More

    ಕರೊನಾ ಹಾವಳಿಯಿಂದಾಗಿ ಎರಡು ರಾಷ್ಟ್ರೀಕೃತ ಬ್ಯಾಂಕ್​ಗಳೇ ಬಂದ್!

    ಕಲಬುರಗಿ: ಜಿಲ್ಲೆಯಲ್ಲಿ ಕರೊನಾ ಪ್ರಕರಣಗಳು ವ್ಯಾಪಕವಾಗಿ ಹಬ್ಬುತ್ತಿದ್ದು, ಕೋವಿಡ್​-19 ಸೋಂಕಿನ ಹಾವಳಿಗೆ ಎರಡು ರಾಷ್ಟ್ರೀಕೃತ ಬ್ಯಾಂಕ್​ಗಳನ್ನೇ ಬಂದ್​ ಮಾಡಲಾಗಿದೆ.

    ಕಲಬುರಗಿಯ ಶಹಬಾದ್ ಪಟ್ಟಣದ ಎರಡು ಬ್ಯಾಂಕ್‌ ಸಿಬ್ಬಂದಿಯಲ್ಲಿ ಕೋವಿಡ್​-19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ. ಇಲ್ಲಿನ ಭಾರತೀಯ ಸ್ಟೇಟ್ ಬ್ಯಾಂಕ್​ (ಎಸ್​ಬಿಐ) ಮತ್ತು ಕೆನರಾ ಬ್ಯಾಂಕ್ (ಹಳೆಯ ಸಿಂಡಿಕೇಟ್​) ಶಾಖೆಗಳನ್ನು ಮುಚ್ಚಲಾಗಿದೆ.

    ಕರೊನಾ ಹಾವಳಿಯಿಂದಾಗಿ ಎರಡು ರಾಷ್ಟ್ರೀಕೃತ ಬ್ಯಾಂಕ್​ಗಳೇ ಬಂದ್!

    ಬ್ಯಾಂಕ್​ ಸಿಬ್ಬಂದಿಗೆ ಕರೊನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಮುಚ್ಚಲಾಗಿದ್ದು, ಗ್ರಾಹಕರು ಸಹಕರಿಸಬೇಕು ಎಂದು ಬ್ಯಾಂಕ್​ನಲ್ಲಿ ಪೋಸ್ಟರ್ ಹಾಕಲಾಗಿದೆ. ಇನ್ನು ಕಳೆದ ಕೆಲ ದಿನಗಳಲ್ಲಿ ಈ ಶಾಖೆಗಳಿಗೆ ಬಂದುಹೋಗಿರುವ ಖಾತೆದಾರರು ಚಿಂತೆಗೀಡಾಗುವಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts