More

    ಬರಗಾಲ ಪೀಡಿತ ತಾಲೂಕುಗಳೆಂದು ಪರಿಗಣಿಸಲು ಸರ್ಕಾರಕ್ಕೆ ವರದಿ

    ಕೊಟ್ಟೂರು: ಕೊಟ್ಟೂರು ಮತ್ತು ಹರಪನಹಳ್ಳಿ ತಾಲೂಕನ್ನು ಬರಗಾಲ ಪೀಡಿತ ತಾಲೂಕುಗಳೆಂದು ಪರಿಗಣಿಸಲು ಸರ್ಕಾರಕ್ಕೆ ವರದಿ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದೀವಾಕರ್ ತಿಳಿಸಿದರು.

    ಇದನ್ನೂ ಓದಿ: ಸೇಡಂ ಮತಕ್ಷೇತ್ರ ಬರಗಾಲ ಪೀಡಿತ ಎಂದು ಘೋಷಣೆ ಮಾಡಲು ಜೆಡಿಎಸ್ ಮುಖಂಡ ಬಾಲರಾಜ ಗುತ್ತೇದಾರ ಆಗ್ರಹ

    ಸಕಾಲಕ್ಕೆ ಮಳೆಯಾಗದೆ ಸಂಕಷ್ಟದಲ್ಲಿರುವ ಕೊಟ್ಟೂರು ತಾಲೂಕಿನ ರೈತರ ಹೊಲಗಳಿಗೆ ಶುಕ್ರವಾರ ತಹಶೀಲ್ದಾರ್ ಅಮರೇಶ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಯೊಂದಿಗೆ ಭೇಟಿ ನೀಡಿ ಒಣಗಿರುವ ಬೆಳೆಗಳನ್ನು ವೀಕ್ಷಿಸಿದರು.

    ಇದಕ್ಕೂ ಪೂರ್ವದಲ್ಲಿ ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿ ದೇಗುಲದ ಬೆಳ್ಳಿ ಬಾಗಿಲು ನಿರ್ಮಾಣದ ಕುರಿತು ಧಾರ್ಮಿಕ ಮತ್ತು ದತ್ತಿ ಇಲಾಖೆ ಸಹಾಯಕ ಆಯುಕ್ತ ಗಂಗಾಧರಪ್ಪರೊಂದಿಗೆ ಚರ್ಚೆ ನಡೆಸಿ, ಬಾಗಿಲು ನಿರ್ಮಿಸಲು ಆದೇಶಿಸಿದರು. ದೇಗುಲದ ಪಕ್ಕದಲ್ಲಿರುವ ಹಳೆ ಟ್ರಜರಿ ಖಾಲಿ ನಿವೇಶವನ್ನು ಪರೀಶಿಲಿಸಿ ಭಕ್ತರ ಅನುಕೂಲಕ್ಕೆ ಬಳಸಿಕೊಳ್ಳುವಂತೆ ತಿಳಿಸಿದರು.

    ಅಲ್ಲಿಂದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ಕೊಟ್ಟು ವೈದ್ಯರು, ಔಷಧಿ ಕೊರತೆಯನ್ನು ಪರೀಶಿಲಿಸಿ, ಪ್ರತಿ ವಾರ್ಡಗಳ ಸ್ವಚ್ಚತೆ, ಔಷಧಿ ಉಗ್ರಾಣಕ್ಕೆ ಹೋಗಿ ಔಷಧಿಗಳನ್ನು ದಿನವಹಿ ಆಸ್ಪತ್ರೆಗೆ ಭೇಟಿ ನೀಡಿವ ರೋಗಿಗಳ ದಾಖಲೆಗಳನ್ನು ಪರಿಶೀಲಿಸಿದರು.

    ರೋಗ್ಯ ರಕ್ಷಾ ಸಮಿತಿಯಲ್ಲಿ ನಡೆದಿದೆ ಎನ್ನಲಾದ ಲಕ್ಷಾಂತರ ರೂ. ಭ್ರಷ್ಟಾಚಾರ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಚುಟುಕಾಗಿ ಪರಿಶೀಲನೆ ಮಾಡುವುದಾಗಿ ತಿಳಿಸಿದರು. ತರಳುಬಾಳು ಹುಣ್ಣಿಮೆ ಸಂದರ್ಭದಲ್ಲಿ ಕಾಳಾಪುರದಲ್ಲಿ ನಡೆದ ಗಲಭೆಯಲ್ಲಿ ಮನೆಗಳನ್ನು ಕಳೆದುಕೊಂಡು ಮಹಿಳೆಯೊಬ್ಬಳು ಜಿಲ್ಲಾಧಿಕಾರಿ ಮುಂದೆ ಅಳಲನ್ನು ತೋಡಿಕೊಂಡಳು.

    ಬಿ.ಸಿ.ಎಂ. ಹಾಸ್ಟಲ್‌ಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಸಿಗುತ್ತಿರುವ ಸೌಲಭ್ಯ ಕುರಿತು ವಾರ್ಡನ್‌ನಿಂದ ಮಾಹಿತಿ ಪಡೆದರು. ತಹಶೀಲ್ದಾರ್ ಅಮರೇಶ, ಆರ್.ಐ.ಹಾಲಸ್ವಾಮಿ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಇದ್ದರು.
    ಸೆಪ್ಟೆಂಬರ್ 01ಕೊಟ್ಟೂರು 01: ಬರಗಾಲದ ಹಿನ್ನಲೆಯಲ್ಲಿ ಕೊಟ್ಟೂರಿಗೆ ಜಿಲ್ಲಾಧಿಕಾರಿ ಎಂ.ಎಸ್.ದೀವಾಕರ್ ರೈತರೊಬ್ಬರ ಹೊಲಕ್ಕೆ ಹೋಗಿ ಮಳೆ ಇಲ್ಲದೆ ಒಣಗಿಹೋದ ಬೆಳೆಯನ್ನು ವೀಕ್ಷಿಸಿದರು. ತಹಶೀಲ್ದಾರ್ ಅಮರೇಶ, ಆರ್.ಐ. ಹಾಲಸ್ವಾಮಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts