More

    ಸಿಸಿಬಿ ವಿಚಾರಣೆಗೆ ಬರ್ತಾರಾ ಐಂದ್ರಿತಾ-ದಿಗಂತ್? ಈ ಬಗ್ಗೆ ಅವರೇ ಬಾಯ್ಬಿಟ್ರು

    ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ನಂಟಿನ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ತಾರಾದಂಪತಿ ಐಂದ್ರಿತಾ ರೇ ಮತ್ತು ದಿಗಂತ್​ಗೆ ಸಿಸಿಬಿ ನೊಟೀಸ್​ ಜಾರಿ ಮಾಡಿದೆ.

    ಸದ್ಯ ಈ ದಂಪತಿ ಬೆಂಗಳೂರಿನಲ್ಲಿ ಇಲ್ಲ. ಹಾಗಾಗಿ ಬುಧವಾರ ಬೆಳಗ್ಗೆ ಸಿಸಿಬಿ ಕಚೇರಿಗೆ ಬರುತ್ತಾರೋ ಇಲ್ಲವೋ? ಡ್ರಗ್ಸ್​ ಕೇಸ್​ನಲ್ಲಿ ತಮ್ಮ ಹೆಸರು ಪ್ರಸ್ತಾಪವಾಗುತ್ತಿದ್ದಂತೆ ನಟ-ನಟಿ ಇಬ್ಬರೂ ಎಸ್ಕೇಪ್​ ಆಗಿದ್ದಾರೆ, ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂಬ ಸುದ್ದಿ ಇಂದು ಮಧ್ಯಾಹ್ನ ಹರಿದಾಡಿತ್ತು. ಇದರ ಬೆನ್ನಲ್ಲೇ ನೋಟಿಸ್​ ಬಗ್ಗೆ ಸ್ವತಃ ನಟಿ ಐಂದ್ರಿತಾ ಅವರೇ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿರಿ ಫಾಝಿಲ್ ಕ್ಯಾಸಿನೋ ಪಾರ್ಟಿಯಲ್ಲಿ ಐಂದ್ರಿತಾ ರೇ, ಈ ಬಗ್ಗೆ ನಟಿ ಹೇಳಿದ್ದೇನು?

    ‘ಸಿಸಿಬಿ ಜಾರಿ ಮಾಡಿರುವ ನೋಟಿಸ್​ ಅನ್ನು ವಾಟ್ಸ್ಆ್ಯಪ್​ ಮೂಲಕ ಸ್ವೀಕರಿಸಿದ್ದೇವೆ. ನಾಳೆ(ಬುಧವಾರ) ಬೆಳಗ್ಗೆ 11 ಗಂಟೆಗೆ ಸಿಸಿಬಿ ಕಚೇರಿ ನಾವಿಬ್ಬರೂ ಆಗಮಿಸಲಿದ್ದು, ತನಿಖೆಗೆ ಸಂಪೂರ್ಣ ಸಹಕಾರ ನೀಡಲಿದ್ದೇವೆ’ ಎಂದು ‘ಮನಸಾರೆ’ ಬೆಡಗಿ ಐಂದ್ರಿತಾ ಟ್ವೀಟ್​ ಮಾಡಿದ್ದಾರೆ.

    ಇನ್ನು ದ್ವಿಗ್ವಿಜಯ ನ್ಯೂಸ್​ ಜತೆ ಫೋನ್​ನಲ್ಲಿ ಮಾತನಾಡಿದ ದಿಗಂತ್​, ‘ನಾವು ಎಲ್ಲೂ ತಲೆಮರೆಸಿಕೊಂಡಿಲ್ಲ. ನಾಳೆ ಬೆಂಗಳೂರಿಗೆ ಬರುತ್ತಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

    PHOTOS/ ಡ್ರಗ್ಸ್​ ದಂಧೆಯ ಕಿಂಗ್​ಪಿನ್​ ಜತೆ ಐಂದ್ರಿತಾ ಪೋಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts