More

    ಕುಡಿವ ನೀರಿನ ಕೆರೆ ತುಂಬಿಸಲು ಎಡದಂಡೆ ಕಾಲುವೆಗೆ ನೀರು

    ಮಸ್ಕಿ : ಕುಡಿವ ನೀರಿನ ಅಭಾವ ನೀಗಿಸುವ ಹಿನ್ನೆಲೆಯಲ್ಲಿ ಕೆರೆ ತುಂಬಿಸಲು ತುಂಗಭದ್ರಾ ಎಡದಂಡೆ ನಾಲೆಯ ಮುಖ್ಯ ಕಾಲುವೆಗೆ ನೀರು ಹರಿಬಿಡಲಾಗಿದೆ. ರಾಯಚೂರು ಇನ್ನಿತರ ಭಾಗಗಳಲ್ಲಿ ಕುಡಿವ ನೀರಿನ ಅಭಾವ ಉಂಟಾಗಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯದಿಂದ ಮುಖ್ಯ ಕಾಲುವೆಗೆ ಸಾವಿರ ಕ್ಯೂಸೆಕ್ ನೀರು ಹರಿ ಬಿಡಲಾಗಿದೆ. ಪಟ್ಟಣದ ಹತ್ತಿರ ಇರುವ 69ನೇ ಮೈಲ್ ಬಳಿಯ ಮುಖ್ಯ ಕಾಲುವೆಯಲ್ಲಿ 9 ಅಡಿ ನೀರು ಹರಿಯತೊಡಗಿದೆ. ಕುಡಿವ ನೀರಿನ ಸಮಸ್ಯೆ ನಿವಾರಿಸಲು ಗಣೇಕಲ್ ಜಲಾಶಯ ಭರ್ತಿ ಮಾಡುವ ಉದ್ದೇಶದಿಂದ ಜಿಲ್ಲಾಧಿಕಾರಿ ಎಡನಾಲೆ ಉದ್ದಕ್ಕೂ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ. ಕುಡಿವ ನೀರು ಪೊರೈಸುವ ಶಾಶ್ವತ ಕುಡಿವ ನೀರಿನ ಯೋಜನೆಯ ಕೆರೆ ಗಳನ್ನು ಭರ್ತಿ ಮಾಡಲಾಗುತ್ತಿದೆ. ಉಪ ಕಾಲುವೆ ಗೇಟ್‌ಗಳ ಕಾವಲಿಗೆ ಪೊಲೀಸರ ಜತೆ ನೀರಾವರಿ ನಿಗಮದ ಇಂಜಿನಿಯರ್‌ಗಳು ಕಾಲುವೆ ಬಳಿ ಠಿಕಾಣಿ ಹೂಡಿದ್ದಾರೆ.

    ರಾಯಚೂರು ಭಾಗದಲ್ಲಿ ಕುಡಿವ ನೀರಿನ ಅಭಾವ ಉಂಟಾಗಿರುವ ಹಿನ್ನೆಯಲ್ಲಿ ಕೆರೆಗಳ ಭರ್ತಿಗಾಗಿ ಎಡದಂಡೆ ಕಾಲುವೆಗೆ ನೀರು ಹರಿಸಲಾಗಿದೆ. ಏ.25 ವರೆಗೆ 1500 ಕ್ಯೂಸೆಕ್ ನೀರು ಹರಿಸಲಾಗುವುದು.
    | ವೀರಣ್ಣ. ನೀರಾವರಿ ನಿಗಮ ಎಇಇ, ಮಸ್ಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts