More

    ಕನ್ನಡ ಚಿತ್ರಗಳಿಗೆ ಡಬ್ಬಿಂಗ್ ಚಿತ್ರಗಳು ಅಪಾಯಕಾರಿ: ರೋರಿಂಗ್ ಸ್ಟಾರ್ ಶ್ರೀ ಮುರಳಿ

    ಬೆಂಗಳೂರು: ಡಬ್ಬಿಂಗ್ ಚಿತ್ರಗಳು ಎಂದ ತಕ್ಷಣ ಕನ್ನಡ ಚಿತ್ರರಂಗಕ್ಕೆ ಹೆದರಿಕೆ ಆರಂಭವಾಗುತ್ತದೆ. ಬಹಳಷ್ಟು ವರ್ಷಗಳಿಂದ ಕನ್ನಡ ಚಿತ್ರರಂಗ ಇದನ್ನು ವಿರೋಧಿಸುತ್ತಲೆ ಬಂದಿದೆ. ಪರಭಾಷೆ ಚಿತ್ರಗಳು ನಮ್ಮ ರಾಜ್ಯದಲ್ಲಿ ಬಿಡುಗಡೆಯಾಗಲು ಆರಂಭವಾದಾಗಿನಿಂದ ಕನ್ನಡ ಚಿತ್ರಗಳನ್ನು ನೋಡುವವರ ಸಂಖ್ಯೆ ಕಡಿಮೆಯಾಗಿದ್ದು, ನಮ್ಮ ನೆಲದಲ್ಲಿ ಪರಭಾಷೆ ಸಿನಿಮಾಗಳ ಹಾವಳಿಯೆ ಹೆಚ್ಚಾಗಿದೆ. ಇದೀಗ ಮತ್ತೆ ಕನ್ನಡ ಚಿತ್ರಗಳಿಗೆ ಹೊಸ ಆತಂಕ ಶುರುವಾಗಿದೆ. ಅದುವೆ, ಪ್ಯಾನ್ ಇಂಡಿಯಾ ಸಿನಿಮಾ. ಈ ಕಾನ್​ಸ್ಪೆಟ್ ಮೂಲಕ ಒಂದೇ ಭಾಷೆಯಲ್ಲಿ ಸಿನಿಮಾದ ಚಿತ್ರೀಕರಣ ಮಾಡಿ ನಂತರ ಹಲವು ಭಾಷಗಳಿಗೆ ಅದೇ ಚಿತ್ರವನ್ನು ಡಬ್ ಮಾಡಿ ರಿಲೀಸ್ ಮಾಡಲಾಗುತ್ತದೆ. ಸದ್ಯ, ಇದರ ಬಗ್ಗೆಯೇ ಚಂದನವನದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ಹಲವು ಬಾರಿ ಹಲವು ದೊಡ್ಡ ಸ್ಟಾರ್ ನಟರೆ ಈ ಡಬ್ಬಿಂಗ್ ​​ಅನ್ನು ವಿರೋಧಿಸಿ ಮಾತನಾಡಿದ್ದಾರೆ. ಇತ್ತೀಚೆಗೆ, ರೋರಿಂಗ್ ಸ್ಟಾರ್ ಶ್ರೀ ಮುರಳಿ ಸಹ ಇದಕ್ಕೆ ವಿರೋಧ ವ್ಯಕ್ತ ಪಡಿಸಿದ್ದಾರೆ.
    ಡಬ್ಬಿಂಗ್ ಚಿತ್ರಗಳ ಬಗ್ಗೆ ಮಾತಾಡಿದ ನಟ ಶ್ರೀ ಮುರಳಿ, ”ಡಬ್ಬಿಂಗ್ ಚಿತ್ರಗಳು ಯಾವತ್ತಿದ್ದರೂ ಅಪಾಯಕಾರಿಯೇ. ನಮ್ಮ ಸಿನಿಮಾಗಳು ಚೆನ್ನಾಗಿರಬೇಕು”, ಎಂದು ತಿಳಿಸಿದ್ದಾರೆ. ಇನ್ನು, ಈಗಾಗಲೇ ತೆಲುಗು, ಹಿಂದಿ, ತಮಿಳು, ಮಲಯಾಳಂ ನಂತಹ ಸಿನಿಮಾಗಳಿಗೆ ಬೇರೆ ಪ್ರದೇಶಗಳಲ್ಲಿ ಮಾರ್ಕೆಟ್ ಸಹ ಇದೆ. ಈ ಬೇರೆ ಭಾಷೆಗಳ ಚಿತ್ರಗಳು ದೊಡ್ಡ ಬಜೆಟ್ ಸಿನಿಮಾಗಳಾಗಿದ್ದು ಡಿಮ್ಯಾಂಡ್ ಸಿಕ್ಕಾಪಟ್ಟೆ ಇದೆ. ಹೀಗಿರುವಾಗ, ಪರಭಾಷೆ ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿ ಬಿಡುಗಡೆಯಾದರೆ, ನಮ್ಮ ಚಿತ್ರಗಳಿಗೆ ಹೊಡೆತ ಬಿಳುವುದು ಪಕ್ಕಾ. ತೆಲುಗಿನ ‘RRR’, ‘ಪುಷ್ಪ‘, ಹಿಂದಿಯ ’83’ ಮತ್ತು ಹತ್ತು ಹಲವಾರು ಪರಭಾಷೆ ಚಿತ್ರಗಳ ಕನ್ನಡ ಅವತರಣೆಕೆಗಳು ಥಿಯೇಟರ್​ಗಳಲ್ಲಿ ತೆರೆಕಾಣಲು ರೆಡಿಯಾಗಿವೆ.

    ಕನ್ನಡ ಚಿತ್ರಗಳಿಗೆ ಡಬ್ಬಿಂಗ್ ಚಿತ್ರಗಳು ಅಪಾಯಕಾರಿ: ರೋರಿಂಗ್ ಸ್ಟಾರ್ ಶ್ರೀ ಮುರಳಿ

    ಕರೊನಾದಿಂದ ಈಗಾಗಲೇ ಚಿತ್ರರಂಗ ಸಂಕಷ್ಟದಲ್ಲಿ ಸಿಲುಕಿತ್ತು. ಅದರಿಂದ ಹೊರಬಂದು ಮತ್ತೆ ಪೂರ್ವ ವೈಭವಕ್ಕೆ ಮರಳಲು ಯತ್ನಿಸುತ್ತಿದೆ. ಇಂತಹ ಸಮಯದಲ್ಲಿ ಈ ಪ್ಯಾನ್ ಇಂಡಿಯಾ ಸಿನಿಮಾಗಳಿಂದ ಕನ್ನಡ ಚಿತ್ರ ನೋಡುವವರ ಸಂಖ್ಯೆ ಕಡಿಮೆಯಾಗುತ್ತೆ ಎಂಬ ಆತಂಕ ಚಂದನವನದಲ್ಲಿ ಹೆಚ್ಚಾಗಿದೆ. ಮತ್ತೊಂದೆಡೆ, ಕನ್ನಡ ಸಿನಿಮಾಗಳು ಸಹ ಬೇರೆ ಭಾಷೆಯಲ್ಲಿ ಡಬ್ ಅಗಿ ಬಿಡುಗಡೆಯಾದರೂ, ಅವುಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿಲ್ಲ. ಬದಲಿಗೆ, ಕನ್ನಡಕ್ಕೆ ಡಬ್ ಆಗುತ್ತಿರುವ ಬೇರೆ ಭಾಷೆಗಳ ಚಿತ್ರಗಳಿಂದ ನೆಟ್ಟಗೆ ನಮ್ಮ ಸಿನಿಮಗಳ ನಿರ್ಮಾಪಕರು ಬಿಡುಗಡೆ ದಿನಾಂಕವನ್ನು ಹೆದರುತ್ತಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ, ಕನ್ನಡದ ಸ್ಟಾರ್ ನಟರ ಚಿತ್ರಗಳು ಆದರೂ ಒಳ್ಳೆಯ ಪ್ರತಿಕ್ರಿಯೆ ಗಿಟ್ಟಿಸಿಕೊಳ್ಳಬಹುದು. ಆದರೆ, ಒಂದಿಷ್ಟು ವಿಚಾರಗಳನ್ನು ಸಮಾಜಕ್ಕೆ ಸಾರಲು ಮಾಡುವಂತಹ ಸದಭಿರುಚಿ ಮತ್ತು ಕಡಿಮೆ ಬಜೆಟ್​ನ ಸಿನಿಮಾಗಳ ಪರಿಸ್ಥಿತಿಯಂತೂ ಅದೋಗತಿ ಯಾಗಿದೆ.

    ನನ್ನ ಕುಟುಂಬಕ್ಕೆ ತೊಂದ್ರೆಯಾಗೋ ಕೆಲ್ಸನಾ ನಾನ್ಯಾವತ್ತೂ ಮಾಡಲ್ಲ: ಮಾಜಿ ಪತ್ನಿಗೆ ನಾಗಚೈತನ್ಯ ತಿರುಗೇಟು!

    ಡಾರ್ಲಿಂಗ್ ಪ್ರಭಾಸ್​ರ 320 ಕೋಟಿ ಮೌಲ್ಯದ ಬಂಗಲೆ ಎಲ್ಲಿ ನಿರ್ಮಾಣವಾಗುತ್ತಿದೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts