More

    ಖುಷ್ಕಿ ಜಮೀನಿಗೆ ವರವಾದ ಮಳೆ

    ಲಿಂಗಸುಗೂರು: ತಾಲೂಕಿನ ವಿವಿಧೆಡೆ ಸುರಿದ ಮಳೆಯಿಂದಾಗಿ ಖುಷ್ಕಿ ಜಮೀನಿನಲ್ಲಿ ಬೆಳೆದಿರುವ ಬೆಳೆಗಳು ಚೇತರಿಕೆಗೆ ವರದಾನವಾದರೆ, ನೀರಾವರಿ ಪ್ರದೇಶದ ಬೆಳೆಗಳಿಗೆ ಕಂಟಕವಾಗಿ ಪರಿಣಿಮಿಸಿದೆ. ಆತಂಕದ ಮಧ್ಯೆಯೂ ಹಿಂಗಾರು ಬೆಳೆ ಕೈಗೆಟಕುವ ನಿರೀಕ್ಷೆಯಲ್ಲಿ ರೈತರಿದ್ದಾರೆ.

    ಹಿಂದು ಪಂಚಾಂಗದ ಪ್ರಕಾರ ಸಾಲಿನ ಕೊನೆಯ ಮಳೆಯೆಂದು ಕರೆಯಲಾಗುವ ಸ್ವಾತಿ ಮಳೆ, ವಿಜಯದಶಮಿ ದಿನದಿಂದ ಆರಂಭವಾಗಿದ್ದು, ಹಿಂಗಾರು ಹಂಗಾಮಿನಲ್ಲಿ ನಿರೀಕ್ಷೆಯಂತೆ ಸುರಿದಿಲ್ಲ. ಆದರೆ, ಕೊನೆಯ ಗಳಿಗೆಯಲ್ಲಿ ಬಹುತೇಕ ಕಡೆ ಸುರಿದಿರುವುದು ಹಿಂಗಾರು ಹಂಗಾಮಿನ ಬೆಳೆಗಳಿಗೆ ಜೀವಕಳೆ ತಂದಿದೆ. ಬಿಳಿಜೋಳ, ಕಡಲೆ, ಕುಸುಬೆ, ಶೇಂಗಾ ಬೆಳೆಗಳಿಗೆ ವರದಾನವಾದರೆ, ಕಾಳು ಕಟ್ಟುವ ಹಂತದಲ್ಲಿದ್ದ ಭತ್ತ, ಹತ್ತಿ, ತೊಗರಿ, ಸಜ್ಜೆ, ಮೆಣಸಿನಕಾಯಿ ಬೆಳೆಗಳು ಹಾನಿಯಾಗುವ ಆತಂಕ ಎದುರಾಗಿದೆ.

    ಆನೆಹೊಸೂರು, ಚಿತ್ತಾಪುರ, ರೋಡಲಬಂಡಾ (ಯುಕೆಪಿ) ಗ್ರಾಪಂ ವ್ಯಾಪ್ತಿಯಲ್ಲಿ ಎನ್‌ಆರ್‌ಬಿಸಿ ಮತ್ತು ರಾಂಪೂರ ಏತ ನೀರಾವರಿ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದಿರುವ ಭತ್ತದ ಬೆಳೆ ಮಳೆಯಿಂದಾಗಿ ನೆಲಕ್ಕೊರಗಿದೆ. ಹತ್ತಿ, ಮೆಣಸಿನಕಾಯಿ, ತೊಗರಿ, ಸಜ್ಜೆ ಬೆಳೆಗಳು ಹಾನಿಗೀಡಾಗಿವೆ. ಆನೆಹೊಸೂರು-ಜಾಗೀರನಂದಿಹಾಳ ಮಾರ್ಗದ ಹಳ್ಳವು ತುಂಬಿ ಹರಿಯುತ್ತಿದ್ದು, ಸಂಚಾರಕ್ಕೆ ಅಡ್ಡಿಯಾಗಿದೆ. ಬೆಂಡೋಣಿ, ರೋಡಲಬಂಡಾ, ಉಪ್ಪೇರಿ, ಗುಡದನಾಳ ಸೇರಿ ಇತರ ಸಣ್ಣ ಪ್ರಮಾಣದ ಹಳ್ಳ-ಕೊಳ್ಳಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts