More

  VIDEO: ಕಂಠಪೂರ್ತಿ ಕುಡಿದು ಮಹಿಳೆಗೆ ಕಾರು ಗುದ್ದಿ ಎಸ್ಕೇಪ್​ ಆಗಲು ಪ್ರಯತ್ನಿಸಿದ ಪೊಲೀಸ್​ ಸಬ್​ಇನ್ಸ್​ಪೆಕ್ಟರ್​…

  ನವದೆಹಲಿ: ಕಂಠಪೂರ್ತಿ ಕುಡಿದ ಪೊಲೀಸ್​ ಸಿಬ್ಬಂದಿಯೋರ್ವ ವಯಸ್ಸಾದ ಮಹಿಳೆಗೆ ಕಾರನ್ನು ಗುದ್ದಿ ಅವಾಂತರ ಸೃಷ್ಟಿಸಿದ್ದಾರೆ.
  ಪೂರ್ವ ದೆಹಲಿಯ ಚಿಲ್ಲಾ ಗ್ರಾಮದಲ್ಲಿ ನಡೆದ ಈ ಘಟನೆಯ ವಿಡಿಯೋ ಸಿಕ್ಕಾಪಟೆ ವೈರಲ್​ ಆಗುತ್ತಿದೆ. ಕಾರನ್ನು ಅಡ್ಡಾದಿಡ್ಡಿ ಚಲಾಯಿಸಿ ಹಿರಿಯ ಮಹಿಳೆಗೆ ಬಲವಾಗಿ ಆ್ಯಕ್ಸಿಡೆಂಟ್​ ಮಾಡಿದ ಪೊಲೀಸ್​ ವಿರುದ್ಧ ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಆ ಮಹಿಳೆ ಅದರ ಬ್ಯಾನೆಟ್​ ಮೇಲೆ ಬಿದ್ದು ಸ್ವಲ್ಪ ದೂರ ಬಂದು, ರಸ್ತೆಯ ಮೇಲೆ ಉರುಳಿ ಬಿದ್ದಿದ್ದಾರೆ.

  ಈ ಪೊಲೀಸ್​ ಕಾರು ಡಿಕ್ಕಿ ಹೊಡೆದು ಮಹಿಳೆ ಬಿದ್ದು ಒದ್ದಾಡುತ್ತಿದ್ದಂತೆ ಅಲ್ಲಿ ಜನರು ಸೇರಿದ್ದಾರೆ. ಆದರೆ ಜನರ ಮಧ್ಯೆಯೇ ಕಾರನ್ನು ಮುಂದಕ್ಕೆ ಓಡಿಸಿದ್ದಾರೆ. ಸಿಟ್ಟಿಗೆದ್ದ ಜನರು ಕಾರಿನ ಹಿಂದೆಯೇ ಓಡಿಹೋಗಿ ಅವರನ್ನು ತಡೆದಿದ್ದಾರೆ. ಮತ್ತೊಂದಷ್ಟು ಜನ ಮಹಿಳೆಯನ್ನು ಎತ್ತಿ, ರಕ್ಷಿಸಿದ್ದಾರೆ. ಇದೆಲ್ಲ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ‘ಇ.ಡಿ.ಯ 128 ಪ್ರಶ್ನೆಗಳಿಗೆ ನಾನು ಉತ್ತರಿಸಿದೆ..ಆದರೆ ನನ್ನ ಒಂದು ಪ್ರಶ್ನೆಗೆ ಉತ್ತರಿಸಲು ಅವರಿಗೆ ಸಾಧ್ಯವಾಗಲಿಲ್ಲ…’

  ಮಹಿಳೆಗೆ ತೀವ್ರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳೆಗೆ ಕಾರನ್ನು ಗುದ್ದಿ, ನಂತರ ಅಲ್ಲಿಂದ ಪರಾರಿಯಾಗಲು ಪ್ರಯತ್ನಿಸಿದವರು ದೆಹಲಿಯ ಓರ್ವ ಸಬ್​ ಇನ್ಸ್​ಪೆಕ್ಟರ್​ ಎಂದು ಗೊತ್ತಾಗಿದೆ. ಅವರನ್ನು ಸದ್ಯ ಬಂಧಿಸಲಾಗಿದೆ. ಆ ಸಮಯದಲ್ಲಿ ಕುಡಿದಿದ್ದರು ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts