More

    ಬಾಕಿ ಕೂಲಿ ಪಾವತಿಸಿ

    ಹಗರಿಬೊಮ್ಮನಹಳ್ಳಿ: ನರೇಗಾ ಯೋಜನೆಯಲ್ಲಿನ ವಿವಿಧ ಬೇಡಿಕೆ ಈಡೇರಿಕೆಗಾಗಿ ಅಧಿವೇಶನದಲ್ಲಿ ಚರ್ಚಿಸುವಂತೆ ಒತ್ತಾಯಿಸಿ ಶಾಸಕ ಕೆ.ನೇಮಿರಾಜ ನಾಯ್ಕರಿಗೆ ಗ್ರಾಮೀಣ ಕೂಲಿ ಕಾರ್ಮಿಕ ಸಂಘಟನೆ ಪದಾಧಿಕಾರಿಗಳು ಶನಿವಾರ ಮನವಿ ಸಲ್ಲಿಸಿದರು.

    ಇದನ್ನೂ ಓದಿ: 2000 ರೂ. ನೋಟು ಹಿಂಪಡೆದ RBI: ಈವರೆಗೆ 97% ನೋಟುಗಳು ವಾಪಸ್​, ಬಾಕಿ ಉಳಿದಿರುವ ಹಣವೆಷ್ಟು?

    ಸಂಘಟನೆಯ ತಾಲೂಕು ಸಂಚಾಲಕಿ ಎಂ.ಬಿ.ಕೊಟ್ರಮ್ಮ ಮಾತನಾಡಿ, ಹಗರಿಬೊಮ್ಮನಹಳ್ಳಿಯನ್ನು ಬರಗಾಲ ಪೀಡಿತ ತಾಲೂಕೆಂದು ಘೋಷಿಸಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ ತಲಾ 50 ಮಾನವ ದಿನಗಳನ್ನು ಜಾರಿಗೊಳಿಸಲು ಹಾಗೂ ರಾಜ್ಯ ಸರ್ಕಾರ 50 ಮಾನವ ದಿನಗಳನ್ನು ಪ್ರತಿ ವರ್ಷ ಕಡ್ಡಾಯವಾಗಿ ಕಾನೂನು ಆದೇಶ ಮಾಡಬೇಕು.

    ಈಗಾಗಲೇ ಬಾಕಿಯಿರುವ 2 ತಿಂಗಳಿನಿಂದ ದುಡಿದ ಕೂಲಿ ಹಣವನ್ನು ಪಾವತಿಸಬೇಕು. ಈ ವರ್ಷ ಮಳೆಯಿಲ್ಲದೇ ತಾಲೂಕಿನಲ್ಲಿ 41676 ಹೆಕ್ಟೇರ್‌ನಷ್ಟು ರೈತರ ಬೆಳೆಗಳು ಸಂಪೂರ್ಣ ಹಾನಿಯಾಗಿವೆ. ಕೆಲಸವಿಲ್ಲದೇ ಗುಳೆಹೋಗುವ ಸ್ಥಿತಿ ಬಂದಿದೆ.

    ಬಹುತೇಕರು ಈಗಾಗಲೇ 100 ದಿನಗಳ ಕೆಲಸಗಳನ್ನು ಮುಗಿಸಿದ್ದಾರೆ. ಕೂಲಿಕಾರರಿಗೆ ಹೆಚ್ಚುವರಿಯಾಗಿ ಶೀಘ್ರವೇ ಮಾನವದಿನಗಳನ್ನು ಹೆಚ್ಚಿಸಿದರೇ ಅನುಕೂಲವಾಗಲಿದೆ. ಅಧಿವೇಶನದಲ್ಲಿ ಕೂಲಿ ಕಾರ್ಮಿಕರ ಪರವಾಗಿ ಚರ್ಚಿಸಿ ಸಮಸ್ಯೆಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಲಾಗಿದೆ ಎಂದರು.

    ಶಾಸಕ ಕೆ.ನೇಮಿರಾಜ ನಾಯ್ಕ ಮನವಿ ಸ್ವೀಕರಿಸಿ ಮಾತನಾಡಿ, ತಾಲೂಕಿನಲ್ಲಿ ಬರದ ತೀವ್ರತೆ ಹೆಚ್ಚಿದೆ. ಗ್ರಾಮೀಣ ಕೃಷಿ ಕೂಲಿ ಕಾರ್ಮಿಕರಿಗೆ ನರೇಗಾ ಯೋಜನೆಯಿಂದ ಸಹಕಾರವಾಗಿದೆ. ಮುಂಬರುವ ಅಧಿವೇಶನದಲ್ಲಿ ಕಾರ್ಮಿಕರ ಪರವಾಗಿ ಚರ್ಚಿಸಿ ರಾಜ್ಯ ಸರ್ಕಾರ ಗಮನ ಸೆಳೆಯಲಾಗುವುದು ಎಂದರು.
    ಸಂಘಟನೆಯ ಎಂ.ಲಲಿತ, ದ್ರಾಕ್ಷಯಣಮ್ಮ, ಆರ್.ವಿ.ವಸಂತ, ಎಚ್.ವನಜಾಕ್ಷಿ, ಎನ್.ಯಶೋಧ, ಎಚ್.ಶಿವಕುಮಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts