More

    ಪಾರ್ಟಿಗೆ ಕರೆದು ಸ್ನೇಹಿತೆಯ ಪತಿಗೆ ಚಾಕು ಇರಿದಿದ್ದ ಮಹಿಳೆಗೆ ಕೋರ್ಟ್​ ಕೊಟ್ಟ ಶಾಕ್​ ಎಂಥದ್ದು?

    ಲಂಡನ್​: ಸ್ನೇಹಿತೆಯ ಕುಟುಂಬವನ್ನು ಪಾರ್ಟಿಗೆ ಆಹ್ವಾನಿಸಿ ಆಕೆಯ ಪತಿಗೆ ಚಾಕುವಿನಿಂದ ಇರಿದಿದ್ದ ಘಟನೆಗೆ ಸಂಬಂಧಿಸಿದಂತೆ ಆರೋಪಿಗೆ ನ್ಯಾಯಾಲಯವು ಶಿಕ್ಷೆಯನ್ನು ವಿಧಿಸಿರುವ ಘಟನೆ ಇಂಗ್ಲೆಂಡ್​ನ ಯಾರ್ಕ್‌ಷೈರ್​ನಲ್ಲಿ ನಡೆದಿದೆ.

    ಜೋನ್ನೆ ಗೋಡೆವ್ (42)​ ಮತ್ತು ಆಕೆಯ ಪತಿ ಕ್ರೇಗ್​ ರಿಚರ್ಡ್​ಸನ್​ ಲಾರಾ ಮತ್ತು ಡೇನಿಯಲ್​ ಗ್ರ್ಯಾಂಟ್​ ಹಾಗೂ ಅವರ ಮಕ್ಕಳನ್ನು ಯಾರ್ಕ್‌ಷೈರ್​ನ ಬರ್ಟ್​ಸ್ವಿಕ್​ನಲ್ಲಿರುವ ನಿವಾಸಕ್ಕೆ ಕಳೆದ ವರ್ಷ ಜೂನ್​ನಲ್ಲಿ ಆಹ್ವಾನಿಸಿದ್ದರು.

    ರಾತ್ರಿಯ ಪಾರ್ಟಿ ವೇಳೆ ತುಂಬಾ ಕುಡಿದಿದ್ದ ಗೋಡೆವ್​ ಗಾರ್ಡನ್​ ಏರಿಯಾದಲ್ಲಿ ಸ್ನೇಹಿತೆಯ ಪತಿ ಗ್ರ್ಯಾಂಟ್​ರೊಂದಿಗೆ ಇದ್ದಕ್ಕಿದ್ದಂತೆ ಜಗಳಕ್ಕಿಳಿದು, ಒಬ್ಬರಿಗೊಬ್ಬರು ಎಳೆದಾಡಿದ್ದರು. ಬಳಿಕ ಮನೆಯೊಳಗೆ ಹೋದ ಗ್ರ್ಯಾಂಟ್​ ಕಿಚನ್​ನಲ್ಲಿದ್ದ ಗೋಡೆವ್ ಪತಿ ರಿಚರ್ಡ್ಸನ್​ ಜತೆ ವಾಗ್ವಾದ ನಡೆಸುವಾಗ ಅಲ್ಲಿಗೂ ಬಂದ ಗೋಡೆವ್​ ಕಿಚನ್​ನಲ್ಲಿದ್ದ ಚಾಕುವನ್ನು ತೆಗೆದುಕೊಂಡು ಗ್ರ್ಯಾಂಟ್​ ಭುಜಕ್ಕೆ ಇರಿದಿದ್ದಳು. ಇದನ್ನೂ ಓದಿ: ಆಲಿಯಾ ಭಟ್​ ವಿರುದ್ಧ ಟ್ವೀಟ್​ ಮೂಲಕ ಭಾರಿ ಕೋಪ ವ್ಯಕ್ತಪಡಿಸಿದ್ದರು ಸುಶಾಂತ್​ ಸಿಂಗ್​

    ಪ್ರಕರಣ ಸಂಬಂಧ ವಿಚಾರಣೆ ನಡೆದಿದ್ದು, ಈ ವೇಳೆ ಗೋಡೆವ್​ 4 ಡಬಲ್​ ಜಿನ್​ ಮತ್ತು ನಿಂಬೆ ಪಾನಕವನ್ನು ಸೇವಿಸಿದ್ದಳು ಎಂದು ತಿಳಿದುಬಂದಿದೆ. ಆದರೆ, ಜಗಳದ ಏಕೆ ಶುರುವಾಯಿತು ಎಂಬುದರ ಬಗ್ಗೆ ಈವರೆಗೂ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ. ಗೋಡೆವ್​ಗೆ ಹಲ್​ ಕ್ರೌನ್​ ನ್ಯಾಯಾಲಯ 12 ತಿಂಗಳ ಕಾರಾಗೃಹ ಶಿಕ್ಷೆಯನ್ನು ವಿಧಿಸಿದೆ. ಪ್ರಾಣಾಪಾಯ ಆಗದಿರುವುದರಿಂದ ಕಠಿಣ ಶಿಕ್ಷೆಯನ್ನು ನೀಡಿಲ್ಲ. ಗೋಡೆವು ದಿನನಿತ್ಯ 15 ಪುನರ್ವಸತಿ ಚಟುವಟಿಕೆಗಳಲ್ಲಿ ಭಾಗವಹಿಸಲು ಕೋರ್ಟ್​ ಹೇಳಿದೆ. (ಏಜೆನ್ಸೀಸ್​)

    ನಿನ್ನ ಮನದಾಳದ ನೋವು ಬಲ್ಲೆ- ಸುಶಾಂತ್​ಗೆ ಅಕ್ಕನಿಂದ ಭಾವುಕ ಪತ್ರ….

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts