More

    ಡ್ರಗ್ಸ್​ ಕೇಸ್​: ಸಿಸಿಬಿ ಕಚೇರಿಗೆ ಬಂದ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ

    ಬೆಂಗಳೂರು: ಭೂಗತ ಲೋಕದ ಮಾಜಿ ಡಾನ್​ ದಿ. ಮುತ್ತಪ್ಪ ರೈ ಅವರ ಪುತ್ರ ರಿಕ್ಕಿರೈ ಇಂದು(ಬುಧವಾರ) ಬೆಳಗ್ಗೆ ಸಿಸಿಬಿ ಕಚೇರಿಗೆ ಹಾಜರಾದರು.

    ಮಂಗಳವಾರ ಬೆಳಗ್ಗೆ 6.30ಕ್ಕೆ ಸರ್ಚ್ ವಾರೆಂಟ್​ನೊಂದಿಗೆ ಬಿಡದಿಗೆ ಬಂದ 20ಕ್ಕೂ ಹೆಚ್ಚು ಸಿಸಿಬಿ ಸಿಬ್ಬಂದಿ, ಸತತ 8 ತಾಸು ಮುತ್ತಪ್ಪ ರೈ ಮನೆಯವರನ್ನು ವಿಚಾರಣೆಗೆ ಒಳಪಡಿಸಿದ್ದರು. ಬೆಂಗಳೂರಿನ ಸದಾಶಿವನಗರ ಮನೆ ಮೇಲೂ ಸಿಸಿಬಿ ರೇಡ್​ ಆಗಿತ್ತು. ದಾಳಿ ವೇಳೆ ರಿಕ್ಕಿ ರೈ ಮೊಬೈಲ್, ಲ್ಯಾಪ್​ಟಾಪ್ ಹಾಗೂ ಕೆಲ ದಾಖಲಾತಿಗಳನ್ನ ಜಪ್ತಿ ಮಾಡಲಾಗಿದೆ. ಇಂದು ವಿಚಾರಣೆಗೆ ಹಾಜರ್​ ಆಗುವಂತೆ ನಿನ್ನೆಯೇ ರಿಕ್ಕಿ ರೈಗೆ ಸಿಸಿಬಿ ನೋಟಿಸ್​ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ತನ್ನ ವಕೀಲರೊಂದಿಗೆ ಸಿಸಿಬಿ ಕಚೇರಿಗೆ ರಿಕ್ಕಿ ರೈ ಆಗಮಿಸಿದ್ದಾರೆ.

    ಡ್ರಗ್ಸ್​ ಕೇಸ್​: ಸಿಸಿಬಿ ಕಚೇರಿಗೆ ಬಂದ ಮುತ್ತಪ್ಪ ರೈ ಪುತ್ರ ರಿಕ್ಕಿ ರೈರಿಕ್ಕಿ ರೈ ಡ್ರಗ್ಸ್ ಜಾಲದ ನಂಟು ಹೊಂದಿದ್ದಾರೆ ಎಂಬ ಶಂಕೆ ಇದೆ. ಡ್ರಗ್ಸ್​ ಕೇಸ್​ನ ಪ್ರಮುಖ ಆರೋಪಿಗಳಾದ ಆದಿತ್ಯ ಆಳ್ವ ಮತ್ತು ವಿರೇನ್ ಖನ್ನಾರೊಂದಿಗೆ ರಿಕ್ಕಿ ರೈಗೆ ನಿಕಟ ಸಂಪರ್ಕವಿದೆ ಎನ್ನಲಾಗಿದ್ದು, ಇದೇ ಕಾರಣಕ್ಕೆ ಸಿಸಿಬಿ ದಾಳಿ ನಡೆಸಿತ್ತು. ಈ ದಾಳಿ ನಡೆದಿದೆ. ಎಸಿಪಿ ವೇಣುಗೋಪಾಲ್ ನೇತೃತ್ವದಲ್ಲಿ ರಿಕ್ಕಿ ರೈ ವಿಚಾರಣೆ ನಡೆಯುತ್ತಿದೆ.

    ಮುತ್ತಪ್ಪ ರೈ ಮನೆಗೆ ಇಂದು ಬೆಳಗ್ಗೆಯೇ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು: ಮಾಹಿತಿ ಏನಾದ್ರೂ ಸಿಕ್ತಾ?

    ನನ್ನ ಮಗನನ್ನು ಅವರ ಮನೆಯಲ್ಲೇ ಕೂರಿಸಿಕೊಳ್ಳಲಿ… ನಮಗೆ ಊಟ ಕೊಟ್ಟರೆ ಸಾಕೆಂದ ಡಿಕೆಶಿ ತಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts