More

    ಡ್ರೋನ್​ ಪ್ರತಾಪ್​ ಬಡತನದ ಬೇಗೆ ಕಟ್ಟುಕಥೆ: ಅವನ ಕುಟುಂಬ ಹಿನ್ನೆಲೆ ಏನು ಗೊತ್ತಾ?

    ಮಂಡ್ಯ: ಮಾತಿನ ಕಲೆ ಗೊತ್ತಿದ್ದರೆ ಯಾರನ್ನು ಬೇಕಾದರೂ ಮೂರ್ಖರ ನ್ನಾಗಿಸಬಹುದು ಎಂಬುದನ್ನು ನಿರೂಪಿಸಿರುವ ಮಳವಳ್ಳಿ ತಾಲೂಕಿನ ನೆಟ್ಕಲ್ ಗ್ರಾಮದ ನಕಲಿ ವಿಜ್ಞಾನಿ ಡ್ರೋನ್ ಪ್ರತಾಪ್, ಬಡತನದ ಬಗ್ಗೆ ಕಟ್ಟಿದ್ದು ಸತ್ಯದ ತಲೆಯ ಮೇಲೆ ಹೊಡೆಯುವಂತೆ ಕಟ್ಟುಕತೆ.

    ತನ್ನದು ಬಡ ಕುಟುಂಬ. ತಾನು ಬಹಳ ಕಷ್ಟಗಳನ್ನು ಅನುಭವಿಸಿದ್ದಾಗಿ ಪ್ರತಾಪ್ ಈ ಹಿಂದೆ ಹೇಳಿಕೊಂಡಿದ್ದ. ಆದರೆ ವಾಸ್ತವದಲ್ಲಿ ಆತನ ಕುಟುಂಬ ಬಡತನದ ಬೇಗೆಯಲ್ಲೇನು ಬೇಯುತ್ತಿಲ್ಲ. ಪ್ರತಾಪ್ ತಾಯಿಯ ತಂದೆ (ತಾತ) ಸರ್ಕಾರಿ ನೌಕರಿಯಲ್ಲಿದ್ದರು. ಪ್ರತಾಪ್ ದೊಡ್ಡಪ್ಪ ಅಮೆರಿಕದ ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿ ಪ್ರೊಫೆಸರ್ ಆಗಿದ್ದರು. ಅವರ ಪುತ್ರ ಕೋಲ್ಕತ್ತಾದಲ್ಲಿ ಸಾಫ್ಟ್​ವೇರ್ ಉದ್ಯೋಗಿಯಾಗಿದ್ದಾರೆ.

    ಇದನ್ನೂ ಓದಿ: ನಿಮ್ಮ ಕಣ್ಣಿಗೊಂದು ಸವಾಲು: 15 ಸೆಕೆಂಡಿನಲ್ಲಿ ಚಿತ್ರದಲ್ಲಿರೋ ಹಾವು ಪತ್ತೆ ಹಚ್ಚಿದ್ರೆ ನೀವೇ ಗ್ರೇಟ್!

    ಪ್ರತಾಪ್ ತಂದೆ, ತಾಯಿ ರೇಷ್ಮೆ ಬೆಳೆಗಾರರಾಗಿದ್ದು, ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಪ್ರತಾಪ್ ಮಳವಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದಾನೆ. ಜೆಎಸ್​ಎಸ್ ಕಾಲೇಜಿನಲ್ಲಿ ಬಿಎಸ್​ಸಿ ವಿದ್ಯಾಭ್ಯಾಸ ಮಾಡುತ್ತಿದ್ದವನಿಗೆ ಹಣ ಮಾಡುವ ಐಡಿಯಾ ಬಂದಿತು. ಸರಿಯಾಗಿ ತರಗತಿಗೆ ಬಾರದ ಈತ ಏನೋ ಸಂಶೋಧನೆ ಮಾಡುತ್ತಿದ್ದಾನೆಂದು ಭಾವಿಸಿ ಉಪನ್ಯಾಸಕರ ಜತೆಗೆ ಮಠದವರು ಕೂಡ ಆರ್ಥಿಕ ನೆರವು ನೀಡಿದ್ದಾರೆ. ಜರ್ಮನಿಯಲ್ಲಿ ಡ್ರೋನ್ ಪ್ರದರ್ಶನ ಮಾಡಲಿಕ್ಕೆ ಜೆಎಸ್​ಎಸ್ ಮಠ 8 ಲಕ್ಷ ರೂ., ವಿದ್ಯಾಸಂಸ್ಥೆಯ ಎಲ್ಲ ಉಪನ್ಯಾಸಕರು ಆರ್ಥಿಕ ನೆರವು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಡ್ರೋನ್ ತಯಾರಿಸಿದ್ದಾಗಿ ರೈಲು ಬಿಟ್ಟ ಪ್ರತಾಪ್: ಐಷಾರಾಮಿ ಜೀವನ ನಡೆಸುತ್ತಿರುವ ನಕಲಿ ವಿಜ್ಞಾನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts