More

    2001ರ ಕೋಲ್ಕತ ಟೆಸ್ಟ್ ಗೆಲುವಿಗೆ ದ್ರಾವಿಡ್ ಹೇಳಿದ ಕಾರಣವೇನು?

    ಬೆಂಗಳೂರು: ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ 2001ರ ಕೋಲ್ಕತ ಟೆಸ್ಟ್ ಪಂದ್ಯಕ್ಕೆ ವಿಶೇಷವಾದ ಸ್ಥಾನವಿದೆ. ಭಾರತದ ಕ್ರಿಕೆಟಿಗರಿಗೆ ಹೊಸ ವಿಶ್ವಾಸವನ್ನು ತುಂಬಿದ ಮತ್ತು ಆಸ್ಟ್ರೇಲಿಯನ್ನರ ಗರ್ವಭಂಗ ಮಾಡಿದ ಟೆಸ್ಟ್ ಪಂದ್ಯವಿದು. ಕಲಾತ್ಮಕ ಬ್ಯಾಟ್ಸ್‌ಮನ್‌ಗಳಾದ ವಿವಿಎಸ್ ಲಕ್ಷ್ಮಣ್-ರಾಹುಲ್ ದ್ರಾವಿಡ್ ನಡುವಿನ ಅಮೋಘ ಜತೆಯಾಟ, ವಿವಿಎಸ್ ಲಕ್ಷ್ಮಣ್ ಸಿಡಿಸಿದ ಭರ್ಜರಿ 281 ರನ್‌ಗಳ ಇನಿಂಗ್ಸ್ ಮತ್ತು ಆ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರ ಹ್ಯಾಟ್ರಿಕ್ ವಿಕೆಟ್ ಸಾಧನೆ ಪಂದ್ಯದಲ್ಲಿ ಮಹತ್ವದ ಪಾತ್ರ ನಿರ್ವಹಿಸಿತ್ತು. ಇದರಿಂದಾಗಿ ಭಾರತ ತಂಡ ಾಲೋಆನ್ ಇಕ್ಕಟ್ಟಿಗೆ ಸಿಲುಕಿದ್ದರೂ, ಆಸೀಸ್‌ಗೆ ತಿರುಗೇಟು ನೀಡಿ ಗೆಲುವು ಒಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಆದರೆ ಆ ಪಂದ್ಯದ ಹೀರೋಗಳಲ್ಲಿ ಒಬ್ಬರಾದ ಕನ್ನಡಿಗ ರಾಹುಲ್ ದ್ರಾವಿಡ್ ಗೆಲುವಿಗೆ ಬೇರೆಯದ್ದೇ ಕಾರಣ ನೀಡುತ್ತಾರೆ!

    ಇದನ್ನೂ ಓದಿ: ಲಾಕ್‌ಡೌನ್ ಡ್ರೀಮ್ ಇಲೆವೆನ್! ಹಾಲಿ-ಮಾಜಿ ಕ್ರಿಕೆಟಿಗರ ಕನಸಿನ ತಂಡಗಳು ಹೇಗಿವೆ?

    ಪ್ರೇಕ್ಷಕರ ಬೆಂಬಲ ನೆರವಾಯಿತು
    ರಾಹುಲ್ ದ್ರಾವಿಡ್ ಹೇಳುವ ಪ್ರಕಾರ, ಈಡನ್ ಗಾರ್ಡನ್ ಮೈದಾನದಲ್ಲಿ ಭಾರತದ ಗೆಲುವಿಗೆ ನೆರವಾದ ಪ್ರಮುಖ ಅಂಶವೆಂದರೆ ಪ್ರೇಕ್ಷಕರ ಬೆಂಬಲ! ಹೌದು, ಆ ಪಂದ್ಯದಲ್ಲಿ ಪ್ರೇಕ್ಷಕರು ಸಂಪೂರ್ಣವಾಗಿ ಭಾರತ ತಂಡದ ಬೆಂಬಲಕ್ಕೆ ನಿಂತಿದ್ದು ಸಾಕಷ್ಟು ಬಲ ತುಂಬಿತ್ತು. ‘ಕೊನೆಯ ದಿನದಾಟದ ವಾತಾವರಣ ನಿಜಕ್ಕೂ ಅಪೂರ್ವವಾಗಿತ್ತು. ಚಹಾ ವಿರಾಮದ ಬಳಿಕ ನಾವು ಆಸೀಸ್ ವಿಕೆಟ್‌ಗಳನ್ನು ಕಬಳಿಸಿ ಗೆಲುವು ಒಲಿಸಿಕೊಳ್ಳುವ ಪ್ರಯತ್ನದಲ್ಲಿದ್ದೆವು. ಹರ್ಭಜನ್ ಸಿಂಗ್ ಬೌಲಿಂಗ್ ಮಾಡುತ್ತಿದ್ದರು ಮತ್ತು ವಿಕೆಟ್‌ಗಳು ಉರುಳುತ್ತಿದ್ದವು. ಪ್ರೇಕ್ಷಕರು ಅಮೋಘ ರೀತಿಯಲ್ಲಿ ಬೆಂಬಲ ನೀಡುತ್ತಿದ್ದುದು ನಮ್ಮ ಗೆಲುವಿಗೆ ನೆರವಾಯಿತು. ಪ್ರತಿ ಎಸೆತಕ್ಕೂ ಪ್ರೇಕ್ಷಕರು ಹರ್ಷೋದ್ಗಾರದ ಮೂಲಕ ಬೆಂಬಲ ನೀಡುತ್ತಿದ್ದರು. ನನಗಿನ್ನೂ ಆ ಕ್ಷಣಗಳು ನೆನಪಿವೆ, ಆ ಕ್ಷಣಗಳನ್ನು ಇನ್ನೂ ಅನುಭವಿಸುತ್ತಿವೆ’ ಎಂದು ದ್ರಾವಿಡ್ ಮೆಲುಕು ಹಾಕಿದ್ದಾರೆ.

    ‘ಅಂದು ಈಡನ್ ಗಾರ್ಡನ್ಸ್ ಮೈದಾನದಲ್ಲಿದ್ದ ವಾತಾವರಣದಲ್ಲಿ ಎಂದೂ ಮರೆಯಲು ಸಾಧ್ಯವಿಲ್ಲ. ಅಂಥ ಅನುಭವ ಎಲ್ಲ ಕ್ರಿಕೆಟಿಗರಿಗೂ ವೃತ್ತಿಜೀವನದಲ್ಲಿ ಸಿಗಬೇಕೆಂದು ಬಯಸುತ್ತೇನೆ. ಕಿಕ್ಕಿರಿದು ತುಂಬಿದ ಕ್ರೀಡಾಂಗಣದಲ್ಲಿ ಆಡುವುದು ಅಪಾರ ಶಕ್ತಿ ತುಂಬುತ್ತದೆ. ಡ್ರೆಸ್ಸಿಂಗ್ ರೂಮ್ ಮತ್ತು ಮೈದಾನದಲ್ಲೂ ವಿಶೇಷವಾದ ಸಂಚಲನವಿತ್ತು’ ಎಂದು ದ್ರಾವಿಡ್ ವಿವರಿಸಿದ್ದಾರೆ.

    ಹೇಗಿತ್ತು ಆ ಐತಿಹಾಸಿಕ ಪಂದ್ಯ?

    2001ರ ಕೋಲ್ಕತ ಟೆಸ್ಟ್ ಗೆಲುವಿಗೆ ದ್ರಾವಿಡ್ ಹೇಳಿದ ಕಾರಣವೇನು?
    2001ರ ಮಾರ್ಚ್ 11ರಿಂದ 15ರವರೆಗೆ ಕೋಲ್ಕತದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದಿದ್ದ ಈ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ಗೆ ಇಳಿದಿದ್ದ ಪ್ರವಾಸಿ ಆಸ್ಟ್ರೇಲಿಯಾ ತಂಡ ನಾಯಕ ಸ್ಟೀವ್ ವಾ (110) ಶತಕದ ಬಲದಿಂದ 445 ರನ್ ಪೇರಿಸಿತ್ತು. ಪ್ರತಿಯಾಗಿ ಭಾರತ ತಂಡ 171 ರನ್‌ಗೆ ಆಲೌಟ್ ಆಗಿ 274 ರನ್‌ಗಳ ಭಾರಿ ಹಿನ್ನಡೆಯೊಂದಿಗೆ ಾಲೋಆನ್‌ಗೆ ಸಿಲುಕಿತ್ತು. ಸೌರವ್ ಗಂಗೂಲಿ ಸಾರಥ್ಯದ ಭಾರತ ತಂಡ 2ನೇ ಇನಿಂಗ್ಸ್ ಆರಂಭಿಸಿದಾಗ 3ನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಆಡಿದ್ದ ವಿವಿಎಸ್ ಲಕ್ಷ್ಮಣ್, ದ್ರಾವಿಡ್ ಜತೆಗೆ 5ನೇ ವಿಕೆಟ್‌ಗೆ 331 ರನ್‌ಗಳ ಭರ್ಜರಿ ಜತೆಯಾಟವಾಡಿ ಪಂದ್ಯದ ಚಿತ್ರಣವನ್ನೇ ಬದಲಾಯಿಸಿದ್ದರು. ಸಮರ್ಥ ಬೆಂಬಲ ನೀಡಿದ್ದ ದ್ರಾವಿಡ್ 180 ರನ್ ಬಾರಿಸಿದ್ದರು.

    ಇದನ್ನೂ ಓದಿ: VIDEO: ರಾಷ್ಟ್ರೀಯ ತಂಡಕ್ಕೆ ಹೋಗಿ ಬಂದ್ಮೇಲೆ ಹೆಸರೇ ಬದಲಾಯ್ತು!

    ಭಾರತ ತಂಡ ಅಂತಿಮ ದಿನದಾಟದಲ್ಲಿ ಬೆಳಗ್ಗೆ 7 ವಿಕೆಟ್‌ಗೆ 657 ರನ್ ಪೇರಿಸಿ ಡಿಕ್ಲೇರ್ ಮಾಡಿಕೊಂಡಿತು. ಇದರಿಂದ ಗೆಲುವಿಗೆ 384 ರನ್‌ಗಳ ಕಠಿಣ ಸವಾಲು ಪಡೆದಿದ್ದ ಆಸ್ಟ್ರೇಲಿಯಾ ತಂಡ, 2ನೇ ಇನಿಂಗ್ಸ್‌ನಲ್ಲಿ ಹರ್ಭಜನ್ ಸಿಂಗ್ (73ಕ್ಕೆ 6) ಮಾರಕ ದಾಳಿಗೆ ಕುಸಿದು 212 ರನ್‌ಗಳಿಗೆ ಆಲೌಟ್ ಆಗಿತ್ತು. ಅಂತಿಮ ದಿನ ಚಹಾ ವಿರಾಮದ ವೇಳೆಗೆ ಆಸೀಸ್ 3 ವಿಕೆಟ್‌ಗೆ 161 ರನ್ ಗಳಿಸಿ ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಹಾದಿಯಲ್ಲಿತ್ತು. ಆದರೆ ಅಂತಿಮ ಅವಧಿಯ ಆಟದಲ್ಲಿ 46 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ದಿಢೀರ್ ಕುಸಿತ ಕಂಡಿದ್ದ ಆಸೀಸ್, 171 ರನ್‌ಗಳಿಂದ ಭಾರತಕ್ಕೆ ಶರಣಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts