More

    ಬೆಂಗಳೂರಿಗೆ ಡ್ರಗ್ಸ್​ ಪೂರೈಕೆ ಮಾಡ್ತಿದ್ದ ಆರೋಪಿ ದೆಹಲಿಯಲ್ಲಿ ಎನ್​ಸಿಬಿ ವಶಕ್ಕೆ

    ಬೆಂಗಳೂರು: ದೇಶದಲ್ಲಿ ಮಾದಕ ಜಾಲ ಹೆಚ್ಚು ಸದ್ದು ಮಾಡುತ್ತಿರುವ ಬೆನ್ನಲ್ಲೇ ಮುಂಬೈ ಹಾಗೂ ದೆಹಲಿಯಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ ಎನ್​ಸಿಬಿ 3.5 ಕೆ.ಜಿ ಗಾಂಜಾ ಮೊಗ್ಗು ಜಪ್ತಿ ಮಾಡಿದ್ದು, ಓರ್ವ ಆರೋಪಿಯನ್ನು ಬಂಧಿಸಲಾಗಿದೆ.

    ಬಂಧಿತನನ್ನು ಅಹ್ಮದ್​ ಎಂದು ಗುರುತಿಸಲಾಗಿದೆ. ಈತನನ್ನು ದೆಹಲಿಯಲ್ಲಿ ವಶಕ್ಕೆ ಪಡೆಯಲಾಗಿದೆ. ಇದೇ ವೇಳೆ ಮುಂಬೈನಲ್ಲಿ ಗಾಂಜಾ ಮೊಗ್ಗಿಗೆ ಅತಿ ಹೆಚ್ಚು ಬೇಡಿಕೆಯಿದೆ ಎಂದು ತಿಳಿದುಬಂದಿದೆ. 1 ಗ್ರಾಂಗೆ ಸುಮಾರು 5 ಸಾವಿರಕ ರೂ.ನಂತೆ ಮಾರಾಟವಾಗ್ತಿದೆ ಎನ್ನಲಾಗಿದೆ. ಡಾರ್ಕ್​ನೆಟ್​ ಮೂಲಕ ಅಮೆರಿಕ ಮತ್ತು ಕೆನಡಾದಿಂದ ಪಾರ್ಸೆಲ್​ನಲ್ಲಿ ಆಮದಾಗಿದ್ದ ಗಾಂಜಾ ಮೊಗ್ಗು, ಮುಂಬೈನ ಫಾರೇನ್ ಪೋಸ್ಟ್ ಆಫೀಸ್​ನಲ್ಲಿ ಜಪ್ತಿಯಾಗಿದೆ.

    ಇದನ್ನೂ ಓದಿ: ಮೊಬೈಲ್ ದೋಚಲು ಯತ್ನ, ಆಯುಧದಿಂದ ಹಲ್ಲೆ ಮಾಡಿದ್ರೂ ಪಟ್ಟು ಬಿಡದ ದಿಟ್ಟ ಹುಡುಗಿ: ವಿಡಿಯೋ ವೈರಲ್​!

    ತನಿಖೆ ವೇಳೆ ಗೋವಾ ಮೂಲದ ಅಹ್ಮದ್ ಎಂಬ ವ್ಯಕ್ತಿಯ ಬಗ್ಗೆ ಮಾಹಿತಿ ಬೆಳಕಿಗೆ ಬಂದಿದೆ. ಅಹ್ಮದ್ ಪ್ರತಿಷ್ಠಿತರ ರೇಸಾರ್ಟ್​ನಲ್ಲಿ ಡ್ರೈವರ್ ಆಗಿ ಕೆಲಸ ಮಾಡ್ತಿದ್ದ. ಮುಂಬೈನಿಂದ ಗಾಂಜಾ ಪಡೆದು ಬೆಂಗಳೂರು ಮೂಲದ ವ್ಯಕ್ತಿಗೆ ಸರಬರಾಜು ಮಾಡ್ತಿದ್ದ. ಎನ್​​ಸಿಬಿ ನಡೆಸಿದ ದೆಹಲಿ ದಾಳಿ ವೇಳೆ ಗಾಂಜಾ ಪತ್ತೆಯಾಗಿದ್ದು, ಅಹ್ಮದ್​ನನ್ನು ಬಂಧಿಸಿ, ಎನ್​ಸಿಬಿ ತನಿಖೆ ಮುಂದುವರಿಸಿದೆ.

    ಮತ್ತೆ ನೂರು ವಿಶೇಷ ರೈಲುಗಳ ಸಂಚಾರ; ರಾಜ್ಯಗಳೊಂದಿಗೆ ಚರ್ಚಿಸಿ ಆರಂಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts