ಬರೇಲಿ: ವ್ಯಕ್ತಿಯೊಬ್ಬ ಪಾನಮತ್ತನಾಗಿ ಸಹೋದರಿ ಮನೆಗೇ ತೆರಳಿ, ವಿವಾಹಿತ ಸೋದರಿ ಮೇಲೆಯೇ ಅತ್ಯಾಚಾರ ಎಸಗಿದ್ದಾನೆ. ಮಾತ್ರವಲ್ಲ, ಇದನ್ನು ಆತನ ಗೆಳೆಯ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾನೆ. ಇಂಥದ್ದೊಂದು ಪ್ರಕರಣ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಈ ಪ್ರಕರಣ ಕಳೆದ ತಿಂಗಳಲ್ಲಿ ನಡೆದಿದ್ದು, ಮರ್ಯಾದೆ ಪ್ರಶ್ನೆ ಎಂದು ಸಹೋದರಿ ಪೊಲೀಸರಿಗೆ ದೂರು ನೀಡದೆ ಸುಮ್ಮನಿದ್ದಳು. ಆದರೆ ಈ ಘಟನೆ ಬಳಿಕವೂ ಆರೋಪಿ ಆಕೆಯ ಮನೆಯ ಹತ್ತಿರ ಸುಳಿದಾಡುವುದು, ಕಿರುಕುಳ ನೀಡುವುದು ಮುಂದುವರಿದಿದ್ದರಿಂದ ಆಕೆ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣ ಬಳಿಕ ಆರೋಪಿಗಳಿಬ್ಬರೂ ತಲೆಮರೆಸಿಕೊಂಡಿದ್ದು, ಪೊಲೀಸರು ಅವರ ಪತ್ತೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ: ಮಧ್ಯರಾತ್ರಿಯಲ್ಲಿ ನೀರು ಕುಡಿಯಲೆದ್ದಿದ್ದ ಅಮ್ಮನಿಗಾಯ್ತು ದಿಗಿಲು; ರಾತ್ರಿ ಮಲಗಿದ್ದ ಮಗ-ಸೊಸೆ ಅಲ್ಲಿರಲಿಲ್ಲ..!
ಉತ್ತರಪ್ರದೇಶದ ಮೊರಾದಾಬಾದ್ನಲ್ಲಿ ಡಿ. 23ರಂದು ಈ ಘಟನೆ ನಡೆದಿದೆ. ಪಾನಮತ್ತನಾದ ಬಳಿಕ ಯಾವುದೋ ಪ್ರಮುಖ ಕೆಲಸ ಇದೆ ಎಂಬ ನೆಪದಲ್ಲಿ ಸ್ನೇಹಿತನ ಜತೆ ತೆರಳಿದ್ದ ಆರೋಪಿ, ಬಳಿಕ ಒಳಗಿನಿಂದ ಚಿಲಕ ಹಾಕಿಕೊಂಡು ಅತ್ಯಾಚಾರ ಎಸಗಿದ್ದಾನೆ. ಇದನ್ನು ಗೆಳೆಯ ವಿಡಿಯೋ ಮಾಡಿಕೊಂಡಿದ್ದಾನೆ. ಮಾತ್ರವಲ್ಲ ವಿಷಯ ಯಾರ ಬಳಿಯಾದರೂ ಬಾಯಿಬಿಟ್ಟರೆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಮನೆಯವರ ಒತ್ತಾಯದ ಮೇರೆಗೆ ಹಾಗೂ ಮನೆಯ ಮರ್ಯಾದೆಗಂಜಿ ಘಟನೆ ನಡೆದ ಕೆಲದಿನಗಳಲ್ಲೇ ದೂರು ನೀಡಲು ಆಕೆ ಹಿಂಜರಿದಿದ್ದಳು. (ಏಜೆನ್ಸೀಸ್)
ಈ ಮನುಷ್ಯ ಕುಡಿಯದೇ ಟೈಟ್ ಆಗುತ್ತಾನೆ!; ಒಂಚೂರೂ ಮದ್ಯಪಾನ ಮಾಡದಿದ್ದರೂ ಇದ್ದಕ್ಕಿದ್ದಂತೆ ಕಿಕ್ಕೇರುತ್ತದೆ!
ಎಫ್ಐಆರ್ ದಾಖಲಿಸಲು ಒಂದು ಲಕ್ಷ ರೂ. ಲಂಚ: ಲೇಡಿ ಸಬ್ ಇನ್ಸ್ಪೆಕ್ಟರ್, ಪೇದೆ ಅರೆಸ್ಟ್
ಬೈಕ್ನಲ್ಲಿ ಹೋಗುವಾಗ ಪ್ರಿಯಕರನ ಬೆನ್ನಿಗೆ ಇರಿದ ಪ್ರೇಯಸಿ; ಬಿದ್ದರೂ ಬಿಡದೆ ಮತ್ತೆ ಮತ್ತೆ ಇರಿದು ಸಾಯಿಸಿದಳು!