More

    ಕಣ್ಣಿನ ಕಾಯಿಲೆ ಪತ್ತೆ ಹಚ್ಚಲು ಆ್ಯಪ್ ಅಭಿವೃದ್ಧಿ ಪಡಿಸಿದ 10 ವರ್ಷದ ಬಾಲಕಿ

    ನವದೆಹಲಿ: ಇತ್ತೀಚಿನ ಟೆಕ್ನಾಲಜಿ ಹಾಗೂ ವಾಯುಮಾಲಿನ್ಯದಿಂದಾಗಿ ಕಣ್ಣಿಗೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗುತ್ತಿವೆ. ಇದೀಗ ಕಣ್ಣಿನ ಕಾಯಿಲೆ ಪತ್ತೆಹಚ್ಚಲು 10 ವರ್ಷದ ಬಾಲಕಿಯೊಬ್ಬಳು ಆ್ಯಪ್​​ವೊಂದನ್ನು ಅಭಿವೃದ್ಧಿ ಪಡಿಸುವ ಮೂಲಕವಾಗಿ ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ಸುದ್ದಿಯಲ್ಲಿದ್ದಾಳೆ.

    10 ವರ್ಷದ ಲೀನಾ ರಫೀಕ್ ದುಬೈ ಮೂಲದ ನಿವಾಸಿಯಾಗಿದ್ದಾಳೆ. ಈಕೆ ಐಫೋನ್ ಬಳಸಿಕೊಂಡು ವಿಶಿಷ್ಟ ಸ್ಕ್ಯಾನಿಂಗ್ ವಿಧಾನದ ಮೂಲಕ ಕಣ್ಣಿನ ಕಾಯಿಲೆಗಳು ಮತ್ತು ಇತರ ಪರಿಸ್ಥಿತಿಗಳನ್ನು ಪತ್ತೆಹಚ್ಚಲು ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಅಪ್ಲಿಕೇಶನ್ ರಚಿಸಿದ್ದಾಳೆ. ಈ ಅಪ್ಲಿಕೇಶನ್​ಗೆ ‘ಓಗ್ಲರ್ ಐಸ್ಕಾನ್’ ಎಂದು ಹೆಸರಿಸರೊಟ್ಟಿದ್ದಾಳೆ. ತನ್ನ ಅಪ್ಲಿಕೇಶನ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಲೀನಾ ವಿವರಿಸಿದ್ದಾರೆ.

    ಇದನ್ನೂ ಓದಿ: ಬೆಂಕಿಯಿಂದ ಪಾರಾಗಲು ಹೋಗಿ 6ನೇ ಮಹಡಿಯಿಂದ ಬಿದ್ದು ಪ್ರಾಣ ಬಿಟ್ಟ ಮಾಡೆಲ್
    ‘ಓಗ್ಲರ್ ಐಸ್ಕಾನ್’ ಹೇಗೆ ಕಾರ್ಯನಿರ್ವಹಿಸುತ್ತದೆ: ಈ ಆ್ಯಪ್​​ನ ಓಪನ್​ ಮಾಡಿ ಸ್ಕ್ಯಾನರ್ ಫ್ರೇಮ್ ಒಳಗೆ ಕಣ್ಣುಗಳನ್ನು ನಿಖರವಾಗಿ ಇರಿಸಿದಾಗ ಯಾವುದೇ ಬೆಳಕಿನ ಸ್ಫೋಟದ ಸಮಸ್ಯೆಗಳನ್ನು ಗುರುತಿಸುತ್ತದೆ. ಸ್ಕ್ಯಾನ್ ಅನ್ನು ಸೂಕ್ತವಾಗಿ ತೆಗೆದುಕೊಂಡ ನಂತರ, ಸಂಭಾವ್ಯ ಕಣ್ಣಿನ ಕಾಯಿಲೆಗಳು ಅಥವಾ ಆರ್ಕಸ್, ಮೆಲನೋಮಾ, ಟೆರಿಜಿಯಮ್ ಮತ್ತು ಕಣ್ಣಿನ ಪೊರೆಯಂತಹ ಸಮಸ್ಯೆ ಪತ್ತೆ ಹಚ್ಚುತ್ತದೆ. ನಂತರ ನಾವು ಸೂಕ್ತವಾದ ಚಿಕಿತ್ಸೆ ಪಡೆದುಕೊಳ್ಳಲು ಸಹಾಯವಾಗಲಿದೆ.

    ಇದನ್ನೂ ಓದಿ: “ಜೈ ಶ್ರೀ ರಾಮ್” ಕೂಗಲು ನಿರಾಕರಿಸಿದ ಅನ್ಯಧರ್ಮದವನ ಗಡ್ಡ ಕತ್ತರಿಸಿ ಪರಾರಿಯಾದ ಮುಸುಕುಧಾರಿಗಳು
    ‘ಈ ಅಪ್ಲಿಕೇಶನ್ ಅನ್ನು ಯಾವುದೇ ಥರ್ಡ್-ಪಾರ್ಟಿ ಲೈಬ್ರರಿಗಳು ಅಥವಾ ಪ್ಯಾಕೇಜ್ಗಳಿಲ್ಲದೆ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದೆ. ಈ ಅಪ್ಲಿಕೇಶನ್​ ಅಭಿವೃದ್ಧಿ ಪಡಿಸಲು ಆರು ತಿಂಗಳ ಸಂಶೋಧನೆ ಮಾಡಲಾಯಿತ್ತು ಎಂದು ಬಾಲಕಿ ಹೇಳಿಕೊಂಡಿದ್ದಾಳೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts