More

    ಕೊಹ್ಲಿ ಬ್ಯಾಟಿಂಗ್‌ನತ್ತ ಕೋಚ್ ದ್ರಾವಿಡ್ ವಿಶೇಷ ಗಮನ, ನೀಗುತ್ತಾ ಶತಕಗಳ ಬರ?

    ಸೆಂಚುರಿಯನ್: ಕಳೆದ 2 ವರ್ಷಗಳಿಂದ ಶತಕದ ಬರ ಎದುರಿಸುತ್ತಿರುವ ನಾಯಕ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್‌ನತ್ತ ಕೋಚ್ ರಾಹುಲ್ ದ್ರಾವಿಡ್, ವಿಶೇಷ ಗಮನಹರಿಸಿದ್ದಾರೆ. ಅಭ್ಯಾಸದ ವೇಳೆ ಕೊಹ್ಲಿ ಜತೆಗೆ ದ್ರಾವಿಡ್ ಹೆಚ್ಚಿನ ಕಳೆಯುತ್ತಿದ್ದಾರೆ.

    ಕಳೆದ 13 ಟೆಸ್ಟ್‌ಗಳಲ್ಲಿ ಕೊಹ್ಲಿ ಕೇವಲ 26ರ ಸರಾಸರಿಯಲ್ಲಿ ರನ್ ಗಳಿಸಿದ್ದು, 74 ರನ್ ಅವರ ಗರಿಷ್ಠ ಗಳಿಕೆ ಎನಿಸಿದೆ. ಇದರ ನಡುವೆಯೂ ಅವರ ಟೆಸ್ಟ್ ವೃತ್ತಿಜೀವನದ ರನ್ ಸರಾಸರಿ 50ರ ಮೇಲೆಯೇ ಉಳಿದುಕೊಂಡಿದೆ.

    2019ರ ನವೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಅಹರ್ನಿಶಿ ಟೆಸ್ಟ್‌ನಲ್ಲಿ ಕೊಹ್ಲಿ ಕೊನೇ ಶತಕ ಸಿಡಿಸಿದ್ದರು. ದಕ್ಷಿಣ ಆಫ್ರಿಕಾದ ವೇಗಿಗಳಾದ ಕಗಿಸೊ ರಬಾಡ ಮತ್ತು ಅನ್ರಿಚ್ ನೋಕಿಯ ಭಾರತಕ್ಕೆ ಪ್ರಮುಖ ಸವಾಲಾಗಲಿದ್ದಾರೆ.

    ಸೆಂಟರ್ ಪಿಚ್‌ನಲ್ಲಿ ಅಭ್ಯಾಸ
    ಸೆಂಚೂರಿಯನ್‌ನ ರೆಸಾರ್ಟ್ ಒಂದರಲ್ಲಿ ವಾಸ್ತವ್ಯ ಹೂಡಿರುವ ಭಾರತ ತಂಡ, ಸೂಪರ್‌ಸ್ಪೋರ್ಟ್ ಪಾಕ್ ಮೈದಾನದಲ್ಲಿ ಕಳೆದ 3 ದಿನಗಳಿಂದ ಅಭ್ಯಾಸ ನಡೆಸುತ್ತಿದೆ. ಅದರಲ್ಲೂ ಕ್ರೀಡಾಂಗಣದ ಸೆಂಟರ್ ಪಿಚ್‌ನಲ್ಲಿ ಅಭ್ಯಾಸ ನಡೆಸುವ ಅವಕಾಶವನ್ನು ಕಲ್ಪಿಸಲಾಗಿದೆ. ಇದು ಸೆನಾ (ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ) ದೇಶಗಳಲ್ಲಿ ಅಪರೂಪದ ಅವಕಾಶವೆನಿಸಿದೆ. ಗುಣಮಟ್ಟದ ಅಭ್ಯಾಸ ಮತ್ತು ಸದೃಢತೆಗೆ ಇದು ನೆರವಾಗಲಿದೆ ಎಂದು ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.

    ಒಮಿಕ್ರಾನ್ ಭಯ; ಭಾರತ-ದಕ್ಷಿಣ ಆಫ್ರಿಕಾ ಸರಣಿಯ ಎಲ್ಲ ಪಂದ್ಯಗಳಿಗೆ ಪ್ರೇಕ್ಷಕರಿಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts