ತವ್ಯವಾಗಿದ್ದು, ಇದನ್ನು ನಿಭಾಯಿಸಲು ಮತದಾರ ಪಟ್ಟಿಯಲ್ಲಿ ಹೆಸರು ಸೆರ್ಪಡಿಸಬೇಕು ಎಂದು ತಹಸೀಲ್ದಾರ್ ಎಚ್.ಪ್ರಾಣೇಶ್ ಹೇಳಿದರು.

    ಇದನ್ನೂ ಓದಿ:ಇನ್ಮುಂದೆ ನೌಕಾಪಡೆ ಶ್ರೇಣಿಗಳಿಗೆ ಭಾರತೀಯ ಹೆಸರು: ಪ್ರಧಾನಿ ಮೋದಿ

    ಪಟ್ಟಣದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಪಂ, ತಾಪಂ ಹಾಗೂ ತಾಲೂಕ ಆಡಳಿತ ಸಂಯುಕ್ತಾಶ್ರಯದಲ್ಲಿ ನಡೆದ ಹೊಸ ಮತದಾರರ ನೋಂದಣಿ ಅಭಿಯಾನದಲ್ಲಿ ಬುಧವಾರ ಮಾತನಾಡಿದರು.

    ಡಿ.3ರಿಂದಲೇ ಹೊಸ ಮತದಾರರ ನೋಂದಣಿ ಅಭಿಯಾನಕ್ಕೆ ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ. 18 ವರ್ಷ ತುಂಬಿದ ನಾಗರೀಕರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳುವ ನಮೂನೆ-6 ಭರ್ತಿ ಮಾಡಿ, ತಮ್ಮ ವಾರ್ಡ್‌ನ ಬಿಎಲ್‌ಓ ಹತ್ತಿರ ಕೊಡಬೇಕು ಅಥವಾ ಓಟರ್ ಹೆಲ್ಪ್‌ಲೈನ್ ಮೊಬೈಲ್ ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು ಎಂದರು.

    ತಾಪಂ ಸಹಾಯಕ ನಿರ್ದೇಶಕ ವೆಂಕಟೇಶ್ ವಂದಾಲ್ ಮಾತನಾಡಿ, ಭಾರತ ಪ್ರಜಾಪ್ರಭುತ್ವ ದೇಶವಾಗಿದ್ದು, ಇಲ್ಲಿ ಪ್ರಜೇಗಳೆ ಪ್ರಭುಗಳು ಚುನಾವಣೆಯಲ್ಲಿ ಉತ್ತಮ ಜನಪ್ರತಿಧಿಗಳನ್ನು ಆಯ್ಕೆ ಮಾಡಿಕೊಳ್ಳುವ ಗುರುತರ ಜವಾಬ್ದಾರಿ ಮತದಾರರ ಕೈಯಲ್ಲಿ ಇರುತ್ತದೆ. ಇದರಿಂದ ಪ್ರಜ್ಞಾವಂತ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವಲ್ಲಿ ಯುವಕರು ಹೆಚ್ಚು ಪ್ರಭಾವ ಬೀರುತ್ತಾರೆ ಎಂದರು.

    ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಚಾರ್ಯ ಚೆನ್ನವಸಪ್ಪ ಬಳ್ಳಾರಿ, ಶಿಕ್ಷಕರಾದ ಮಂಜುನಾಥ ಶ್ಯಾವಿಯಾರ, ಪ್ರಭು ರಾಠೋಡ, ಬಿ.ಚಿದಾನಂದ, ಮಂಜುನಾಥ ಗಾಣಿಗೇರ, ಮಹಮ್ಮದ್ ಅಸರದ, ಶಿವಲೀಲಾ, ಐಇಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ, ಕೈಗಾರಿಕ ತರಬೇತಿ ಸಂಸ್ಥೆಯ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts