More

    ತಮ್ಮ ಜೀವನದ ಪ್ರಮುಖ ಘಟ್ಟಗಳನ್ನು ಮೆಲುಕು ಹಾಕಿದ ಡಾ. ವಿಜಯ ಸಂಕೇಶ್ವರ…

    ಬೆಂಗಳೂರು: ಬಹುನಿರೀಕ್ಷಿತ ‘ವಿಜಯಾನಂದ’ ಸಿನಿಮಾದ ಟ್ರೈಲರ್ ಅನ್ನು ಇಂದು ಬಿಡುಗಡೆ ಮಾಡಲಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಐದು ಭಾಷೆಗಳಲ್ಲಿ ಟ್ರೈಲರ್ ಬಿಡುಗಡೆ ಮಾಡಿದರು. ಈ ಸಮಾರಂಭದಲ್ಲಿ ಭಾಗವಹಿಸಿದ್ದ ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು ತಮ್ಮ ಬದುಕಿನ ಹಲವು ಸಂಗತಿಗಳನ್ನು ಮೆಲುಕು ಹಾಕಿದರು.

    ‘‘ನಮ್ಮ ತಂದೆ ಪುಸ್ತಕ ಮುದ್ರಣ ಸಂಸ್ಥೆ ಆರಂಭಿಸಿದ್ದರು. ನಾನು ಆರನೇ ಮತ್ತು ಏಳನೇ ಕ್ಲಾಸ್‌ನಲ್ಲಿ ಇದ್ದಾಗಲೇ ಬ್ಯುಸಿನೆಸ್‌ನಲ್ಲಿ ಇದ್ದೆ. ನಾನು 17ನೇ ವಯಸ್ಸಿಗೆ ಬಂದಾಗ, ಪುಸ್ತಕ ಮುದ್ರಣಕ್ಕೆ ಹೆಚ್ಚು ಕಾಲ ಸ್ಕೋಪ್ ಇರುವುದಿಲ್ಲ ಅನಿಸಿತು. ಕೊನೆಗೆ ಲಾಜಿಸ್ಟಿಕ್ ಇಂಡಸ್ಟ್ರಿ ಶುರು ಮಾಡಬೇಕು ಎಂಬ ಕಠಿಣ ನಿರ್ಧಾರ ತೆಗೆದುಕೊಂಡೆ…’’ ಎಂದು ವಿವರಿಸಿದರು.

    ‘‘ನಾನು ಕಂಪನಿ ಶುರು ಮಾಡಿದಾಗ, 500 ರೂಪಾಯಿ ಫೋನ್ ಬಿಲ್ ಕಟ್ಟಬೇಕಿತ್ತು. ಆದರೆ ಆಗ ನನ್ನ ಬಳಿ ಮುನ್ನೂರು ರೂಪಾಯಿ ಮಾತ್ರ ಇತ್ತು. ಈ ತರಹದ ಕಷ್ಟದ ದಿನಗಳನ್ನು ಎದುರಿಸಿ ಕಂಪನಿಯನ್ನು ಕಟ್ಟಿದ್ದೇನೆ. ನನಗೆ ಆ ಸಮಯದಲ್ಲಿ ನೂರು, ಇನ್ನೂರು ರೂಪಾಯಿ ಕೊಟ್ಟವರನ್ನು ನಾನು ಇಂದಿಗೂ ಮರೆತಿಲ್ಲ. ಯಾವಾಗಲೂ ನಾನು ನಾಳೆಯ ಬಗ್ಗೆ ಯೋಚನೆ ಮಾಡುತ್ತಿದ್ದರೂ ನಿನ್ನೆಯ ದಿನಗಳನ್ನು ಮರೆತಿಲ್ಲ’’ ಎಂದು ಹೇಳಿದರು.

    ‘‘ಕನ್ನಡದ ಮೊದಲ ಬಯೋಪಿಕ್ ಸಿನಿಮಾ ವಿಜಯಾನಂದ. ನನ್ನ ಬಯೋಪಿಕ್ ಮೂಲಕವೇ ಕನ್ನಡ ಚಿತ್ರರಂಗಕ್ಕೆ ಬಯೋಪಿಕ್ ಎಂಟ್ರಿ ಕೊಡುತ್ತಿರುವುದು ಹೆಮ್ಮೆಯ ವಿಷಯ. ನನ್ನ ಮಗ ದೊಡ್ಡ ವಿಷನ್ ಇರುವಂತಹ ವ್ಯಕ್ತಿ. ನನ್ನ ಮೊಮ್ಮಗ ಶಿವ ಸಂಕೇಶ್ವರ ಕೂಡ ನಮ್ಮ ತರಹ ಇದ್ದಾನೆ. ನನ್ನ ಮಗನಿಗೆ ನಾಲ್ಕು ವರ್ಷ ಇದ್ದಾಗಲೇ ನಾನು ಟ್ರೈನಿಂಗ್ ಕೊಡೋಕೆ ಆರಂಭ ಮಾಡಿದ್ದೆ. ಈಗಿನ ಪೋಷಕರು ಕೇವಲ ಶಾಲೆಯ ಶಿಕ್ಷಣ ಕೊಡಿಸುವುದು ಮಾತ್ರವಲ್ಲ, ಹೊರಗಿನ ಜೀವನದ ಶಿಕ್ಷಣವನ್ನು ಕೂಡ ಮಕ್ಕಳಿಗೆ ಕೊಡಬೇಕು. ನಿಮ್ಮ ಮಕ್ಕಳನ್ನ ಎಲ್ಲಾ ಸಮಯದಲ್ಲೂ ಬ್ಯುಸಿಯಾಗಿಡಿ ಅಂತ ಎಲ್ಲ ಪಾಲಕರಲ್ಲಿ ನಾನು ಮನವಿ ಮಾಡಿಕೊಳ್ಳುತ್ತೇನೆ. ನಾವು ಮಕ್ಕಳಿಗೆ ಎಲ್ಲಾ ಚಾಲೆಂಜ್ ಫೇಸ್ ಮಾಡುವುದನ್ನು ಕಲಿಸಬೇಕು’’ ಎಂದು ಹೇಳಿದರು.

    ‘‘ರಿಸ್ಕ್ ತೆಗೆದುಕೊಳ್ಳುವುದನ್ನು ನಾನು ತುಂಬಾ ಎಂಜಾಯ್ ಮಾಡಿದ್ದೇನೆ. ನಾನು ಈ ಬ್ಯುಸಿನೆಸ್ ಶುರು ಮಾಡಿದಾಗ ಜನ ನನ್ನನ್ನು ಬೇರೆ ತರಹ ನೋಡಿದ್ದರು. ಹತ್ತು ವರ್ಷದಿಂದ ತುಂಬಾ ಜನ ನನ್ನ ಬಯೋಪಿಕ್ ಮಾಡುವುದಾಗಿ ಹೇಳುತ್ತಿದ್ದರು. ನಾನು ಆಗ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಕೆಲ ನಿರ್ದೇಶಕ ಮತ್ತು ನಿರ್ಮಾಪಕರು ಬಂದು ಕೇಳಿದಾಗ ಬೇಡ ಅಂದಿದ್ದೆ. ನಿರ್ದೇಶಕಿ ರಿಷಿಕಾ ಅವರು ಬಂದು ಕೇಳಿದಾಗಲೂ ‘ಈ ತರಹದ ಸ್ಟುಪಿಡಿಟಿ ಬೇಡ’ ಅಂದಿದ್ದೆ. ಆದರೆ ಆಕೆಯ ಹಾರ್ಡ್ ವರ್ಕ್ ನೋಡಿ ಒಂದು ಚಾನ್ಸ್ ಕೊಡೋಣ ಅಂತ ಅನ್ನಿಸಿತು. ಯುವ ಜನತೆಗೆ ನಾವು ಪ್ರೋತ್ಸಾಹಿಸಬೇಕು ಅಂತ ಅನ್ನಿಸಿತು. ಮೂರು ದಿನ ಆದ ಮೇಲೆ ಒಪ್ಪಿಗೆ ಸೂಚಿಸಿದೆ’’ ಎಂದು ವಿವರಿಸಿದರು.

    ‘‘ನಾನು ಈಗಿನ ಹೊಸ ಹುಡುಗರನ್ನು ರಿಸ್ಕ್‌ನಲ್ಲಿ ಇರಿಸಲು ಇಷ್ಟಪಡಲಿಲ್ಲ. ಹಾಗಾಗಿ ನನ್ನ ಮಗನನ್ನು ಕರೆದು ಈ ಸಿನಿಮಾ ನಿರ್ಮಾಣ ಮಾಡಲು ಹೇಳಿದೆ. ಇದೊಂದೇ ಸಿನಿಮಾ ಮಾಡಿ ಪ್ರೊಡಕ್ಷನ್ ಸಂಸ್ಥೆ ನಿಲ್ಲಿಸಬೇಡ. ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವ ಸಿನಿಮಾಗಳನ್ನು ಮುಂದೆಯೂ ಮಾಡಬೇಕು ಅಂತ ಹೇಳಿದೆ’’ ಎಂದು ಡಾ. ವಿಜಯ ಸಂಕೇಶ್ವರ ಹೇಳಿದರು.

    ‘ಆರ್​.ಆರ್​.ಆರ್​’ ತರಹ ‘ವಿಜಯಾನಂದ’ ಸಹ ಬಿಗ್​ ಹಿಟ್​ ಆಗಲಿ: ಆರೋಗ್ಯ ಸಚಿವ ಸುಧಾಕರ್ ಹಾರೈಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts