More

    500 ಮೆಡಿಕಲ್ ಆಕ್ಸಿಜನ್ ಪ್ಲ್ಯಾಂಟ್​ಗಳ ಸ್ಥಾಪನೆಗೆ ಸಜ್ಜಾದ ಡಿಆರ್​ಡಿಒ

    ನವದೆಹಲಿ : ಭಾರತದಲ್ಲಿ ಕರೊನಾ ಪ್ರಕರಣಗಳು ನಿಯಂತ್ರಣ ಮೀರಿ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಹಲವು ರಾಜ್ಯಗಳ ಆಸ್ಪತ್ರೆಗಳಲ್ಲಿ ಮೆಡಿಕಲ್ ಆಕ್ಸಿಜನ್ ಮತ್ತು ಬೆಡ್​ಗಳ ಕೊರತೆಯುಂಟಾಗಿದೆ. ಈ ಹಿನ್ನೆಲೆಯಲ್ಲಿ ಡಿಫೆನ್ಸ್ ರಿಸರ್ಚ್​ ಅಂಡ್​ ಡೆವಲಪ್​ಮೆಂಟ್ ಆರ್ಗನೈಸೇಷನ್ (ಡಿಆರ್​ಡಿಒ), ಪಿಎಂ ಕೇರ್ಸ್​ ಫಂಡ್​ನಡಿ ಮಂಜೂರಾಗಿರುವ ಹಣದಲ್ಲಿ ಮುಂದಿನ ಮೂರು ತಿಂಗಳಲ್ಲಿ 500 ಮೆಡಿಕಲ್ ಆಕ್ಸಿಜನ್ ಪ್ಲ್ಯಾಂಟ್​(ಎಂಒಪಿ)ಗಳನ್ನು ಸ್ಥಾಪಿಸಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

    “ತೇಜಸ್​ ಲೈಟ್​ ಕಾಂಬಾಟ್ ಏರ್​​ಕ್ರಾಫ್ಟ್​ನಲ್ಲಿ ಆಕ್ಸಿಜನ್ ಉತ್ಪಾದಿಸಲು ಡಿಆರ್​ಡಿಒ ರೂಪಿಸಿರುವ ಎಂಒಪಿ ತಂತ್ರಜ್ಞಾನವು ಕರೊನಾ ರೋಗಿಗಳಿಗೆ ಉಂಟಾಗಿರುವ ಆಕ್ಸಿಜನ್ ಕೊರತೆಯನ್ನು ನೀಗಿಸಲು ಸಹಾಯ ಮಾಡಲಿದೆ” ಎಂದು ಸಿಂಗ್ ಟ್ವೀಟ್ ಮಾಡಿದ್ದಾರೆ. ಡಿಆರ್​ಡಿಒದ ಎಂಒಪಿ ಒಂದು ನಿಮಿಷಕ್ಕೆ 1,000 ಲೀಟರ್ ಆಕ್ಸಿಜನ್ ಉತ್ಪಾದಿಸುವ ಶಕ್ತಿ ಹೊಂದಿದೆ. ಈ ವ್ಯವಸ್ಥೆಯು ನಿಮಿಷಕ್ಕೆ 5 ಲೀಟರ್ ಫ್ಲೋ ರೇಟ್​ನಲ್ಲಿ 190 ರೋಗಿಗಳಿಗೆ ಉಪಯುಕ್ತವಾಗಬಲ್ಲದು ಮತ್ತು ದಿನಕ್ಕೆ 195 ಸಿಲಿಂಡರ್​ಗಳನ್ನು ಭರ್ತಿ ಮಾಡಬಲ್ಲದು ಎಂದು ಡಿಆರ್​ಡಿಒ ಹೇಳಿಕೆಯಲ್ಲಿ ವಿವರಿಸಿದೆ. 

    ಇದನ್ನೂ ಓದಿ: ಕರೊನಾ ಚಿಕಿತ್ಸೆಗೆ ಆಸ್ಪತ್ರೆಯಲ್ಲಿ ಬೆಡ್​​ ಬೇಕೆ ? ಬೆಂಗಳೂರಿನಲ್ಲಿ ಈ ವಿಧಾನ ಅನುಸರಿಸಿ

    ಡಿಆರ್​ಡಿಒ ಈ ಎಂಒಪಿ ತಂತ್ರಜ್ಞಾನವನ್ನು ಬೆಂಗಳೂರಿನ ಟಾಟಾ ಅಡ್ವಾನ್ಸಡ್ ಸಿಸ್ಟಮ್ಸ್ ಲಿಮಿಟೆಡ್ ಮತ್ತು ಕೊಯಮತ್ತೂರಿನ ಟ್ರೈಡೆಂಟ್ ನ್ಯೂಮ್ಯಾಟಿಕ್ಸ್ ಕಂಪೆನಿಗಳಿಗೆ ವರ್ಗಾಯಿಸಿದ್ದು, ಈ ಎರಡು ಕಂಪನಿಗಳು 380 ಆಕ್ಸಿಜನ್​ ಪ್ಲ್ಯಾಂಟ್​ಗಳನ್ನು ಸ್ಥಾಪಿಸಲಿವೆ. ನಿಮಿಷಕ್ಕೆ 500 ಲೀಟರ್ ಆಕ್ಸಿಜನ್ ಉತ್ಪಾದಿಸಬಲ್ಲ ಇನ್ನೂ 120 ಆಕ್ಸಿಜನ್ ಪ್ಲ್ಯಾಂಟ್​ಗಳನ್ನು ಡೆಹ್ರಾಡೂನಿನ ಇಂಡಿಯನ್ ಇನ್ಸ್​ಟಿಟ್ಯೂಟ್ ಆಫ್ ಪೆಟ್ರೋಲಿಯಮ್ ಜೊತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೈಗಾರಿಕೆಗಳು ಸ್ಥಾಪಿಸಲಿವೆ ಎನ್ನಲಾಗಿದೆ. (ಏಜೆನ್ಸೀಸ್)

    ಆಕ್ಸಿಜನ್ ಕೊರತೆಗೆ ಮಿಡಿದ ಮಾರುತಿ ಸುಜುಕಿ ; ಮೇ 1 ರಿಂದ 9 ಕಾರ್ಖಾನೆಗಳು ಬಂದ್ !

    ಸರ್ಕಾರದ ಎಚ್ಚರಿಕೆ ಘಂಟೆ : ಮನೆಯಲ್ಲೂ ಮಾಸ್ಕ್​ ತೊಡಬೇಕಾದ ಸಮಯ ಬಂದಿದೆ !

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts