More

    ಹೆಲೋ ಸ್ವಲ್ಪ ತಡಿರಿ: ದೃಶ್ಯಂ ಕ್ಲೈಮ್ಯಾಕ್ಸ್ ಇನ್ನೂ ಮುಗಿದಿಲ್ಲ, ದೃಶ್ಯಂ 3 ಬರುತ್ತಂತೆ

    ಬೆಂಗಳೂರು: ಸೂಪರ್​ ಹಿಟ್ ಮಲಯಾಳಂ ಸಿನಿಮಾ ‘ದೃಶ್ಯಂ’ ನ ಎರಡನೇ ಅವತರಣಿಕೆ ‘ದೃಶ್ಯಂ 2’ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಮತ್ತೆ ಹಿಟ್ ಎನಿಸಿಕೊಂಡಿದೆ. ನಿರ್ದೇಶಕ ಜೀತು ಜೋಸೆಫ್ ಸಾರತ್ಯದಲ್ಲಿ ಮೂಡಿಬಂದಿರುವ ಈ ಚಿತ್ರ ಒಟಿಟಿ ವೇದಿಕೆಯಲ್ಲೂ ಬಿಡುಗಡೆಯಾಗಿ ಸಾಕಷ್ಟು ಸಿನಿಪ್ರಿಯರಿಗೆ ಥ್ರೀಲ್ ಕೊಟ್ಟಿದೆ.

    ‘ದೃಶ್ಯಂ 2’ ನಲ್ಲಿ ಯುವಕ ವರುಣ್ ಪ್ರಭಾಕರ್ ಕೊಲೆಗೆ ಒಂದು ತಾರ್ಕಿಕ ಅಂತ್ಯ ಕಾಣಿಸಿದ್ದರಿಂದ ಪ್ರೇಕ್ಷಕರು ಈ ಸಿನಿಮಾ ಇಲ್ಲಿಗೆ ಮುಗಿಯುತು ಎಂದು ಕೊಂಡಿದ್ದರು. ಆದರೆ, ಇದೀಗ ಸಿನಿಪ್ರಿಯರಿಗೆ ಶಾಕ್ ಕೊಟ್ಟಿರುವ ನಿರ್ದೇಶಕ ಜೀತು ಜೋಸೆಫ್, ದೃಶ್ಯಂ 3 ಬರಲಿದೆ ಎಂದು ಹೇಳಿದ್ದಾರೆ.

    ಹೌದು ದೃಶ್ಯಂ ಸಿನಿಮಾದ ಕ್ಲೈಮಾಕ್ಸ್ ಇನ್ನು ಮುಗಿದಿಲ್ಲ ಎಂದು ಹೇಳಿರುವ ಜೀತು, ಚಿತ್ರದ ಕ್ಲೈಮ್ಯಾಕ್ಸ್ ಸಿದ್ದವಾಗುತ್ತಿದ್ದು, ದೃಶ್ಯಂ 3 ಬರುವುದು ಪಕ್ಕಾ ಎಂದು ಹೇಳಿದ್ದಾರೆ.ಕೊಟ್ಟಾಯಂ ಪ್ರೆಸ್​​ ಕ್ಲಬ್​ ನಲ್ಲಿ ಆಯೋಜಿಸಿದ್ದ ಚಿತ್ರದ ಸಕ್ಸಸ್ ಮೀಟ್​ನಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ. ಕ್ಲೈಮ್ಯಾಕ್ಸ್ ಬಗ್ಗೆ ನಟ ಮೋಹನ್​ಲಾಲ್ ಹಾಗೂ ನಿರ್ಮಾಪಕ ಅಂಟೋನಿ ಅವರಿಗೆ ಹೇಳಿದ್ದು, ಅವರು ತುಂಬಾ ಇಷ್ಟಪಟ್ಟಿದ್ದಾರೆ ಎಂದು ಹೇಳಿದ್ದಾರೆ. ಆದರೆ, ದೃಶ್ಯಂ 3 ಚಿತ್ರಿಕರಣ ಇಷ್ಟು ಬೇಗ ಆರಂಭವಾಗುವುದಿಲ್ಲ. ಚಿತ್ರ ತೆರೆಗೆ ಬರಬೇಕಾದರೆ ಇನ್ನೂ ಮೂರು ವರ್ಷವಾದರೂ ಬೇಕು ಎಂದು ಜೀತು ಜೋಸೆಪ್ ಹೇಳಿದ್ದಾರೆ.

    ಚಿತ್ರದಲ್ಲಿ ನಾಯಕ ಜಾರ್ಜ್ ಕುಟ್ಟಿ ಮಾಡಿರುವುದು ಸರಿನಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಜೀತು, ನಿಜ ಜೀವನದಲ್ಲಿ ನಾನಾಗಿದ್ದರೂ ಅದೇ ರೀತಿ ಮಾಡುತ್ತಿದ್ದೆ. ಪ್ರತಿಯೊಬ್ಬರಿಗೂ ಅವರ ಕುಟುಂಬವೇ ಮುಖ್ಯ ಎಂದು ಹೇಳಿದ್ದಾರೆ.

    ಟ್ರೋಲ್​ಗೆ ಪ್ರಿಯಾಂಕಾ ಚೋಪ್ರಾ ಫಿದಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts