More

    ಡ್ರಗ್ಸ್ ಹೊಂದಿದ್ದ ಒಮಾನ್ ಪ್ರಜೆ ಸಹಿತ ಇಬ್ಬರ ಬಂಧನ

    ಮಂಗಳೂರು: ಪಾಸ್‌ಪೋರ್ಟ್ ಅವಧಿ ಮುಗಿದ ಬಳಿಕವೂ ಮಂಗಳೂರಿನಲ್ಲಿದ್ದು, ನಿಷೇಧಿತ ಮಾದಕ ವಸ್ತು ಹೊಂದಿದ್ದ ಆರೋಪದ ಮೇಲೆ ಒಮಾನ್ ದೇಶದ ಪ್ರಜೆ ಸೇರಿದಂತೆ ಇಬ್ಬರನ್ನು ಮಂಗಳೂರು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

    ಅಹಮದ್ ಮೊಹಮದ್ ಮುಸ್ಬಾ ಅಲ್ ಮಹಾಮಾನಿ(34) ಬಂಧಿತ ಒಮಾನ್ ಪ್ರಜೆ. ಈತ 6 ತಿಂಗಳ ಹಿಂದೆ ಗೋವಾಕ್ಕೆ ಬಂದಿದ್ದ. ಬಳಿಕ ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ. ಆ ಬಳಿಕ ಮಂಗಳೂರಿನ ಲಾಡ್ಜ್‌ವೊಂದರಲ್ಲಿ ಹಿಮಾಚಲ ಪ್ರದೇಶ ಮೂಲದ ರಾಂ(22) ಎಂಬಾತನ ಜೊತೆಗೆ ಇದ್ದ. ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಅವರಲ್ಲಿ 2 ಗ್ರಾಂ ಎಂಡಿಎಂಎ ಮತ್ತು 51 ಗ್ರಾಂ ಗಾಂಜಾ ಸಿಕ್ಕಿದೆ. ಇವರು ಗೋವಾದಿಂದ ಡ್ರಗ್ಸ್ ತಂದು ಇಲ್ಲಿ ಮಾರಾಟ ಮಾಡುತ್ತಿದಾರೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts