More

    ಪಿಯು ಕಾಲೇಜಲ್ಲಿ ಕುಡಿಯುವ ನೀರಿನ ಘಟಕ

    ಬಾಳೆಹೊನ್ನೂರು: ಕಾರ್ಪೋರೇಟ್ ಸಂಸ್ಥೆಗಳ ವತಿಯಿಂದ ರಾಷ್ಟ್ರಾದ್ಯಂತ ತಮ್ಮ ಕಂಪನಿಯ ಲಾಭಾಂಶದ ಶೇ.2 ರಷ್ಟು ನಿಧಿಯನ್ನು ಸಾರ್ವಜನಿಕ ಸೇವೆಗೆ ಮೀಸಲಿಟ್ಟಿದ್ದು, ಈ ನಿಧಿಯ ಮೂಲಕ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಸುಮಾರು 50 ಸಾವಿರ ರೂ.ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಲಾಗಿದೆ ಎಂದು ಶಿವಮೊಗ್ಗದ ರೋಟರಿ ಕ್ಲಬ್ ಮಾಜಿ ಗವರ್ನರ್ ಚಂದ್ರಶೇಖರ್ ಹೇಳಿದರು.
    ಪಟ್ಟಣದ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಮುತ್ತೂಟ್ ಫೈನಾನ್ಸ್ ಹಾಗೂ ರೋಟರಿ ಕ್ಲಬ್ ಸಹಯೋಗದಲ್ಲಿ ನಿರ್ಮಿಸಿರುವ ನೂತನ ಶುದ್ಧ ಕುಡಿಯುವ ನೀರಿನ ಘಟಕವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
    ದೇಶದಲ್ಲಿ ಶುದ್ಧ ಕುಡಿಯುವ ನೀರಿಲ್ಲದೆ ಬಹು ಜನರು ರೋಗ ರುಜಿನಗಳಿಂದ ಬಳಲುತ್ತಿದ್ದಾರೆ. 800 ವರ್ಷಗಳ ಇತಿಹಾಸ ಹೊಂದಿರುವ ಮುತ್ತೂಟ್ ಫೈನಾನ್ಸ್‌ನವರು ರಾಜ್ಯಾದ್ಯಂತ ಸಿಆರ್‌ಎ್ ಯೋಜನೆಯಡಿ ವಸ್ತುಗಳನ್ನು ವಿತರಿಸುತ್ತಿದ್ದಾರೆ. ಪ್ರಮುಖವಾಗಿ ಕೇರಳದಲ್ಲಿ ಇತ್ತೀಚೆಗೆ 2 ವರ್ಷಗಳ ಹಿಂದೆ ಉಂಟಾದ ಜಲಪ್ರವಾಹದಿಂದ ಸಾವಿರಾರು ಮನೆಗಳು ಕೊಚ್ಚಿ ಹೋಗಿದ್ದು ಬಡವರ ಅನುಕೂಲಕ್ಕಾಗಿ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಜಾರ್ಜ್ ಜೋಕಬ್ ಅವರು ನೂರಾರು ಮನೆಗಳನ್ನು ಕಟ್ಟಿಸಿಕೊಟ್ಟಿದ್ದಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts