More

    ಮಾರ್ಗ ಮಧ್ಯೆ ಕಾರು ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ಪಾನಮತ್ತನಿಗೆ ಡಿಢೀರ್​ ನಶೆ ಇಳಿಸಿದ ಘಟನೆ ಇದು

    ನೊಯ್ಡಾ: ಚಾಲಕನೊಬ್ಬ ರಸ್ತೆ ಪಕ್ಕ ದುಬಾರಿ ಬಿಎಂಡಬ್ಲ್ಯು ಕಾರು ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ವೇಳೆ ಕೆಲ ಅಪರಿಚಿತ ಕಿಡಿಗೇಡಿಗಳು ಕಾರನ್ನೇ ದೋಚಿ ಪರಾರಿಯಾಗಿರುವ ಘಟನೆ ನೊಯ್ಡಾದಲ್ಲಿ ನಡೆದಿದೆ.

    ಪೊಲೀಸ್​ ಅಧಿಕಾರಿಗಳ ಪ್ರಕಾರ ಶನಿವಾರ ರಾತ್ರಿ ನೋಯ್ಡಾದ 2ನೇ ಹಂತದ ಪೊಲೀಸ್​ ಠಾಣಾ ವ್ಯಾಪ್ತಿಯ ಸೆಕ್ಟರ್​ 90ರಲ್ಲಿ ಈ ಘಟನೆ ನಡೆದಿದೆ. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಹಿರಿಯ ಪೊಲೀಸ್​ ಅಧಿಕಾರಿಗಳು ಘಟನಾ ಸ್ಥಳಕ್ಕೆ ಹೋದಾಗ ಕಾರು ಕಳೆದುಕೊಂಡಿದ್ದ ಸ್ಟಾಕ್​ ಬ್ರೋಕರ್​ ರಿಶಭ್​ ಅರೊರಾ ಪೊಲೀಸರ ಮುಂದೆ ಎಲ್ಲವನ್ನು ವಿವರಿಸಿದ್ದಾರೆ.

    ರಾತ್ರಿ ಪಾರ್ಟಿ ಮುಗಿಸಿ ಪಾನಮತ್ತ ಸ್ಥಿತಿಯಲ್ಲಿ ಕಾರಿನಲ್ಲಿ ಬರುತ್ತಿದ್ದೆ, ಮೂತ್ರ ವಿಸರ್ಜನೆಗೆ ಮಾರ್ಗ ಮಧ್ಯೆ ಕಾರು ನಿಲ್ಲಿಸಿದಾಗ, ಕೆಲವು ಅಪರಿಚಿತ ಕಿಡಿಗೇಡಿಗಳು ಬಂದು ಕಾರನ್ನೇ ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಅಂದಹಾಗೆ ಲಕ್ಷುರಿ ಕಾರು ಅರೋರಾ ಭಾವನಿಗೆ ಸೇರಿದ್ದಾಗಿದೆ. ಅಂದಾಜು 40 ಲಕ್ಷ ರೂ. ಮೌಲ್ಯದ ಬಿಎಂಡಬ್ಲ್ಯು ಕಾರು ಅದಾಗಿತ್ತು.

    ಕಾರಿನ ಮಾಲೀಕರ ಬಗ್ಗೆ ಗೊತ್ತಿರುವವರೇ ಕಾರನ್ನು ದೋಚಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಈ ಸಂಬಂಧ ಎಫ್​ಐಆರ್​ ದಾಖಲಿಸಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಎಲ್ಲ ಆಯಾಮಗಳಲ್ಲೂ ತನಿಖೆ ಮಾಡಿ, ಆದಷ್ಟು ಬೇಗ ವಾಹನವನ್ನ ವಶಕ್ಕೆ ಪಡೆಯಲಾಗುವುದು ಎಂದು ಎಂದು ಡಿಸಿಪಿ ಹೇಳಿದ್ದಾರೆ. (ಏಜೆನ್ಸೀಸ್​)

    ಸೇಲಂ ಅಂತರ್ಜಾತಿ ಮದುವೆ ಪ್ರಕರಣ: ಕಿಡ್ನಾಪ್ ಆಗಿದ್ದ ಯುವತಿ ಮಾತು ಕೇಳಿ ಪೊಲೀಸರಿಗೆ ಮಾತ್ರವಲ್ಲ ಪತಿಗೂ ಶಾಕ್​!

    ಡ್ರಾಪ್ ಕೊಡುವ ನೆಪದಲ್ಲಿ ಟೆಕ್ಕಿಯ ದರೋಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts