More

    ಡ್ರಾಪ್ ಕೊಡುವ ನೆಪದಲ್ಲಿ ಟೆಕ್ಕಿಯ ದರೋಡೆ

    ಬೆಂಗಳೂರು: ಪದ್ಮನಾಭನಗರದ ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಡ್ರಾಪ್ ಕೊಡುವ ನೆಪದಲ್ಲಿ ಟೆಕ್ಕಿಯನ್ನು ಟಿಟಿ ವಾಹನದಲ್ಲಿ ಹತ್ತಿಕೊಂದು ಸುಲಿಗೆ ಮಾಡಿದ ಆರೋಪಿಗಳನ್ನು ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರು ಬಂಧಿಸಿದ್ದಾರೆ.

    ಬನಶಂಕರಿಯ ನಿವಾಸಿ ಪ್ರಶಾಂತ್ (21), ದೀಪಕ್(25) ಬಂಧಿತರು. ಪದ್ಮನಾಭನಗರದ ನಿವಾಸಿ ಸತೀಶ್ (37) ಅಪಹರಣಕ್ಕೊಳಗಾದವರು. ವೈಟ್​ಫೀಲ್ಡ್​ನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಸತೀಶ್, ಮಾ.13ರಂದು ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಸ್ಕೂಟರ್ ನಿಲ್ಲಿಸಿ ಕೆಲಸಕ್ಕೆ ಹೋಗಿದ್ದರು. ಸಂಜೆ ಕೆಲಸ ಮುಗಿಸಿದ ಬಳಿಕ ಇಟ್ಟಮಡುವಿ

    ನಲ್ಲಿದ್ದ ಸ್ನೇಹಿತ ಮಹೇಶ್ ಮನೆಗೆ ಹೋಗಿದ್ದರು. ರಾತ್ರಿ ಮಹೇಶ್ ಸಹ ಸತೀಶ್ ಜತೆ ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಬರುವುದಾಗಿ ತಿಳಿಸಿದ್ದರು. ಕತ್ರಿಗುಪ್ಪೆ ಸಿಗ್ನಲ್​ಗೆ ಬಂದು ದೇವೇಗೌಡ ಪೆಟ್ರೋಲ್ ಬಂಕ್ ಕಡೆ ಹೋಗುವ ವಾಹನಕ್ಕಾಗಿ ಕಾಯುತ್ತಿದ್ದಾಗ ಬಂದ ಟಿಟಿ ವಾಹನದಲ್ಲಿ ಬಂದ ಆರೋಪಿಗಳು ಡ್ರಾಪ್ ಕೊಡುವ ನೆಪದಲ್ಲಿ ಇಬ್ಬರನ್ನೂ ವಾಹನಕ್ಕೆ ಹತ್ತಿಸಿಕೊಂಡಿದ್ದರು. ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಟಿಟಿ ನಿಲ್ಲಿಸಿದಾಗ ಅಲ್ಲೇ ಹತ್ತಿರದ ಎಟಿಎಂನಿಂದ ಹಣ ತೆಗೆದುಕೊಂಡು ಬರುವುದಾಗಿ ಹೇಳಿ ಮಹೇಶ್ ಎಟಿಎಂಗೆ ತೆರಳಿದ್ದರು. ಆ ಸಂದರ್ಭದಲ್ಲಿ ಬಲವಂತವಾಗಿ ಸತೀಶ್ ಅವರನ್ನು ವಾಹನದೊಳಕ್ಕೆ ಎಳೆದುಕೊಂಡು ಅಪಹರಿಸಿದ ಆರೋಪಿಗಳು, ಹಣ ಕೊಡುವಂತೆ ಬೆದರಿಸಿದ್ದರು. ನಂತರ ತಲಘಟ್ಟಪುರ ರಸ್ತೆಯ ಬಳಿ ಕರೆದೊಯ್ದು ಹಲ್ಲೆ ನಡೆಸಿದ್ದರು. ಸತೀಶ್ ತನ್ನ ಬಳಿ ಹಣ ಇಲ್ಲ ಎಂದಾಗ ಮೊಬೈಲ್ ಹಾಗೂ ಎಟಿಎಂ ಕಾರ್ಡ್ ಕಸಿದುಕೊಂಡು ಅದರ ಪಾಸ್​ವರ್ಡ್ ಪಡೆದು 4,400 ರೂ. ಡ್ರಾ ಮಾಡಿಸಿಕೊಂಡು, ಮತ್ತೆ ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಬಿಟ್ಟು ಹೋಗಿದ್ದರು.

    ಟಿಟಿ ನೋಂದಣಿ ಸಂಖ್ಯೆಯಿಂದ ಪತ್ತೆ

    ಸತೀಶ್ ನೀಡಿದ ಟಿಟಿ ವಾಹನದ ನೋಂದಣಿ ಸಂಖ್ಯೆ ಹಾಗೂ ಆರೋಪಿಗಳ ಬಳಿಯಿದ್ದ ಸತೀಶ್ ಮೊಬೈಲ್ ಕಾರ್ಯ ನಿರ್ವಹಿಸುತ್ತಿರುವ ಪ್ರದೇಶದ ಬಗ್ಗೆ ಮಾಹಿತಿ ಕಲೆ ಹಾಕಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ದೀಪಕ್ ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದು, ಆರೋಪಿಗಳು ಸಂಚು ರೂಪಿಸಿ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ನಾಲ್ಕು ತಿಂಗಳ ಗರ್ಭಿಣಿ ಮೇಲೆ ಆರು ಜನರಿಂದ ತೀವ್ರ ಹಲ್ಲೆ; ಗರ್ಭಪಾತವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts